ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮ ಕುಸಿತಕ್ಕೆ 6 ಸೈನಿಕರ ದಾರುಣ ಅಂತ್ಯ

ಜಮ್ಮು ಮತ್ತು ಕಾಶ್ಮೀರದ ಗೂರೆಜ್ ಪ್ರದೇಶದಲ್ಲಿ ಎರಡು ಸೇನಾ ಕ್ಯಾಂಪುಗಳ ಮೇಲೆ ಹಿಮ ಕುಸಿತ ಸಂಭವಿಸಿದ್ದು, 6 ಜನ ಸಾವನ್ನಪ್ಪಿದ್ದಾರೆ.

By Sachhidananda Acharya
|
Google Oneindia Kannada News

ಬೆಂಗಳೂರು, ಜನವರಿ 26: ಜಮ್ಮು ಮತ್ತು ಕಾಶ್ಮೀರದ ಗೂರೆಜ್ ಪ್ರದೇಶದಲ್ಲಿ ಹಿಮ ಕುಸಿದು 6 ಸೈನಿಕರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಇಲ್ಲಿನ ಎರಡು ಬೇರೆ ಬೇರೆ ಸೇನಾ ಕ್ಯಾಂಪ್ ಮೇಲೆ ಹಿಮದ ಗಡ್ಡೆ ಕುಸಿದು ಬಿದ್ದಿತ್ತು.

ಹಿಮ ಕುಸಿದ ಸುದ್ದಿ ಬರುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ ಹವಮಾನ ವೈಪರೀತ್ಯ ಮತ್ತು ವಿಪರೀತ ಹಿಮಪಾತದಿಂದ ರಕ್ಷಣಾ ಕಾರ್ಯಾಚರಣೆಗೆ ನಿಧಾನವಾಗಿತ್ತು. ಇಂದು ಸೈನಿಕರು ಸ್ಥಳ ತಲುಪುವ ವೇಳೆ 6 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

Two Avalanches In J & K's Gurez, 6 Dead

ಗಂಡೆರ್ಬಾಲ್ ಜಿಲ್ಲೆಯ ಸೊನಮಾರ್ಗ್ ಪ್ರದೇಶದಲ್ಲಿ ನಿನ್ನೆ ರಕ್ಷಣಾ ಕಾರ್ಯಾಚರಣೆ ವೇಳೆ 7 ಸೈನಿಕರು ಜೀವಂತ ಸಿಕ್ಕಿದ್ದರು. ಹಿಮ ಕುಸಿತಕ್ಕೆ ನಿನ್ನೆಯೇ ಓರ್ವ ಮೇಜರ್ ಸಾವನ್ನಪ್ಪಿದ್ದರೆ 4 ಜನ ಗಾಯಗೊಂಡಿದ್ದರು. ಜೀವಂತ ಸಿಕ್ಕವರಿಗೆ ನಂತರ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಮೇಜರ್ ಅಮಿತ್ ಮತ್ತು ಇತರ ನಾಲ್ವರು ಹಿಮದ ಅಡಿಯಲ್ಲೇ ನಿನ್ನೆಯಿಂದ ಸಿಲುಕಿಕೊಂಡಿದ್ದರು. ಇವರಲ್ಲಿ ಈಗಾಗಲೆ 4 ಮೃತ ದೇಹಗಳನ್ನು ಹಿಮದ ಅಡಿಯಿಂದ ಹೊರತೆಗೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಘಟನೆಯಲ್ಲಿ ಕ್ಯಾಂಪ್ ನತ್ತ ತೆರಳಿದ್ದ ಗಸ್ತು ಪಡೆಯ ಮೇಲೆ ಹಿಮ ಕುಸಿದಿದ್ದು ಅವರೆಲ್ಲಾ ನಿನ್ನೆಯಿಂದ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಸೇನೆ ಹುಡುಕಾಟ ನಡೆಸುತ್ತಿದೆ.

ಕಳೆದ ಎರಡು ದಿನದಲ್ಲಿ ಜಮ್ಮು ಮತ್ತು ಕಾಶ್ಮಿರದಾದ್ಯಂತ ಹಲವು ಭಾಗಗಳಲ್ಲಿ ಹಿಮ ಕುಸಿತವಾದ ವರದಿಗಳು ಬಂದಿವೆ. ಬಂಡೀಪೊರ್ ಜಿಲ್ಲೆಯ ಮನೆಯೊಂದು ಹಿಮದಲ್ಲಿ ಮುಳುಗಿದ ಪರಿಣಾಮ ಒಂದೇ ಮನೆಯ ನಾಲ್ವರು ಅಸುನೀಗಿದ್ದಾರೆ.

English summary
After two separate avalanches on an army camp in Jammu and Kashmir's Gurez area, 6 soldiers have been killed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X