ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣದಲ್ಲಿ ಖಂಡಗ್ರಾಸ ಚಂದ್ರಗ್ರಹಣ!

By Manjunatha
|
Google Oneindia Kannada News

ಬೆಂಗಳೂರು, ಜನವರಿ 31: ಇಂದು ಚಂದ್ರ ಕೆಲ ಕಾಲ ತನ್ನ ರೂಪ ಬದಲಾಯಿಸಿಕೊಂಡಿದ್ದಾನೆ. ಚಂದ್ರ ಇಂದು ಬ್ಲೂ ಬ್ಲಡ್ ಮನ್ ರೂಪದಲ್ಲಿ ತನ್ನ ಸಾಮಾನ್ಯ ಆಕಾರಕ್ಕಿಂತ ದೊಡ್ಡದಾಗಿ ಕಾಣಿಸಿಕೊಂಡಿದ್ದಾನೆ.

ಸಣ್ಣ ಇಲಿ ಹೋದರು ಮಾತನಾಡುವ ಟ್ವಿಟ್ಟರ್, ಫೆಸ್‌ಬುಕ್‌ನಲ್ಲಿ ಇಂದಿನ ಅದ್ಭುತ ಪ್ರಕೃತಿ ವೈಚಿತ್ರ್ಯದ ಬಗ್ಗೆ ಮಾತನಾಡದೆ ಇರುತ್ತಾರೆಯೇ ನೆಟ್ಟಿಗರು. ಟ್ವಿಟರ್, ಫೇಸ್‌ಬುಕ್‌ನಲ್ಲಿ ತರಹೇವಾರಿ ಪ್ರತಿಕ್ರಿಯೆಗಳು, ಅಭಿಪ್ರಾಯಗಳ ಸುರಿಮಳೆಯೇ ಆಗುತ್ತಿದೆ.

ಗ್ರಹಣ ವಿಶ್ಲೇಷಣೆ: ವಿಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲವೆ?ಗ್ರಹಣ ವಿಶ್ಲೇಷಣೆ: ವಿಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲವೆ?

ಟ್ವಿಟರ್‌ನಲ್ಲಿ ಸೂಪರ್‌ಬ್ಲೂಬ್ಲಡ್‌ಮೂನ್ (#superbluebloodmoon) ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗುತ್ತಿದ್ದು ಲಕ್ಷಾಂತರ ಜನ ಈ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಚಂದ್ರಗ್ರಹಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದಾರೆ.

ಸೂಪರ್ ಬ್ಲಡ್ ಮೂನ್‌ ಬಗ್ಗೆ ಆಯ್ದ ಕೆಲವು ಟ್ವಿಟರ್‌ ಕಮೆಂಟ್‌ಗಳು ನಿಮಗಾಗಿ...

Array

ಮಿಸ್ಟರ್ ಬೀನ್ ರಿಯಾಕ್ಷನ್

ಹಲವು ದಿನಗಳಿಂದ ಚಂದ್ರ ಗ್ರಹಣ ನೋಡಲು ಕಾದು ಕೊನೆಗೆ ಮೋಡ ಅಡ್ಡ ಬಂದ ಕಾರಣ ಗ್ರಹಣ ನೋಡಲು ಸಾಧ್ಯವಾಗದ ಎರಿನ್ ಎಂಬುವರು ತಮ್ಮ ಭಾವನೆಯನ್ನು ಮಿಸ್ಟರ್ ಬೀನ್‌ ನ ವಿಡಿಯೋ ಹಂಚಿಕೊಂಡು ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಬೀನ್‌ ಗೆ ಆದಷ್ಟೆ ನಿರಾಸೆ ಅವರಿಗೂ ಆಗಿದೆಯಂತೆ.

ಖಂಡಗ್ರಾಸ ಚಂದ್ರಗ್ರಹಣದ ವೇಳೆ ಧಾರ್ಮಿಕ ಆಚರಣೆ ಹೇಗೆ?ಖಂಡಗ್ರಾಸ ಚಂದ್ರಗ್ರಹಣದ ವೇಳೆ ಧಾರ್ಮಿಕ ಆಚರಣೆ ಹೇಗೆ?

ಕ್ಯಾಮೆರಾ ಬಿಡಿ ಕಣ್ಣಲ್ಲಿ ನೋಡಿ

ತಾವು ನೋಡಿದ ದೊಡ್ಡ ಚಂದ್ರ ಮತ್ತು ತಮ್ಮ ಕೆಮೆರಾ ಸೆರೆಹಿಡಿದಿರುವ ಸಣ್ಣ ಗಾತ್ರದ ಚಂದ್ರನ ಚಿತ್ರಗಳನ್ನು ಅಪ್‌ಲೋಡ್ ಮಾಡಿರುವ ಇಲ್ಲೊಬ್ಬರು ಕ್ಯಾಮೆರಾ ಬಿಡಿ ಕಣ್ಣಿನಿಂದ ಪ್ರಕೃತಿ ವೈಚಿತ್ರ್ಯ ನೋಡಿ ಆನಂದಿಸಿ ಎಂದು ಕಿವಿ ಮಾತು ಹೇಳುತ್ತಿದ್ದಾರೆ.

ವಿನಾಶದ ಸೂಚನೆಯೇ?

ಈ ಸುಂದರ ಪ್ರಾಕೃತಿಕ ಬದಲಾವಣೆಯನ್ನು ಇಲ್ಲೊಬ್ಬರು ಅಶುಭ ಸೂಚಕ ಎಂದಿದ್ದಾರೆ. ಸೂರ್ಯ ಕಪ್ಪಗಾಗುತ್ತಾನೆ, ಚಂದ್ರ ಕೆಂಪಾಗುತ್ತಾನೆ ಆ ನಂತರ ಯುಗಾಂತ್ಯವಾಗುತ್ತದೆ ಎಂದು ತನ್ನದೇ ಭವಿಷ್ಯವಾಣಿಯೊಂದನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾನೆ.

ಖುಷಿಗೆ ಪಾರವಿಲ್ಲ

ಈ ವ್ಯಕ್ತಿಯ ವಂಶವೃಕ್ಷದಲ್ಲಿ ಈತನೇ ಮೊದಲಿಗನಂತೆ ಸೂಪರ್ ಬ್ಲೂ ಬ್ಲಡ್ ಮೂನ್ ನೋಡುತ್ತಿರುವುದು. 150 ವರ್ಷಗಳಿಗೆ ಒಮ್ಮೆ ನಡೆಯುವ ಸೂಪರ್ ಬ್ಲಡ್ ಮೂನ್ ವೈಚಿತ್ರ ನೋಡಲು ಸಿಗುವುದು ಪ್ರತಿ ಎರಡು ತಲೆಮಾರಿಗೊಮ್ಮೆ ಮಾತ್ರ ಹಾಗಾಗಿ ಈತನ ಖುಷಿಗೆ ಪಾರವೇ ಇಲ್ಲ.

English summary
super blue blood moon Hashtag is trending in twitter. Here is some twitter reaction about super blue blood moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X