ಕೇಂದ್ರ ಬಜೆಟ್ 2022: ಕಿತ್ತಳೆ, ಕೆಂಗಂದು ಮಿಶ್ರಿತ ಕೈಮಗ್ಗದ ಸೀರೆ ಧರಿಸಿದ ನಿರ್ಮಲಾ
ನವದೆಹಲಿ, ಫೆಬ್ರವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ನಾಲ್ಕನೇ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ಎರಡನೇ ಕಾಗದ ರಹಿತ ಬಜೆಟ್ ಇದಾಗಿದೆ. ಭಾರತದ ಬಜೆಟ್ ಬಗ್ಗೆ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.
ಕೋವಿಡ್‌ನಿಂದಾಗಿ ಈ ಬಾರಿ ಬಜೆಟ್ ಮಂಡನೆಯ ಸ್ವರೂಪದಲ್ಲಿಬದಲಾವಣೆ ಆಗಿದೆ. ಮೊತ್ತ ಮೊದಲ ಬಾರಿಗೆ ಬಜೆಟ್ ಮುದ್ರಣಗೊಳ್ಳುತ್ತಿಲ್ಲ. ಬದಲಾಗಿ, ಅದೇ ವೇಳೆಗೆ ಸರಿಯಾಗಿ ಕೇಂದ್ರ ಸರಕಾರದ 'ಯೂನಿಯನ್ ಬಜೆಟ್' ಆ್ಯಪ್‌ನಲ್ಲಿಸಂಸತ್ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಲಿದೆ.
ನಿರ್ಮಲಾ ಸೀತಾರಾಮನ್ ಈ ಬಾರಿ ಕೇಸರಿ ಹಾಗೂ ಕೆಂಗಂದು ಬಣ್ಣ ಮಿಶ್ರಿತ ಕೈಮಗ್ಗದ ಸೀರೆಯನ್ನು ಧರಿಸಿದ್ದಾರೆ. ಕೇಂದ್ರ ಬಜೆಟ್ ಮಂಡನೆಗಾಗಿ ನಿರ್ಮಲಾ ಸೀತಾರಾಮನ್ ಅವರು ಕಿತ್ತಳೆ ಹಾಗೂ ಕೆಂಗಂದು ಬಣ್ಣದ ರೇಷ್ಮೆಯ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದಾರೆ, ಪಲ್ಲು ಮೇಲೆ ಇಕಾತ್ ಮಾದರಿಯ ಅಚ್ಚು ಒತ್ತಲಾಗಿದೆ, ಗೋಲ್ಡನ್ ಕಲರ್ ಬಾರ್ಡರ್ ಇದೆ.

2021ರಲ್ಲಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮೂರನೇ ಬಜೆಟ್‌ನ್‌ನಲ್ಲಿ ಕೆಂಪು ಬಣ್ಣದ ಸೀರೆ ಧರಿಸಿದ್ದರು.
ಕೇಂದ್ರ ಬಜೆಟ್ 2022 ಹೈಲೈಟ್ಸ್:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಬಜೆಟ್ನ ಅತಿಮುಖ್ಯ ಅಂಶಗಳು ಇವು:
1) ಪಿಎಂ ಗತಿಶಕ್ತಿ.
2) ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ.
3) ಉತ್ಪಾದಕತೆಯ ವೃದ್ಧಿ.
4) ಅವಕಾಶಗಳ ಹೆಚ್ಚಳ.
5) ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ.
6) ಪರಿಸರ ಸಂರಕ್ಷಣೆ.
7) ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು.
ಕೊರೊನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮಾಡಲಾಗುವುದು ಒನ್ ಕ್ಲಾಸ್, ಒನ್ ಟಿವಿ ಚಾನಲ್ ಮಾಡಲಾಗುವುದು ಅಂತ ಸಚಿವೆ ತಿಳಿಸಿದ್ದಾರೆ.
ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಕೇಂದ್ರ ಕ್ರಮಕೈಗೊಂಡಿದೆ. 50 ಸಾವಿರ ಕೋಟಿಯಿಂದ 5 ಲಕ್ಷ ಕೋಟಿ ವಹಿವಾಟಿಗೆ ಸಾಥ್ ನೀಡಿದೆ. ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಸಾಲ ಸೌಲಭ್ಯಕ್ಕೆ ಯೋಚನೆ ಮಾಡಲಾಗುವುದು.
ಕಾವೇರಿ-ಪೆನ್ನಾರ್ ನದಿ ಜೋಡಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ಪೆನ್ನಾರ್-ಕಾವೇರಿ
ನದಿಗಳ ಜೋಡಣೆಗೆ ಗ್ರೀನ್ ಸಿಗ್ನಲ್ ದೊರಕಿದೆ. ಕೆನ್-ಬೆಟ್ವಾ ಜೋಡಣೆ ಯೋಜನೆಯನ್ನು ₹ 44,605 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆ ಜಾರಿಯಾದರೆ 9 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.
ಆರ್ಥಿಕ ಪ್ರಗತಿಗೆ ಅತ್ಯಗತ್ಯವಾಗಿ ಬೇಕಿರುವ ಕಾರ್ಗೊ ಟರ್ಮಿನಲ್ಗಳ ನಿರ್ಮಾಣಕ್ಕೆ ಸರ್ಕಾರ ಒತ್ತು ನೀಡಿದೆ. ಮುಂದಿನ ಮೂರು ವರ್ಷಗಳಲ್ಲಿ ಪಿಎಂ ಗತಿಶಕ್ತಿ ಯೋಜನೆಯಡಿ 100 ಕಾರ್ಗೋ ಟರ್ಮಿನಲ್ಗಳನ್ನು ನಿರ್ಮಿಸಲಾಗುವುದು ಎಂದು ಸಚಿವೆ ನಿರ್ಮಲಾ ತಿಳಿಸಿದರು.
3 ವರ್ಷದಲ್ಲಿ 100 ಕಾರ್ಗೋ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಪಿಎಂ ಗತಿ ಶಕ್ತಿ ಯೋಜನೆಯಡಿ ಟರ್ಮಿನಲ್ ನಿರ್ಮಾಣ ಮಾಡಲಾಗುವುದು.
ಮುಂದಿನ ಆರ್ಥಿಕ ವರ್ಷದಲ್ಲಿ (2022-23) ದೇಶದಲ್ಲಿ ಒಟ್ಟು 25 ಸಾವಿರ ಕಿಮೀ ಉದ್ದದಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ರೈತರಿಗಾಗಿ 'ಒನ್ ಸ್ಟೇಷನ್ ಒನ್ ಪ್ರಾಡಕ್ಟ್' ಯೋಜನೆ ಅನುಷ್ಠಾನಗೊಳಿಸಲಾಗುವುದು. ನಾಲ್ಕು ಸ್ಥಳಗಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪಿಸಲಾಗುವುದು.
ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ.
ಈಗಾಗಲೇ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ಮಾತನಾಡಿದ ಸಚಿವೆ ನಿರ್ಮಲಾ, 14 ಕ್ಷೇತ್ರಗಳ ಪಿಎಲ್‌ಐಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.
2022ರಲ್ಲಿ ಆರ್ಥಿಕತೆ ಶೇ.9.2ರಷ್ಟು ಬೆಳವಣಿಗೆಯಾಗಲಿದೆ. ಎಲ್ಲ ಅವಕಾಶ ಬಳಸಿಕೊಂಡು ಬಡವರಿಗೆ ಸಹಾಯ ಮಾಡಲಾಗುವುದು. ಕಳೆದ ವರ್ಷದ ಬಜೆಟ್ ಘೋಷಣೆಯಿಂದ ಪ್ರಗತಿಯಾಗಿದೆ. ಸದ್ಯದಲ್ಲೇ ಎಲ್‌ಐಸಿಯಿಂದ ಐಪಿಒ ಬಿಡುಗಡೆ ಮಾಡಲಾಗುವುದು. ಮುಂದಿನ 25 ವರ್ಷ ಗುರಿಯಾಗಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗುವುದು ಅಂತ ನಿರ್ಮಲಾ ಹೇಳಿದರು.












Click it and Unblock the Notifications