ದೇಶವ್ಯಾಪಿ ಸಾರಿಗೆ ಮುಷ್ಕರಕ್ಕೆ ಟ್ವಿಟ್ಟರ್ ನಲ್ಲಿ ಮಿಶ್ರ ಪ್ರತಿಕ್ರಿಯೆ

Posted By:
Subscribe to Oneindia Kannada

ಬೆಂಗಳೂರು, ಸೆ. 02: ಸುಮಾರು 12ಕ್ಕೂ ಅಧಿಕ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡಿರುವ ದೇಶವ್ಯಾಪಿ ಬಂದ್ ಬಿಸಿ ದೇಶದ ಹಲವೆಡೆ ಸಾರ್ವಜನಿಕರಿಗೆ ತಟ್ಟಿದೆ. ಎನ್ ಡಿಎ ಸರ್ಕಾರದ ವಿರುದ್ಧದ ಮತ್ತೊಮ್ಮೆ ಭಾರತ್ ಬಂದ್ ಕರೆ ನೀಡಲಾಗಿದ್ದು, ಸಾರಿಗೆ ಸಂಪರ್ಕ ಬಂದ್ ಆಗಿರುವುದ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಬಂದ್ ಬಿಸಿ ತಣ್ಣಗಾಗಿಸಿ ಎಂದು ಟ್ವೀಟ್ ಲೋಕ ಕರೆ ನೀಡಿದೆ.

ಗ್ಯಾಲರಿ : ಬಂದ್ ಬಂದ್ ಬಂದ್ ಭಾರತ್ ಬಂದ್

ದೇಶದ ವಿವಿಧ ಸ್ತರದ ಕಾರ್ಮಿಕದ ಸ್ಥಿತಿ ಗತಿ, ಸರ್ಕಾರದ ಧೋರಣೆ, ಸಾರ್ವಜನಿಕರ ಹಿತಾಸಕ್ತಿ ಹೀಗೆ ಎಲ್ಲಾ ವಿಷಯಗಳು ಚರ್ಚಿತವಾಗುತ್ತಿದೆ.
ಬೆಂಗಳೂರು, ಕೋಲ್ಕತ್ತಾ, ದೆಹಲಿ, ತಿರುವನಂತಪುರಂನಲ್ಲಿ ಬಸ್ ಹಾಗೂ ಆಟೋರಿಕ್ಷಾಗಳ ಸಂಚಾರ ಸ್ಥಗಿತಗೊಂಡಿದೆ.

[ಕಾರ್ಮಿಕ ಸಂಘಟನೆಗಳ ಮುಷ್ಕರ ಯಾಕೆ?] | [ಯಾವ ಸೇವೆ ಲಭ್ಯ? ಯಾವುದು ಅಲಭ್ಯ?]

ರೈಲು ಸಂಚಾರ, ಮೆಟ್ರೋ ವನ್ನು ಬಲವಂತವಾಗಿ ಎಲ್ಲೆಡೆ ನಿಲ್ಲಿಸಲಾಗುತ್ತಿದೆ. ಆದರೆ, ಹಲವೆಡೆ ಕಚೇರಿಗೆ ತೆರಳುವವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಶಾಲೆ-ಕಾಲೇಜುಗಳಿಗೆ ಕೆಲವೆಡೆ ರಜೆ ಘೋಷಿಸಲಾಗಿದೆ. [LIVE : ಭಾರತ್ ಬಂದ್‌ಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ]

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ #bharatbandh ಟ್ರೆಂಡಿಂಗ್ ನಲ್ಲಿದೆ. ಬಂದ್ ಬಗ್ಗೆ ಜನಾಭಿಪ್ರಾಯ ಏನಿದೆ? ಬಂದ್ ಬೇಕೇ? ಬೇಡವೇ? ಯಾವ ಪ್ರದೇಶದಲ್ಲಿ ಏನು ನಡೆದಿದೆ ಎನ್ನುವ ಅಪ್ಡೇಟ್ ಗಳು ಟ್ವೀಟ್ ಗಳಲ್ಲಿ ನೋಡಿ...

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ ಭಾರತ್ ಬಂದ್ ಹಿನ್ನಲೆಯಲ್ಲಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿದೆ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಮಾತ್ರ ಬಂದ್ ಬಿಸಿ ಹೆಚ್ಚಾಗಿ ಕಂಡು ಬಂದಿದೆ. ಬಂದ್ ಹೆಸರಿನಲ್ಲಿ ಪುಂಡಾಟಿಕೆ ಮಾಡುವುದನ್ನು ಟ್ವಿಟ್ಟರ್ ನಲ್ಲಿ ಖಂಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ

ಬೆಂಗಳೂರಿನಲ್ಲಿ ಪರಿಸ್ಥಿತಿ ಹೇಗಿದೆ? ಮೆಟ್ರೋ ರೈಲು ಸಂಚರಿಸುತ್ತಿದೆ. ಸರ್ಕಾರಿ ಬಸ್, ಆಟೋರಿಕ್ಷಾ ಈಗ ಬಂದ್ ಆಗಿವೆ.

ಮಹಾರಾಷ್ಟದಲ್ಲಿ ರಸ್ತೆ ತಡೆ

ಮಹಾರಾಷ್ಟದ ಬುಲ್ಡಾನಾ ಜಿಲ್ಲೆಯ ದುಧ್ ಗಾಂವ್ಕರ್ ನಲ್ಲಿ ರಸ್ತೆ ತಡೆ

ಐಟಿ ಉದ್ಯೋಗಿಗಳು ಮುಷ್ಕರ ನಡೆಸಬೇಕು

ಐಟಿ ಉದ್ಯೋಗಿಗಳು ಮುಷ್ಕರ ನಡೆಸಬೇಕು, ಹೆಚ್ಚು ಸಮಸ್ಯೆಗೆ ಒಳಗಾಗುವುದು ನಾವು ಮಾತ್ರ

ಮೋದಿ ಸರ್ಕಾರ ಎಲ್ಲವನ್ನು ನೀಡುತ್ತಿದೆ

ಕಾರ್ಮಿಕ ವರ್ಗಕ್ಕೆ ಮೋದಿ ಸರ್ಕಾರ ಎಲ್ಲಾ ಸೌಲಭ್ಯವನ್ನು ನೀಡುತ್ತಿದೆ, ಆದರೂ, ಕಮ್ಯೂನಿಸ್ಟ್ ಗಳು ಬಂದ್ ನಡೆಸುತ್ತಿದ್ದಾರೆ.

ಒಡಿಶಾದಲ್ಲಿ ರೈಲು ತಡೆದು ಪ್ರತಿಭಟನೆ

ಒಡಿಶಾದ ಭುವನೇಶ್ವರದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಾಗಿದೆ.

ರಾಜಸ್ತಾನದಲ್ಲಿ ಕಾರ್ಮಿಕರಿಗೆ ಕೈ ತುಂಬಾ ಸಂಬಳ

ರಾಜಸ್ತಾನದಲ್ಲಿ ಕಾರ್ಮಿಕರಿಗೆ ಕೈ ತುಂಬಾ ಸಂಬಳ ಸಿಗುತ್ತಿರಬೇಕು, ಹೀಗಾಗಿ ಯಾವುದೇ ಬಂದ್ ಬಿಸಿ ಇಲ್ಲಿಗೆ ತಟ್ಟಿಲ್ಲ

ಬಂದ್ ನಡೆಸುವವರ ಸಂಬಳ ಕಟ್ ಮಾಡಿ

ಬಂದ್ ನಡೆಸುವವರ ಸಂಬಳ ಕಟ್ ಮಾಡಿ, ಯಾರೋ ಮಾಡುವ ಪ್ರತಿಭಟನೆಗೆ ನಾವು ಅಧಿಕವಾಗಿ ತೆರಿಗೆ ಪಾವತಿಸಬೇಕು

ದೆಹಲಿಯಲ್ಲಿ ನರ್ಸ್ ಗಳ ಪ್ರತಿಭಟನೆ

ದೆಹಲಿಯಲ್ಲಿ ಭಾರತ್ ಬಂದ್ ಬಿಸಿಯಂತೂ ಇಲ್ಲ ಆರ್ ಎಂಎಲ್ ಆಸ್ಪತ್ರೆಯ ಬಳಿ ವೇತನ ಏರಿಕೆಗೆ ಆಗ್ರಹಿಸಿ ನರ್ಸ್ ಗಳು ಪ್ರತಿಭಟನೆ ನಡೆಸಿದ್ದಾರೆ.

ತೆಲಂಗಾಣದಲ್ಲಿ ಸಾರಿಗೆ ಸಂಸ್ಥೆಗಳ ಮುಷ್ಕರ

ತೆಲಂಗಾಣದಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ನಡೆಸಿದ್ದಾರೆ. ಬಂದ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಕೇರಳದಲ್ಲಿ ಓಣಂ ರಜೆ ಈಗಲೇ ಶುರುವಾಯಿತೆ?

ಕೇರಳದಲ್ಲಿ ಓಣಂ ರಜೆ ಈಗಲೇ ಶುರುವಾಯಿತೆ? ರಸ್ತೆಗಳೆಲ್ಲ ಖಾಲಿ ಖಾಲಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nation-wide bandh hit normal life in the country, especially in West Bengal, Kerala, the two states where Left parties still enjoy huge support. Micro-blogging site Twitter was flooded with comments which showed their anger and disappointments towards Bandh. Bharat Bandh has been trending on top since Friday(Septermber 02) morning.
Please Wait while comments are loading...