ಕೇಜ್ರಿವಾಲ್ ಓಡಿಹೋಗಿದ್ದೇಕೆ? ಟ್ವಿಟ್ಟರ್ ನಲ್ಲಿ ಬಹಿರಂಗ

ಬೆಂಗಳೂರು,ಫೆ.15: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜನ ಸಾಮಾನ್ಯರ ನಾಯಕ ಅರವಿಂದ್ ಕೇಜ್ರಿವಾಲ ಅವರು ತಮ್ಮ ಆಮ್ ಆದ್ಮಿ ಪಡೆಯನ್ನು ಹರ್ಯಾಣದ ಕಡೆಗೆ ಹೊರಳಿಸಿದ್ದಾರೆ.

ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆ, ಕೇಜ್ರಿವಾಲಾ ಅವರು ಅಸೆಂಬ್ಲಿ ಹಾಗೂ ಲೋಕಸಭೆ ಎರಡಕ್ಕೂ ತಯಾರಿ ನಡೆಸಿದ್ದಾರೆ. ಫೆ.23 ರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ, ಆಂದೋಲನ ಹಮ್ಮಿಕೊಂಡಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಅಭಿಯಾನ ನಡೆಸಿ ಮತ್ತೊಮ್ಮೆ ಜನರ ಮನಸ್ಸು ಗೆಲ್ಲುವ ಕನಸು ಹೊತ್ತಿದ್ದಾರೆ.

ಈ ಎಲ್ಲದರ ನಡುವೆ ನಿನ್ನೆ ರಾತ್ರಿ ದೆಹಲಿ ಅಸೆಂಬ್ಲಿಯಲ್ಲಿ ನಡೆದ ಗದ್ದಲ ಸಾಮಾಜಿಕ ಜಾಲ ತಾಣಗಳಲ್ಲಿ ಇನ್ನೂ ಸದ್ದು ಮಾಡುತ್ತಿದೆ. ಅರವಿಂದ್ ಕೇಜ್ರಿವಾಲ ಅವರು ಓಡಿ ಹೋಗಿದ್ದೇಕೆ. ಇಲ್ಲಿದೆ ನೈಜ ಕಾರಣಗಳು ಎನ್ನುವ ಟ್ವೀಟ್ ಜತೆಗೆ ಅರವಿಂದ್ 'ಸ್ಕಾರ್ಪ್ ಧರಿಸಿರುವ ಡ್ರಾಮಾ ಕ್ವೀನ್ ' ಎಂದು ಅನೇಕರು ಜೋಕ್ ಕಟ್ ಮಾಡಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರನ್ನು ಅಸೆಂಬ್ಲಿಯಲ್ಲಿ ಒಂದು ಮಾಡಿದ ಸಾಧನೆಗೈದ ಅರವಿಂದ್ ಗೆ ಕೆಲವರು ಬಹುಪರಾಕ್ ಹೇಳಿದ್ದರೆ, ಇದೇ ಎರಡು ಪಕ್ಷದ ಟೆಕ್ ಸ್ಯಾವಿ ನಾಯಕರು ಟ್ವಿಟ್ಟರ್ ನಲ್ಲಿ ಅರವಿಂದ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿರುವ ಟೀಕೆ ಟಿಪ್ಪಣಿ, ನಗೆ ಚಟಾಕಿಗಳ ಸಂಗ್ರಹ ಇಲ್ಲಿದೆ ತಪ್ಪದೇ ಓದಿ...

ಸುಳ್ಳು ಹೇಳುವುದರಲ್ಲಿ ಕೇಜ್ರಿವಾಲ್ ನಿಷ್ಣಾತ: ಹರ್ಷವರ್ಧನ್

ಸುಳ್ಳು ಹೇಳುವುದರಲ್ಲಿ ಕೇಜ್ರಿವಾಲ್ ನಿಷ್ಣಾತ: ಹರ್ಷವರ್ಧನ್

ಕಾಂಗ್ರೆಸ್ ನಾಟಕ ಮಂಡಳಿಯ ಪ್ರಮುಖ ಪಾತ್ರಧಾರಿ ಅರವಿಂದ್ ಕೇಜ್ರಿವಾಲ್ ಚೆನ್ನಾಗಿ ನಾಟಕವಾಡಿದ್ದಾರೆ. ಸುಳ್ಳು ಹೇಳುವ ಮೂಲಕ ಜನರನ್ನು ಮರಳು ಮಾಡಿದ್ದಾರೆ ಎಂದು ಬಿಜೆಪಿ ನಾಯಕ ಹರ್ಷ ವರ್ಧನ್ ಕಿಡಿಕಾರಿದ್ದಾರೆ.

ಜನತೆಗೆ ಅರವಿಂದ್ ಕರೆ ನೀಡಿದ್ದು ಹೀಗೆ

ಎಲ್ಲರೂ ಒಂದಾಗಿ ಮತ್ತೊಮ್ಮೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸೋಣ ಎಂದು ಜನತೆಗೆ ಅರವಿಂದ್ ಕರೆ

ಅರವಿಂದ್ ಕೇಜ್ರಿವಾಲ್ ಸಾಧನೆಗಳ ಪಟ್ಟಿ

ಅರವಿಂದ್ ಕೇಜ್ರಿವಾಲ್ ಸಾಧನೆಗಳ ಪಟ್ಟಿ ಬಹಿರಂಗಗೊಂಡಿದೆ ಒಮ್ಮೆ ನೋಡಿ

ಅರವಿಂದ್ ಅವರು ಸಿಎಂ ಹುದ್ದೆ ತೊರೆಯಲು ಕಾರಣ

ಅರವಿಂದ್ ಅವರು ಸಿಎಂ ಹುದ್ದೆ ತೊರೆಯಲು ಕಾರಣಗಳು ಇಲ್ಲಿವೆ ಓದಿ

ಭ್ರಷ್ಟಾಚಾರದ ವಿರುದ್ದ ಹೋರಾಡಿದರೆ ಇದೇ ಗತಿ

ಛೇ ಪಾಪ ಅರವಿಂದ್ ಗೆ ಹೀಗೆ ಆಗಬಾರದಿತ್ತು! ಭ್ರಷ್ಟಾಚಾರದ ವಿರುದ್ದ ಹೋರಾಡಿದರೆ ಇದೇ ಗತಿ

ಕೇಜ್ರಿವಾಲ್ ಕೂಡಾ ಎಲ್ಲರಂತೆ ಅವಕಾಶವಾದಿ

ದೆಹಲಿ ಅಸೆಂಬ್ಲಿ ಆಯ್ತು ಈಗ ಲೋಕಸಭೆ ಪ್ರವೇಶಿಸಲು ಮತ್ತೊಂದು ನಾಟಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+