• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಫೇಲ್ ಉತ್ಪಾದನಾ ನೆಲೆಗೆ ನುಗ್ಗಲು ಅಪರಿಚಿತರ ಪ್ರಯತ್ನ

|

ನವದೆಹಲಿ, ಮೇ 22: ಫ್ರಾನ್ಸ್‌ನಲ್ಲಿರುವ ಭಾರತೀಯ ರಫೇಲ್ ಪ್ರಾಜೆಕ್ಟ್ ವ್ಯವಸ್ಥಾಪಕ ತಂಡದ ನೆಲೆಯೊಳಗೆ ಅಪರಿಚಿತರು ನುಗ್ಗಲು ಪ್ರಯತ್ನಿಸಿದ ಘಟನೆ ನಡೆದಿದೆ.

ರಫೇಲ್ ಡೀಲ್: ಕೋರ್ಟ್ ಮುಂದೆ ಯಾರು, ಏನು ಹೇಳಿದರು?

ಪ್ಯಾರಿಸ್‌ನ ಉಪನಗರವೊಂದರಲ್ಲಿ ಭಾರತೀಯ ವಾಯುಪಡೆಯ ರಫೇಲ್ ಪ್ರಾಜೆಕ್ಟ್‌ನ ಮ್ಯಾನೇಜ್‌ಮೆಂಟ್ ತಂಡ ಇರುವ ಸ್ಥಳಕ್ಕೆ ನುಗ್ಗಲು ಭಾನುವಾರ ರಾತ್ರಿ ಪ್ರಯತ್ನಿಸಲಾಗಿತ್ತು ಎಂದು ವರದಿಯಾಗಿದೆ. ಭಾರತಕ್ಕಾಗಿ 36 ರಫೇಲ್ ಯುದ್ಧ ವಿಮಾನಗಳನ್ನು ತಯಾರಿಸುತ್ತಿರುವ ಡಸಾಲ್ಟ್ ಏವಿಯೇಷನ್‌ನ ಚಟುವಟಿಕೆ ಮತ್ತು ಭಾರತೀಯ ಸಿಬ್ಬಂದಿಗೆ ಅಲ್ಲಿ ನೀಡಲಾಗುತ್ತಿರುವ ತರಬೇತಿಯನ್ನು ಪರಿಶೀಲನೆ ನಡೆಸಲು ಗ್ರೂಪ್ ಕ್ಯಾಪ್ಟನ್ ಶ್ರೇಣಿ ಅಧಿಕಾರಿಯ ಭಾರತೀಯ ತಂಡವು ಫ್ರಾನ್ಸ್‌ನಲ್ಲಿದೆ.

ಭಾನುವಾರ ರಾತ್ರಿ ಯಾರೋ ಅಪರಿಚಿತರು ಈ ಸ್ಥಳದ ಒಳಗೆ ನುಗ್ಗಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ವಾಯುಪಡೆಯಿಂದ ರಕ್ಷಣಾ ಇಲಾಖೆ ಮಾಹಿತಿ ಪಡೆದುಕೊಂಡಿದೆ. ಉಳಿದ ವಿವರಗಳ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.

ತೀವ್ರ ವಿವಾದ ಸೃಷ್ಟಿಸಿರುವ ರಫೇಲ್ ಒಪ್ಪಂದದ ಯೋಜನೆ ಫ್ರಾನ್ಸ್‌ನಲ್ಲಿ ಕಾರ್ಯಗತಗೊಂಡಿದ್ದು, ಭಾರತಕ್ಕೆ 36 ಯುದ್ಧ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್ ತಯಾರಿಸಿ ಕೊಡುತ್ತಿದೆ. ಸುಮಾರು 58 ಸಾವಿರ ಕೋಟಿ ರೂ. ವೆಚ್ಚದ ಈ ಒಪ್ಪಂದದಂತೆ ಭಾರತಕ್ಕೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಯುದ್ಧ ವಿಮಾನಗಳು ಸಿಗಲಿವೆ.

English summary
A group of unidentified individuals attempted to break into the facility of the Indian Air Force Rafale Project Management team on Sunday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X