HMPV Virus: ಮಹಾಮಾರಿ HMPV ಚಿಕಿತ್ಸೆ ಹೇಗೆ? ಇಲ್ಲಿದೆ ಮಾಹಿತಿ
2020ರ ಸಮಯದಲ್ಲಿ ಕೊರೊನಾ ಕಂಟಕ ಅಪ್ಪಳಿಸಿ ಇಡೀ ಜಗತ್ತು ನಲುಗಿ ಹೋಗಿತ್ತು, ಆ ಬಳಿಕ ಲಕ್ಷ ಲಕ್ಷ ಜನರು ಜೀವ ಕಳೆದುಕೊಂಡು ನರಳಿದರು. ಹೀಗೆ ಕೊರೊನಾ ಅನ್ನೋ ಪದ ಕೇಳಿದರೆ ಸಾಕು ಮನುಷ್ಯರು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗ ಮತ್ತೆ ಕೊರೊನಾ ರೀತಿಯಲ್ಲೇ ಹೊಸ ವೈರಸ್ ಒಂದು ಮಾನವ ಕುಲದ ನೆಮ್ಮದಿ ಕೆಡಿಸಿದೆ. ಈಗ ಇಡೀ ಚೀನಾ ನಲುಗಿದ್ದು, ಮಹಾಮಾರಿ HMPV ವೈರಸ್‌ಗೆ ಚಿಕಿತ್ಸೆ ಹೇಗೆ ನೀಡಲಾಗುತ್ತೆ?
HMPV ವೈರಸ್ ಕಾಟ ಶುರುವಾದ ನಂತರ ಜಗತ್ತಿನಾದ್ಯಂತ ಭಯದ ವಾತಾವರಣ ಶುರುವಾಗಿ, ಮತ್ತೊಮ್ಮೆ ಲಾಕ್‌ಡೌನ್ ಆಗುವ ಭಯದಲ್ಲೇ ಜನರು ನರಳುತ್ತಿದ್ದಾರೆ. ಇದು ಒಂದು ಕಡೆ, ಹಾಗೇ ಇನ್ನೊಂದು ಕಡೆ ಹೊಸ ರೋಗ ನಿಯಂತ್ರಣ ಹೇಗೆ ಅಂತಾ ಜನರು ಕೂಡ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡು ಪರದಾಡುತ್ತಿದ್ದಾರೆ. ಹಾಗಿದ್ರೆ HMPV ವೈರಸ್‌ಗೆ ಚಿಕಿತ್ಸೆ ಪಡೆಯುವುದು ಹೇಗೆ ಗೊತ್ತಾ? ಯಾವ ರೀತಿ ರೋಗ ಕಂಡು ಹಿಡೀತಾರೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಮಹಾಮಾರಿ HMPV ಚಿಕಿತ್ಸೆ ಹೇಗೆ?
ಕೊರೊನಾ ರೀತಿಯೇ ಹ್ಯೂಮನ್ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಕೂಡ ಮನುಷ್ಯರಿಗೆ ಹಲವು ರೀತಿ ಆರೋಗ್ಯ ಸಮಸ್ಯೆ ತಂದಿಡುತ್ತದೆ. ಹೀಗಾಗಿ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಬಗ್ಗೆ ಭಯದ ವಾತಾವರಣ ನಿರ್ಮಾಣ ಆಗಿದೆ. ಇದೀಗ ವೈದ್ಯರು ಕೂಡ ಅಗತ್ಯ ಮುನ್ನೆಚ್ಚರಿಕೆ ವಹಿಸಿದ್ದಾರೆ. HMPV ಕಂಡುಹಿಡಿಯಲು ಪಾಲಿಮರೇಸ್ ಚೈನ್ ರಿಯಾಕ್ಷನ್ ಅಥವಾ PCR ಟೆಸ್ಟ್ ಮಾಡಲಾಗುತ್ತದೆ. ಇದರ ಜೊತೆಗೆ ಗಂಟಲಿನ ದ್ರಾವಣ ಪಡೆದು ವೈರಸ್ ಇರುವಿಕೆಯನ್ನ ಪತ್ತೆ ಮಾಡಲಾಗುತ್ತದೆ.
ಇನ್ನು HMPV ರೋಗಕ್ಕೆ ಯಾವುದೇ ವಿಶೇಷ ಚಿಕಿತ್ಸಾ ವಿಧಾನ ಇಲ್ಲ, ಹೀಗಾಗಿ ಸಾಮಾನ್ಯ ಜ್ವರ & ಕೆಮ್ಮು ರೀತಿಯೇ ಔಷಧ ನೀಡಿ ಚಿಕಿತ್ಸೆ ನೀಡಲಾಗುತ್ತದೆ. ಮತ್ತೊಂದು ಕಡೆ ಸುಲಭವಾಗಿ ಈ ವೈರಸ್ ಹರಡುವ ಭಯ ಇರುವ ಕಾರಣಕ್ಕೆ ಸಾಕಷ್ಟು ಆತಂಕ ಇದೀಗ ಶುರುವಾಗಿದೆ.
ಚೀನಾ ನೆಲದಲ್ಲಿ ಆರೋಗ್ಯ ತುರ್ತು ಸ್ಥಿತಿ!
ಹೌದು, ಚೀನಾ ನೆಲದಲ್ಲಿ ಕೊರೊನಾ ರೀತಿ ಪರಿಸ್ಥಿತಿ ಇದೀಗ ಮತ್ತೆ ನಿರ್ಮಾಣ ಆಗಿದೆ. ಆ ರೀತಿ ನೋಡುವುದಾದರೆ ಇದು ಕೊರೊನಾ ಮೀರಿಸುವ ಪರಿಸ್ಥಿತಿ ಅಂತಾ ಹೇಳಲಾಗುತ್ತಿದೆ. ಈ ಕಾರಣಕ್ಕೆ ಜನರು ಕೂಡ ನಲುಗಿ ಹೋಗಿದ್ದು, ಇದೀಗ ಹ್ಯೂಮನ್ ಮೆಟಾಫೆನೋಮೋ ವೈರಸ್ ಹಾವಳಿ ಹಿನ್ನೆಲೆ ಚೀನಾ ನೆಲದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಈ ಘಟನೆ ಬೆನ್ನಲ್ಲೇ ಕೊರೊನಾ ರೀತಿ ಮತ್ತೆ ಲಾಕ್ಡೌನ್ ಘೋಷಣೆ ಮಾಡ್ತಾರಾ? ಎಂಬ ಭಯ ಕೂಡ ಜಗತ್ತಿನಾದ್ಯಂತ ಕಾಡುತ್ತಿದೆ.












Click it and Unblock the Notifications