ಅತ್ಯಾಚಾರ ದುರ್ದೈವಿಯಿಂದ ಉಬರ್ ಕಂಪನಿ ಅಧಿಕಾರಿಗಳಿಗೆ ನೋಟಿಸ್

Posted By:
Subscribe to Oneindia Kannada

ನವದೆಹಲಿ, ಜೂನ್ 16: 2014ರಲ್ಲಿ ಉಬರ್ ಕಾರು ಚಾಲಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆಯೊಬ್ಬಳು, ಅತ್ಯಾಚಾರದ ನಂತರ ತಾನು ಪಡೆದ ವೈದ್ಯಕೀಯ ಸಲಹೆ, ಚಿಕಿತ್ಸೆಗಳ ದಾಖಲಾತಿಗಳನ್ನು ಉಬರ್ ಕಂಪನಿಯ ಮುಖ್ಯಸ್ಥರು ಕದ್ದು ಅದನ್ನು ತಮ್ಮ ನಡುವೆ ಹಂಚಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

ಈ ಆರೋಪದ ಜತೆಗೆ ಅವರು ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿದ್ದು, ಉಬರ್ ಕಂಪನಿಯ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

Uber Rape Victim Sues Company for Accessing Medical Records

ಅದರಂತೆ, ಉಬರ್ ಕಂಪನಿಯ ಟ್ರಾವಿಸ್ ಕಲಾನಿಕ್, ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎಮಿಲ್ ಮೈಕಲ್, ಹಾಲಿ ಕಾರ್ಯನಿರ್ವಾಹಕ ಎರಿಕ್ ಅಲೆಕ್ಸಾಂಡರ್ ಅವರ ಮೇಲೆ ಈಗ ಆ ಮಹಿಳೆ ಪ್ರಕರಣ ದಾಖಲಿಸಿದ್ದಾಳೆ.

ಉಬರ್ ಕಂಪನಿಯ ಚಾಲಕನಿಂದ ಅತ್ಯಾಚಾರಕ್ಕೊಳಗಾಗಿ ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ, ಆಸ್ಪತ್ರೆಯಲ್ಲಿದ್ದ ತನ್ನ ವೈದ್ಯಕೀಯ ದಾಖಲೆಗಳ ಪ್ರತಿಯನ್ನು ಲಾಬಿ ಮಾಡಿ ತರಿಸಿಕೊಂಡಿರುವ ಅಲೆಕ್ಸಾಂಡರ್ ಆನಂತರ ಅದನ್ನು ಮೈಕಲ್ ಹಾಗೂ ಟ್ರಾವಿಸ್ ಗೆ ಕಳುಹಿಸಿದ್ದಾರೆಂಬುದು ಮಹಿಳೆಯ ಆರೋಪ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A New Delhi woman sued Uber after it was revealed that an executive accessed and circulated her medical records.
Please Wait while comments are loading...