ಜಮ್ಮುಕಾಶ್ಮೀರದಲ್ಲಿ ಉಗ್ರರ ದಾಳಿ, ಓರ್ವ ಯೋದ ಹುತಾತ್ಮ

By: ವಿಕಾಸ್ ನಂಜಪ್ಪ
Subscribe to Oneindia Kannada

ಜಮ್ಮುಕಾಶ್ಮೀರ , ನವೆಂಬರ್.29: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾ ಕ್ಯಾಂಪಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು ಒಬ್ಬ ಯೋಧ ಸಾವಿಗೀಡಾಗಿದ್ದು ನಾಲ್ವರಿಗೆ ಗಾಯಗಾಳಾಗಿವೆ.

ಇದು ಜಮ್ಮುವಿನ 20 ಕಿಲೋ ಮೀಟರ್ ವ್ಯಾಪ್ತಿಯ ನಗ್ರೋತ ಪ್ರದೇಶದಲ್ಲಿ ಬೆಳಗ್ಗೆ 5.3೦ಕ್ಕೆ ಭಾರತೀಯ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಸಂಭವಿಸಿ ಇಬ್ಬರಿಗೆ ಗಾಯಗಳಾಗಿವೆ. ಒಬ್ಬ ಯೋಧ ಸಾವಿಗೀಡಾಗಿದ್ದಾರೆ. ಅಲ್ಲದೆ ಒಬ್ಬ ಉಗ್ರನು ಹತನಾಗಿದ್ದಾನೆ.[ಟೂರಿಸಂ ಮೇಲೆ ಟೆರರಿಸಂ, ಟಾರ್ಗೆಟ್ ಕೊಡೈಕೆನಾಲ್ !]

Two soldiers were injured in a terror attack in jammu &kashmir

ಈ ಪ್ರದೇಶದಲ್ಲಿ ಪ್ರಸ್ತುತ ಭಾರತೀಯ ಸೇನೆ ಸುತ್ತುವರೆದಿರುವುದರಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಹಾಗು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಾಹಿತಿಯ ಪ್ರಕಾರ ಮೂರು ಜನರ ಭಯೋತ್ಪಾದಕರ ಗುಂಪಿನಿಂದ ಈ ದಾಳಿ ಸಂಭವಿಸಿದೆ ಎನ್ನಲಾಗಿದೆ.[ದಾಳಿ ಮಾಡಲು ವಾಹನಗಳ ಬಳಕೆ, ಉಗ್ರರ ಹೊಸ ತಂತ್ರ?]

ಈ ಭಯೋತ್ಪಾದಕರು ನಗ್ರೋತದ ಯುದ್ದ ಶಸ್ತಾಸ್ತ್ರಗಳಿರುವ ಡಿಪೋ ಬಳಿ ಯೋಧರಿಗೆ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕ ಕಾರ್ಯಚರಣೆ ನಡೆಯದಂತೆ ತಡೆಯಲು ಪ್ರತ್ಯೇಕ ಯೋಧರನ್ನು ಕರೆಸಿಕೊಳ್ಳಲಾಗಿದೆ.
ಗುಪ್ತಚರ ಇಲಾಖೆ ಹೇಳುವಂತೆ ಈ ಭಯೋತ್ಪಾದಕರು ಫಿಡೈನ್ ಸ್ಕ್ವಾಡ್ ನ ಭಾಗವಾಗಿದ್ದು, ಲಕ್ಷರ್-ಇ- ತೊಯೆಬಾ ಸಂಘಟನೆಯವರೆ ಎಂಬ ಅನುಮಾನ ವ್ಯಕ್ತವಾಗಿದೆ, ಐಬಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two soldiers were injured in a terror attack near an army camp at Nagrota in Jammu and Kashmir. The attack took place at 5.30 AM this morning at Nagrota which is around 20 kilometres away from Jammu. A gun battle is on between the terrorists and the security personnel.
Please Wait while comments are loading...