Aadhaar Card: ಆಧಾರ್ ಬಗೆಗಿನ 3 ಹೊಸ ನಿಯಮ, ಕೊನೆ ಘಳಿಗೆಯಲ್ಲಿ ಪರದಾಡಬೇಡಿ..!
Aadhaar Card update news: ಭಾರತದಲ್ಲಿ ಆಧಾರ್ ಕಾರ್ಡ್ ಬಹುತೇಕ ಎಲ್ಲ ವ್ಯವಹಾರಗಳಿಗೆ, ಪ್ರಮುಖ ಗುರುತಿನ ಚೀಟಿಯಾಗಿ ಪರಿಗಣಿಸಲಾಗಿದೆ. ಈ ಆಧಾರ್ ಕಾರ್ಡ್ ನವೀಕರಣ/ಅಪ್ಡೇಟ್ ಅನ್ನು ಮತ್ತಷ್ಟು ಸರಳಗೊಳಿಸಿರುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದೇ ನವೆಂಬರ್‌ನಿಂದ ಮೂರು ಹೊಸ ನಿಯಮ ಜಾರಿಗೆ ತಂದಿದೆ. ಇದರಿಂದ ಸಾರ್ವಜನಿಕರು ತೊಂದರೆ ಇಲ್ಲದೇ, ಕಚೇರಿಗಳಿಗೆ ಅಲೆಯದೇ ಕೂತಲ್ಲಿಯೇ ಆಧಾರ ಕರೆಕ್ಷನ್ ಮಾಡಬಹುದಾಗಿದೆ.
ಆಧಾರ್ ಕಾರ್ಡ್ ಹೊಂದಿರುವವರು ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಬದಲಾಯಿಸಲು ಅವಕಾಶ ನೀಡಲಾಗಿದೆ. ಜನರು ಡಿಜಿಟಲ್ ಸೇವೆಗಾಗಿ ಭೌತಿಕ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡುವುದು ತಪ್ಪುತ್ತದೆ. ನೀವು ಭೌತಿಕವಾಗಿ ಖುದ್ದು ಭೇಟಿ ನೀಡಿ ಆಧಾರ್ ಕರೆಕ್ಷನ್ ಮಾಡಿಸುವ ಅವಶ್ಯಕತೆ ಇರುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ. ಈ ಹೊಸ ನಿಯಮ ನವೆಂಬರ್ 1ರಿಂದಲೇ ಜಾರಿಗೆ ಬಂದಿದೆ. ಈ ಕೆಳಗಿನ ಮೂರು ನಿಯಮಗಳೂ ಸೇವೆಯನ್ನು ಬಳಕೆದಾರ ಸ್ನೇಹಿಯಾಗಿವೆ ಮಾಡಿವೆ.

ಆಧಾರ್ ಅಪ್ಡೇಟ್ಸ್ ಸರಳೀಕರಣ
ಆಧಾರ್ ಹೊಂದಿರುವವರು ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆ ಇನ್ನಿತರ ವೈಯಕ್ತಿಕ ವಿವರಗಳನ್ನು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿಯೇ ಕೂತಲ್ಲೆ ಬದಲಾಯಿಸಬಹುದು, ಅಪ್ಡೇಟ್ ಮಾಡಬಹುದು. ಈ ಪ್ರಕ್ರಿಯೆ ಪಾನ್ ಕಾರ್ಡ್, ಪಾಸ್‌ಪೋರ್ಟ್ ಜೊತೆಗೆ ಲಿಂಕ್ ಮಾಡಲಾದ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸುತ್ತದೆ. ಕಚೇರಿಗೆ ಅಲೆಯುವುದನ್ನು ತಪ್ಪಿಸುತ್ತದೆ. ನೀವೇನಾದರು ಬೆರಳ ಗುರುತು (ಫಿಂಗರ್‌ಪ್ರಿಂಟ್), ಐರಿಸ್ ಸ್ಕ್ಯಾನ್‌ಗಳು, ಫೋಟೋ ಬದಲಾಯಿಸಬೇಕಾದರೆ ಮಾತ್ರವೇ ಅಧಿಕೃತ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಿದೆ.
ಆಧಾರ್ ಬದಲಾವಣೆಗಳಿಗೆ ಹೊಸ ಶುಲ್ಕ
UIDAI ಆಧಾರ್ ಕರಕ್ಷನ್ ಹೊಸ ಶುಲ್ಕವನ್ನು ಪರಿಚಯಿಸಿದೆ. ವಿವರ ಬದಲಾವಣೆಗೆ ರೂ. 75 ವೆಚ್ಚ, ಆದರೆ ಬಯೋಮೆಟ್ರಿಕ್ ಅಪ್ಡೇಟ್‌ಗೆ 125 ರೂಪಾಯಿ ಶುಲ್ಕ, ಆನ್‌ಲೈನ್ ದಾಖಲೆ ನವೀಕರಣಕ್ಕೆ 2026 ರ ಜೂನ್ 14ವರೆಗೆ ಉಚಿತವಾಗಿದೆ. ಬಳಿಕ ಶುಲ್ಕ ಅನ್ವಯವಾಗುತ್ತದೆ. 5-7 ರಿಂದ 15-17 ವರ್ಷ ವಯಸ್ಸಿನ ಮಕ್ಕಳು ಉಚಿತ ಬಯೋಮೆಟ್ರಿಕ್ ಅಪ್ಡೇಟ್‌ಗೆ ಅವಕಾಶ ಇದೆ.
ಆಧಾರ್‌ಗೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯ
ನಿಮ್ಮ ಪಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದರೆ 2026 ಜನವರಿಯಿಂದ ತಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುವ ಸಾಧ್ಯತೆ ಇದೆ. 2025 ಡಿಸೆಂಬರ್ 31ರೊಳಗೆ ಎರಡೂ ಗುರುತಿನ ಚೀಟಿಗಳನ್ನು ಲಿಂಕ್ ಮಾಡಬೇಕು. ಬ್ಯಾಂಕ್, ಇತರ ಹಣಕಾಸು ಸಂಸ್ಥೆಗಳು OTP, ವೀಡಿಯೊ ಕರೆಗಳು ಹಾಗೂ ವೈಯಕ್ತಿಕ ಆಧಾರ್ ದೃಢೀಕರಣ ಮೂಲಕ ಸರಳವಾಗಿ ಇ-ಕೆವೈಸಿ ಆಯ್ಕೆ ಅನುಸರಿಸುವಂತೆ ತಿಳಿಸಲಾಗಿದೆ. ಈ ಎಲ್ಲ ನಿಯಮಗಳು ಕಳೆದ ನವೆಂಬರ್ 1ರಿಂದ ಜಾರಿಗೆ ಬಂದಿವೆ. ಹೆಚ್ಚಿನ ಮಾಹಿತಿಗೆ ಆನ್‌ಲೈನ್‌ನಲ್ಲಿ ಪರಿಶೀಲಿಸಿ, ಇಲ್ಲವೇ ಅಧಿಕೃತ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.












Click it and Unblock the Notifications