Two Earthquakes: ಅಂಡಮಾನ್ ನಡುಗುತ್ತಲೇ ಅಫ್ಘಾನಿಸ್ತಾನದಲ್ಲಿ ನಡುಕ- ನಡುರಾತ್ರಿಯಲ್ಲಿ ತತ್ತರಿಸಿದ ಜನ!
ಕಾಬೂಲ್ ಜುಲೈ 10 : ಕಳೆದ ರಾತ್ರಿ ಎರಡು ದೇಶಗಳಲ್ಲಿ ಭೂಕಂಪ ಸಂಭವಿಸಿದೆ. ಅಂಡಮಾನ್‌ನಲ್ಲಿ ಭೂಕಂಪ ಸಂಭವಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದೆ. ಮಧ್ಯರಾತ್ರಿ ಭೂಕಂಪನದಿಂದ ಜನರು ಭಯಭೀತರಾಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಮಧ್ಯರಾತ್ರಿ ಸಾಧಾರಣ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ಆಗ್ನೇಯ ಭಾಗದಲ್ಲಿರುವ ಫೈಜಾಬಾದ್ ಪ್ರದೇಶದಲ್ಲಿ ರಾತ್ರಿ ಸಂಭವಿಸಿದ ಈ ಭೂಕಂಪದಿಂದ ಜನರು ಭಯಭೀತರಾಗಿದ್ದರು. ಭೂಕಂಪ ರಿಕ್ಟರ್ ಮಾಪಕದಲ್ಲಿ 4.4 ರಷ್ಟಿತ್ತು. ಭೂಕಂಪನದಿಂದಾಗಿ ಮನೆಗಳು ಕಂಪಿಸಿದ ಕಾರಣ ಜನರು ನಡು ರಾತ್ರಿ ಮನೆಯಿಂದ ಹೊರಬಂದಿದ್ದಾರೆ. ಗಾಢ ನಿದ್ದೆಯಲ್ಲಿದ್ದ ಜನರು ಏಕಾಏಕಿ ಮನೆಯಿಂದ ಹೊರಬರುತ್ತಿದ್ದ ದೃಶ್ಯಗಳು ವೈರಲ್ ಆಗಿವೆ. ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ನಿನ್ನೆ ಮೊನ್ನೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ ಸಂಭವಿಸಿತ್ತು. ಅಂಡಮಾನ್‌ನ ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ಇದು ಸಂಭವಿಸಿದೆ. ಕ್ಯಾಂಪ್‌ಬೆಲ್ ಕೊಲ್ಲಿಯ ಆಗ್ನೇಯಕ್ಕೆ 162 ಕಿಮೀ ದೂರದಲ್ಲಿ ಭೂಕಂಪನ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.3 ದಾಖಲಾಗಿದೆ.
ಭೂಕಂಪದಿಂದಾಗಿ ಅಲ್ಲಿನ ಹಲವು ಪ್ರಮುಖ ಕಟ್ಟಡಗಳು ನಲುಗಿವೆ. ಇದರಿಂದ ಜನರು ತಕ್ಷಣ ಕಟ್ಟಡಗಳಿಂದ ಹೊರಬಂದು ರಸ್ತೆಗಳಲ್ಲಿ ಆಶ್ರಯ ಪಡೆದರು. ಅಂಡಮಾನ್ ನಲ್ಲಿ ಭೂಕಂಪ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಅಫ್ಘಾನಿಸ್ತಾನದಲ್ಲೂ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ಆಗಾಗ ಸಂಭವಿಸುವ ಭೂಕಂಪಗಳು ಜನರಲ್ಲಿ ಕೊಂಚ ಭೀತಿಯನ್ನುಂಟು ಮಾಡುತ್ತಿವೆ.












Click it and Unblock the Notifications