ಮೋದಿ ಅವರದ್ದು ಯು ಟರ್ನ್ ಸರ್ಕಾರ: ಎಎಪಿ ಆಕ್ರೋಶ

Posted By:
Subscribe to Oneindia Kannada

ಬೆಂಗಳೂರು, ಜೂನ್ 02: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆಯನ್ನು ಏರಿ ಎರಡು ವರ್ಷ ಪೂರೈಸಲಿದೆ. ಆದರೆ, ಮಾನ್ಯ ಪ್ರಧಾನಮಂತ್ರಿಗಳು ಚುನಾವಣೆಗೂ ಮುನ್ನ ದೇಶದ ಜನರಿಗೆ ನೀಡಿದ್ದ ವಾಗ್ದಾನಗಳನ್ನು ಮರೆತಿದ್ದಾರೆ.

ಕಡು ಭ್ರಷ್ಟ ಕಾಂಗ್ರೆಸ್ ನ ಹತ್ತು ವರ್ಷದ ಆಡಳಿತ ಕೊನೆಗೊಳಿಸಿ ದೇಶದ ಜನತೆ ನರೇಂದ್ರ ಮೋದಿಯವರು ನೀಡಿದ್ದ 'ಅಚ್ಛೇ ದಿನ'ದ ಆಶ್ವಾಸನೆಯನ್ನು ನಂಬಿ ಬಿಜೆಪಿಗೆ ಬಹುಮತವನ್ನು ನೀಡಿ ಗೆಲ್ಲಿಸಿದ್ದರು.

ಆದರೆ, ಚುನಾವಣೆ ನಂತರ ನರೇಂದ್ರ ಮೋದಿಯವರಿಗೆ ತಾವು ದೇಶದ ಜನರಿಗೆ ನೀಡಿದ್ದ ಯಾವುದೇ ವಾಗ್ದಾನ ನೆನಪಿಗೆ ಇದ್ದಂತೆ ಕಾಣುತ್ತಿಲ್ಲ. ಅವರ ವಿದೇಶಿ ಪ್ರವಾಸದ ಲೆಕ್ಕಗಳನ್ನು ನೋಡುತ್ತಿದ್ದರೆ, ಅವರು ಭಾರತ ದೇಶವನ್ನೇ ಮರೆತಂತೆ ಕಾಣುತ್ತಿದೆ. ಬಿಜೆಪಿಯ 'ಐಟಿ ತಂಡ'ವನ್ನು ಬಿಟ್ಟರೆ ದೇಶದ ಉಳಿದೆಲ್ಲೂ ಜನರಿಗೆ ಅಚ್ಛೆ ದಿನದ ಯಾವುದೇ ಕುರುಹು ಕಾಣಸಿಗದಾಗಿದೆ. ಎರಡು ವರ್ಷಗಳಿಂದ ಭಾರತ ಹಿಂದೆಂದೂ ಕಂಡಿರದ ಅತ್ಯಂತ ದುರಾಡಳಿತಕ್ಕೆ ಒಳಪಟ್ಟಿದೆ.

ಪ್ರಧಾನಿಯಾದ ಸಮಯದಿಂದ ಇಲ್ಲಿಯವರೆಗೂ ನರೇದ್ರ ಮೋದಿ ಸತತವಾಗಿ ಮನ್ ಕಿ ಬಾತ್, ಚುನಾವಣೆ Rally, ವಿದೇಶಿ ಪ್ರವಾಸಗಳನ್ನು ದೇಶದ ಜನರು ಕೇಳಿದ್ದಾರೆಯೇ ಹೊರತು ಜನರ ದನಿ ಸ್ವಂದಿಸಿದ್ದು, ಭ್ರಷ್ಟಾಚಾರ ರಹಿತ ಆಡಳಿತವನ್ನು ನೀಡಿದ್ದು, ರೈತರ ನೆರವಿಗೆ ನಿಂತಿದನ್ನು ದೇಶದ ಜನ ಇನ್ನೂ ಕಂಡಿಲ್ಲ.

ಅವರು ಜನಪರ ಆಡಳಿತ ನಡೆಸಲು ಪ್ರಧಾನಮಂತ್ರಿಯಾದರೇ? ಅಥವಾ ಸರ್ಕಾರಿ ವೆಚ್ಚದಲ್ಲಿ ಪ್ರವಾಸ ಹಾಗೂ ಬಿಜೆಪಿಯ ಚುನಾವಣಾ ರ್ಯಾಲಿಗಳನ್ನು ಮಾಡಲು ಪ್ರಧಾನಮಂತ್ರಿಯಾದರೇ? ಎಂದು ದೇಶದ ಜನರು ಪ್ರಶ್ನಿಸತೊಡಗಿದ್ದಾರೆ. ಮೋದಿ ಸರ್ಕಾರದ ವೈಫಲ್ಯಗಳ ಬಗ್ಗೆ ಆಮ್ ಆದ್ಮಿ ಪಕ್ಷ ಪಟ್ಟಿ ಮಾಡಿರುವ ಅಂಶಗಳನ್ನು ಮುಂದೆ ಓದಿ...

ಮೋದಿ ಅವರದ್ದು ಯು ಟರ್ನ್ ಸರ್ಕಾರ: ಎಎಪಿ ಆಕ್ರೋಶ

ಮೋದಿ ಅವರದ್ದು ಯು ಟರ್ನ್ ಸರ್ಕಾರ: ಎಎಪಿ ಆಕ್ರೋಶ

* ಭವಿಷ್ಯ ನಿಧಿ ಮೇಲಿನ ಬಡ್ಡಿ ದರವನ್ನು ಇಳಿಸಲು ಹೋಗಿದ್ದು, ಭವಿಷ್ಯ ನಿಧಿ ಹಿಂಪಡೆಯುವುದರ ಮೇಲೆ ನಿರ್ಬಂಧಗಳನ್ನು ಹೇರಿದ್ದು ಹಾಗೂ ಭವಿಷ್ಯ ನಿಧಿ ಮೇಲೆಯೇ ತೆರಿಗೆ ಹೇರಲು ಹೊರಟಿದ್ದು ನಂತರದಲ್ಲಿ ದೇಶದ ಜನರ ವಿರೋಧಕ್ಕೆ ಮಣಿದು ಎಲ್ಲವನ್ನು ಹಿಂಪಡೆದಿದ್ದು.
* ಚುನಾವಣಾ ಪೂರ್ವದಲ್ಲಿ ಕಾಶ್ಮೀರ ಪ್ರತ್ಯೇಕವಾದಿಗಳಾದ ಹುರಿಯತ್ ಮುಖಂಡರನ್ನು ತೆಗಳಿ ನಂತರ ಪಿಡಿಪಿಯೊಂದಿಗೆ ಸರ್ಕಾರ ರಚಿಸಿ ಹುರಿಯತ್ ಮುಖಂಡರನ್ನು ಬೆರೆಯವರಲ್ಲ, ಅವರೂ ನಮ್ಮವರೇ ಎಂದು ಮೃದು ಧೋರಣೆ ತೋರಿದ್ದು.

ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ವಿಫಲ

ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ವಿಫಲ

* ಕೆಟ್ಟ ಸಾಲಗಳನ್ನು ಕಡಿಮೆ ಮಾಡುವುದರ ಬದಲು ಏರಿಸುತ್ತಾ ಹೋಗಿದ್ದು.
* ಕಳೆದ ಐದು ವರ್ಷದಲ್ಲೇ ಅತ್ಯಂತ ಹೆಚ್ಚು ವ್ಯಾಪಾರ ಕೊರತೆ ಹಾಗೂ ರಫ್ತು ಉತ್ತೇಜನದಲ್ಲಿ ಸೋಲು.
* ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಗಣನೀಯ ಕುಸಿತ.
* ಸುಮಾರು 9 ಸಾವಿರ ಕೋಟಿಗಳಷ್ಟು ಸಾಲ ಹೊತ್ತ ವಿಜಯ್ ಮಲ್ಯರನ್ನು ಸುಲಭವಾಗಿ ದೇಶದಿಂದ ಹೊರ ನಡೆಯಲು ಅವಕಾಶ ಕೊಟ್ಟಿದ್ದು.
* ಕಪ್ಪು ಹಣದ ಬಗ್ಗೆ ಸಾಕಷ್ಟು ಮಾತನಾಡಿದ್ದ ನರೇಂದ್ರ ಮೋದಿಯವರಿಂದ ರಾಷ್ಟ್ರೀಕೃತ ಬ್ಯಾಂಕ್‍ನಿಂದಲೇ ಹಾಂಕ್ ಕಾಂಗ್‍ಗೆ ರವಾನೆಯಾದ 6 ಸಾವಿರ ಕೋಟಿ ಕಪ್ಪುಹಣವನ್ನು ತಡೆಯಲು ಆಗಲಿಲ್ಲ.

ವಿದೇಶಾಂಗ ನೀತಿಯಲ್ಲಿ ವಿಫಲ

ವಿದೇಶಾಂಗ ನೀತಿಯಲ್ಲಿ ವಿಫಲ

* ಪಾಕಿಸ್ತಾನದ ಸೈನಿಕರು ನಮ್ಮ ದೇಶದ ಒಬ್ಬ ಸೈನಿಕನನ್ನು ಕೊಂದರೆ, ಅವರ ಹತ್ತು ಸೈನಿಕರನ್ನು ಸಾಯಿಸುವುದಾಗಿ ಎದೆ ಉಬ್ಬರಿಸಿ ಹೇಳಿದ್ದ ನರೇಂದ್ರ ಮೋದಿಯವರು, * ಪಾಕಿಸ್ತಾನದ ಪ್ರಧಾನ ಮಂತ್ರಿಯ ಹುಟ್ಟುಹಬ್ಬಕ್ಕೆ ಅವರ ಮನೆಗೆ ತೆರಳಿ ಕೇಕ್ ಕತ್ತರಿಸುತ್ತಾರೆ, ಆದರೂ ಪಠಾಣ್‍ಕೋಟ್ ದಾಳಿಯನ್ನು ತಡೆಯಲು ಆಗಲಿಲ್ಲ. ನಂತರವೂ ಪಾಕಿಸ್ತಾನದ ಧಿಮಾಕಿಗೆ ಉತ್ತರ ನೀಡಲಾಗದೆ, ಸೋತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಅವಮಾನ ಎದುರಿಸಬೇಕಾಯಿತು.
* ಇಟಲಿಯ ಮರೀನ್ಸ್ ಕೇಸ್‍ನಲ್ಲಿ ಭಾರತೀಯ ಮೀನುಗಾರರನ್ನು ಕೊಂದಿದ್ದರೂ ಇಟಲಿಯ ನೌಕಾಧಿಕಾರಿಗಳನ್ನು ಸ್ವದೇಶಕ್ಕೆ ವಾಪಾಸ್ ಕಳುಹಿಸಿದ್ದು.
* ಚೀನಾದೊಂದಿಗೆ ಸಂಪರ್ಕ ವೃದ್ಧಿಯಲ್ಲಿ ವಿಫಲ
* ನೇಪಾಳದ ಜೊತೆ ಮೈತ್ರಿ ಕಾಯ್ದುಕೊಳ್ಳುವಲ್ಲಿ ಸೋಲು.

ಪ್ರಜಾಪ್ರಭುತ್ವದ ಕೊಲೆಗೆ ಯತ್ನ

ಪ್ರಜಾಪ್ರಭುತ್ವದ ಕೊಲೆಗೆ ಯತ್ನ

* ಅರುಣಾಚಲ ಪ್ರದೇಶದಲ್ಲಿ ಆಪರೇಷನ್ ಕಮಲದ ರೀತಿಯ ಕಾರ್ಯಚರಣೆ ನಡೆಸಿ, ಕಾಂಗ್ರೆಸ್ ಬಂಡಾಯ ಶಾಸಕರೊಡನೆ ಸೇರಿ ಬಿಜೆಪಿ ಸರ್ಕಾರ ರಚಿಸಿದ್ದು.
* ಕೇಂದ್ರ ಸರ್ಕಾರ ಉತ್ತರಾಖಂಡದಲ್ಲಿ ಮಧ್ಯ ಪ್ರವೇಶಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಬಲವಂತವಾಗಿ ಹೇರಿದ್ದು.

ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ವಿವೇಕ ರಹಿತ ನಡೆಗಳು

ವಿಶ್ವವಿದ್ಯಾಲಯಗಳಲ್ಲಿ ಸರ್ಕಾರದ ವಿವೇಕ ರಹಿತ ನಡೆಗಳು

* ರೋಹಿತ್ ವೇಮುಲುವಿಗೆ ವಿಶ್ವವಿದ್ಯಾನಿಲಯದಿಂದ ಹೊರಹಾಕಲು ಮಾನವ ಸಂಪನ್ಮೂಲ ಸಚಿವೆ ಹಾಗೂ ಕಾರ್ಮಿಕ ಸಚಿವರು ಸಾಲು ಸಾಲು ಪತ್ರ ಬರೆದು ಅವರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿ ಆತ್ಮಹತ್ಯೆಗೆ ಪ್ರೇರೇಪಿಸಿದ್ದು.
* ಜೆಎನ್‍ಯು ವಿಚಾರದಲ್ಲಿ ದೆಹಲಿ ಪೋಲೀಸ್ ಬಳಸಿ, ಎಬಿವಿಪಿಯ ನಕಲಿ ವಿಡಿಯೋ ಹರಡಿಸಿ ಇಡೀ ವಿದ್ಯಾರ್ಥಿ ಸಮೂಹವನ್ನೇ ಎದುರು ಹಾಕಿಕೊಂಡಿದ್ದು.
* ಅಲಹಾಬಾದ್ ವಿಶ್ವವಿದ್ಯಾಲಯದ ರಿಚಾ ಸಿಂಗ್ ಪ್ರಕರಣ, ಎಫ್‍ಟಿಐಐಗೆ ವಿದ್ಯಾರ್ಥಿಗಳ ವಿರೋಧದ ನಡುವೆಯೂ ಗಜೇಂದ್ರ ಸಿಂಗ್ ನೇಮಕ.

 ನರೇಂದ್ರ ಮೋದಿ ನೀಡಿದ್ದು ತೆರಿಗೆ ದಿನಗಳು

ನರೇಂದ್ರ ಮೋದಿ ನೀಡಿದ್ದು ತೆರಿಗೆ ದಿನಗಳು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ದರ ಕುಡಿಯುವ ನೀರಿಗಿಂತ ಕಡಿಮೆ ದರದಲ್ಲಿ ಲಭ್ಯವಿದ್ದರೂ ಅದರ ಲಾಭವನ್ನು ದೇಶದ ಜನರಿಗೆ ನೀಡದೆ, ತೆರಿಗೆ ಹಣದ ಸಂಗ್ರಹಣೆಯಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ, ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಸುಂಕ ಏರಿಸುತ್ತಾ ಸಾಮಾನ್ಯ ಜನರ ಮೇಲೆ ತೆರಿಗೆ ಬರೆ ಎಳೆಯುತ್ತಲೇ ಇದೆ.

ಅತ್ಯಂತ ವಿವಾದಿತ ಭೂ ಒತ್ತುವರಿ ಕಾಯ್ದೆಯನ್ನು ರೈತರ ಮೇಲೆ ಹೇರಲು ಯತ್ನಿಸಿದ್ದು, ಓಆರ್‍ಓಪಿ ಜಾರಿಗೆ ತರಲು ಮೀನಾಮೇಷ ಎಣಿಸಿ ನಿವೃತ್ತ ಸೈನಿಕರ ಆಕ್ರೋಶಕ್ಕೆ ಗುರಿಯಾಗಿದ್ದು, ರಾಷ್ಟ್ರದೆಲ್ಲೆಡೆ ರೈತರ ಆತ್ಮಹತ್ಯೆ ತಡೆಯಲು ವಿಫಲವಾಗಿದ್ದು, ಇವೆಲ್ಲವೂ ಮೋದಿ ನೇತೃತ್ವದ ಮೋದಿ ಸರ್ಕಾರದ ಸಾಧನೆಗಳು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Narendra Modi led BJP Government is completed two years in office but the PM has forgotten his pre-poll assurances to the people of this country. People voted him to power with a clear majority only on his assurance of "Acche Din" and to end corrupt rule of Congress says AAP, Karnataka.
Please Wait while comments are loading...