ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಷೇಧಿತ ದ್ವೀಪಕ್ಕೆ ಚೌನನ್ನು ಹೋಗಲು ಪ್ರೇರೇಪಿಸಿದ್ದು ಇಬ್ಬರು ಅಮೆರಿಕನ್ನರು

|
Google Oneindia Kannada News

ಪೋರ್ಟ್ ಬ್ಲೇರ್, ಡಿಸೆಂಬರ್ 01 : ನಿಷೇಧಿತ ದ್ವೀಪದಲ್ಲಿ ಸೆಂಟಿಲಿನೀಸ್ ಬುಡಕಟ್ಟು ಜನಾಂಗದವರಿಂದ ಹತ್ಯೆಗೀಡಾದ ಅಮೆರಿಕದ ಜಾನ್ ಅಲೆನ್ ಚೌ(27)ರನ್ನು ಆ ದ್ವೀಪಕ್ಕೆ ಹೋಗಲು ಇಬ್ಬರು ಮಿಷನರಿಗಳು ಉತ್ತೇಜಿಸಿದ್ದರು ಎಂದು ಉನ್ನತ ತನಿಖಾಧಿಕಾರಿಗಳು ಹೇಳಿದ್ದಾರೆ.

ಒಬ್ಬ ಪುರುಷ ಮತ್ತು ಸ್ತ್ರೀ ಇರುವ ಅಮೆರಿಕದ ಮಿಷನರಿಗಳ ಪಾತ್ರವನ್ನು ತನಿಖೆಗೆ ಒಳಪಡಿಸಲಾಗುತ್ತಿದ್ದು, ಅವರು ಚೌನನ್ನು ಆತ ಅಂಡಮಾನ್ ನಿಕೋಬಾರ್ ದ್ವೀಕಕ್ಕೆ ಹೋಗುವ ಮುನ್ನ ಭೇಟಿಯಾಗಿದ್ದರು. ಇದೀಗ ಅವರು ಭಾರತವನ್ನು ತೊರೆದಿದ್ದಾರೆ ಎಂದು ಅಂಡಮಾನಿ ನಿಕೋಬಾರ್ ದ್ವೀಪದ ಪೊಲೀಸ್ ಅಧಿಕಾರಿ ದೀಪೇಂದ್ರ ಪಾಠಕ್ ಅವರು ಎಎಫ್‌ಪಿಗೆ ಹೇಳಿದ್ದಾರೆ.

ಅಂಡಮಾನಿನಲ್ಲಿ ಕೊಲೆಯಾದ ಅಮೆರಿಕದವನ ಡೈರಿಯಲ್ಲಿತ್ತು ಸಾವಿನ ಸೂಚನೆ!ಅಂಡಮಾನಿನಲ್ಲಿ ಕೊಲೆಯಾದ ಅಮೆರಿಕದವನ ಡೈರಿಯಲ್ಲಿತ್ತು ಸಾವಿನ ಸೂಚನೆ!

ನಾಪತ್ತೆಯಾಗಿರುವ ಈ ಇಬ್ಬರು ಕ್ರೈಸ್ತ ಮತ ಪ್ರಚಾರಕರು ಜಾನ್ ಅಲೆನ್ ಚೌನನ್ನು ಆ ದ್ವೀಪಕ್ಕೆ ಹೋಗಲು ಪುಸಲಾಯಿಸಿ, ಅಲ್ಲಿನ ಬುಡಕಟ್ಟು ಜನಾಂಗದವರನ್ನು ಮತಾಂತರ ಮಾಡಲು ಪ್ರೇರೇಪಿಸಿದ್ದರು ಎಂದು ಹೇಳಲಾಗಿದೆ. ಚೌನ ಮೊಬೈಲ್ ಮುಖಾಂತರ ಆ ಇಬ್ಬರು ಅಮೆರಿಕದ ಮತ ಪ್ರಚಾರಕರನ್ನು ತನಿಖಾಧಿಕಾರಿಗಳು ಸಂಪರ್ಕಿಸಿದ್ದಾರೆ. ಅವರು ಯಾರು, ಅವರ ಹೆಸರೇನು ಎಂಬುದನ್ನು ಪೊಲೀಸರು ಹೇಳಿಲ್ಲ.

ಚೌ ದೇಹವನ್ನು ಭೇದಿಸಿದ ಹರಿತ ಬಾಣ

ಚೌ ದೇಹವನ್ನು ಭೇದಿಸಿದ ಹರಿತ ಬಾಣ

ಯಾರ ಸಂಪರ್ಕಕ್ಕೂ ಸಿಗದ, ಯಾರನ್ನೂ ಭೇಟಿಯಾಗಲು ಇಚ್ಛಿಸದ, ಇಂದಿನ ನಾಗರಿಕತೆಯಿಂದ ದೂರವೇ ಇರುವ, ತಮ್ಮದೇ ವಿಶಿಷ್ಟ ಭಾಷೆ ಆಡುವ, ತಮ್ಮದೇ ಸಂಪ್ರದಾಯ ಹೊಂದಿರುವ ಬುಡಕಟ್ಟು ಜನಾಂಗದವರನ್ನು, ಅನುಮತಿ ಇಲ್ಲದೆ ಅಕ್ರಮವಾಗಿ ಭೇಟಿಯಾಗಲು ಚೌ ಯತ್ನಿಸಿದ್ದು ಮುಳುವಾಯಿತು. ನವೆಂಬರ್ 17ರಂದು 27 ವರ್ಷದ ಚೌನನ್ನು ಹರಿತಾದ ಬಾಣಗಳಿಂದ ಸೆಂಟಿಲಿನೀಸ್ ಜನಾಂಗದವರು ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಆತನ ದೇಹವನ್ನು ನೆಲದಲ್ಲಿ ಹೂತುಹಾಕಿದ್ದಾರೆ. ಚೌನ ದೇಹವನ್ನು ಹೊರತೆಗೆಯುವ ಪ್ರಯತ್ನಕ್ಕೂ ಕೈಹಾಕಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಂಡಮಾನಿನಲ್ಲಿ ಹತ್ಯೆಯಾದ ಅಮೆರಿಕನ್ನನ ಶವ ಸಿಗೋದೇ ಅನುಮಾನ!ಅಂಡಮಾನಿನಲ್ಲಿ ಹತ್ಯೆಯಾದ ಅಮೆರಿಕನ್ನನ ಶವ ಸಿಗೋದೇ ಅನುಮಾನ!

ಹೊರಜಗತ್ತಿನ ಸಂಪರ್ಕವೇ ಬೇಡ

ಹೊರಜಗತ್ತಿನ ಸಂಪರ್ಕವೇ ಬೇಡ

ಅವರ ಆರೋಗ್ಯ ಎಷ್ಟು ಸೂಕ್ಷ್ಮವಾಗಿದೆಯೆಂದರೆ, ಬೇರೆ ಮನುಷ್ಯರು ಬಂದರೆ ಸೋಂಕು ತಗುಲಿ ಇಡೀ ಜನಾಂಗವೇ ಸರ್ವನಾಶವಾಗುವ ಸಾಧ್ಯತೆ ಇರುವುದರಿಂದ, ಅವರಿರುವ ಸೆಂಟಿಲಿನೀಸ್ ದ್ವೀಪದಿಂದ 5 ಕಿ.ಮೀ.ವರೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಸುಮಾರು ಹತ್ತುಹನ್ನೆರಡು ಕುಟುಂಬಗಳು ಮಾತ್ರವಿದ್ದು, ಅವರು ಅವರದೇ ಜಗತ್ತಿನಲ್ಲಿ ಸ್ವತಂತ್ರವಾಗಿ ಜೀವಿಸುತ್ತಿದ್ದಾರೆ, ಮೀನು ಮತ್ತು ಹಣ್ಣುಹಂಪಲು ತಿಂದು ಬದುಕುತ್ತಿದ್ದಾರೆ. ಅವರಿಗೆ ತಮ್ಮ ಜಗತ್ತಿನಿಂದ ಹೊರತಾದ ಜನರ ಸಂಪರ್ಕವೇ ಬೇಕಿಲ್ಲ.

ಅಂಡಮಾನ್‌ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ: ನಿಗೂಢವಾಗುತ್ತಿರುವ ಪ್ರಕರಣಅಂಡಮಾನ್‌ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ: ನಿಗೂಢವಾಗುತ್ತಿರುವ ಪ್ರಕರಣ

ಸಹಾಯ ಮಾಡಿದ್ದ ಮೀನುಗಾರರ ಬಂಧನ

ಸಹಾಯ ಮಾಡಿದ್ದ ಮೀನುಗಾರರ ಬಂಧನ

ಚೌನ ದೇಹವನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಅದನ್ನು ಹುಡುಕುವುದು ಕೂಡ ವ್ಯರ್ಥವೆಂಬ ನಿರ್ಧಾರಕ್ಕೆ ಬರಲಾಗಿದೆ. ಇಂಥ ಸಾಹಸಮಯ ಪ್ರಯಾಣವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಚೌನಿಗೆ ಆ ದ್ವೀಪಕ್ಕೆ ಹೋಗಲು ಸಹಾಯ ಮಾಡಿದ್ದ ಆರು ಮೀನುಗಾರರನ್ನು ಪೊಲೀಸರು ಈಗಾಗಲೆ ಬಂಧಿಸಿದ್ದಾರೆ. ಹಣದ ಆಸೆಗಾಗಿ ಇವರು ಇನ್ನೂ ಹಲವಾರು ಜನರಿಗೆ ಆ ದ್ವೀಪಕ್ಕೆ ಹೋಗಲು ಮೀನುಗಾರರು ಸಹಾಯ ಮಾಡುತ್ತಿದ್ದರು. ಆದರೆ, ಯಾರಿಗೂ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಚೌ ಮಾತ್ರ ಈ ಸಾಹಸವನ್ನು ಮಾಡಿದ್ದರು ಮತ್ತು ಅದಕ್ಕಾಗಿ ಜೀವ ತೆತ್ತಿದ್ದಾರೆ.

ಅಂಡಮಾನ್ ನಲ್ಲಿ ಅಮೆರಿಕನ್ ನನ್ನು ಕೊಂದ ನಿಗೂಢ ಬುಡಕಟ್ಟು ಸೆಂಟಿನಿಲೀಸ್ಅಂಡಮಾನ್ ನಲ್ಲಿ ಅಮೆರಿಕನ್ ನನ್ನು ಕೊಂದ ನಿಗೂಢ ಬುಡಕಟ್ಟು ಸೆಂಟಿನಿಲೀಸ್

ಜಾನ್ ಅಲೆನ್ ಚೌ ಹೇಗೆ ಸತ್ತಿರಬಹುದು?

ಜಾನ್ ಅಲೆನ್ ಚೌ ಹೇಗೆ ಸತ್ತಿರಬಹುದು?

ಜಾನ್ ಅಲೆನ್ ಚೌ ಹೇಗೆ ಸತ್ತಿರಬಹುದು, ಯಾವ ಸ್ಥಳದಲ್ಲಿ ಸತ್ತಿರಬಹುದು ಎಂಬುದನ್ನು ಈ ಮೀನುಗಾರರ ಸಹಾಯದಿಂದ ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆ. 2006ರಿಂದೀಚೆಗೆ ಸೆಂಟಿಲಿನೀಸ್ ದ್ವೀಪಕ್ಕೆ ಹೋಗಲು ಯತ್ನಿಸಿದ ಇಬ್ಬರು ಮೀನುಗಾರರನ್ನು ಬುಡಕಟ್ಟು ಜನಾಂಗದವರು ಹತ್ಯೆಗೈದಿದ್ದಾರೆ. ಒಂದು ವಾರದ ನಂತರ ಅವರ ದೇಹಗಳು ಬೀಚ್ ಬಳಿ ಸಿಕ್ಕಿದ್ದವು. ಭಾರೀ ಪ್ರಬಲರಾಗಿರುವ ಸೆಂಟಿಲಿನೀಸ್ ಜನಾಂಗದವರ ತಂಟೆಗೆ ಹೋಗಲು ಯಾರೂ ಹೆದರುತ್ತಾರೆ.

English summary
Andaman and Nicobar police have said that two americans encouraged John Allen Chau, who was killed by tribes, to go to Sentinel island. The investigators are in search of those two Americans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X