ಮಹಾತ್ಮಾ ಗಾಂಧಿ ಮರಿ ಮೊಮ್ಮಕ್ಕಳು ಈಗ ಕೋಟ್ಯಧಿಪತಿಗಳು

Posted By:
Subscribe to Oneindia Kannada

ನವದೆಹಲಿ, ಮೇ 16: ಮಹಾತ್ಮಾ ಗಾಂಧಿಯವರ ಐದನೇ ಮಗ (ದತ್ತು ಪುತ್ರ ಖ್ಯಾತ ಉದ್ಯಮಿ ಜಮ್ನಾಲಾಲ್ ಬಜಾಜ್) ಅವಳಿ ಮರಿ ಮೊಮ್ಮಕ್ಕಳು ಈಗ ಕೋಟ್ಯಧಿಪತಿಗಳಾಗಿದ್ದಾರೆ. ಮೋಟಾರು ಸೈಕಲ್ ಉದ್ಯಮದಲ್ಲಿ ಭಾರಿ ಯಶಸ್ಸು ಗಳಿಸಿದ್ದಾರೆ.

ಜಮ್ನಾಲಾಲ್ ಬಜಾಜ್ ಅವರ ಮೊಮ್ಮಕ್ಕಳಾದ ಅನುರಂಗ್ ಜೈನ್​ ಹಾಗೂ ತಾರಂಗ್ ವಾಹನೋದ್ಯಮದಲ್ಲಿ ಈ ಸಾಧನೆ ಮಾಡಿದ್ದಾರೆ. ಬ್ಲೂಮ್ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ ಪ್ರಕಾರ ಅನುರಂಗ್​ ಜೈನ್​ ಅವರ ಆಟೋ ಕಂಪೆನಿಗಳ ತಯಾರಕ ಎಂಡ್ಯೂರೆನ್ಸ್ ಟೆಕ್ನಾಲಜೀಸ್ ಕಂಪೆನಿಯ ನಿವ್ವಳ ಮೌಲ್ಯ 1.1 ಶತಕೋಟಿ ಡಾಲರ್​​ಗೆ ಏರಿದೆ. ತಾರಂಗ್ ಅವರ ವರೋಕ್ ಗ್ರೂಪ್​ 1.1 ಶತಕೋಟಿಯಷ್ಟು ಸಂಪತ್ತನ್ನು ಹೊಂದಿದೆ.

Twin Great Grandsons Of Mahatma Gandhi's 'Fifth Son' Become Billionaires

ಅನುರಂಗ್​ ಜೈನ್​ ಹಾಗೂ ತಾರಂಗ್ ಅವರು ಯಾವುದೇ ಸಮಸ್ಯೆಯನ್ನು ಎದುರಿಸುವಲ್ಲಿ ಶಕ್ತರಾಗಿದ್ದಾರೆ. ವಾಸ್ತವವಾಗಿ ಇಬ್ಬರೂ ವೆಚ್ಚ ಮತ್ತು ಗುಣಮಟ್ಟವನ್ನು ಕಾಪಡಿಕೊಂಡು ಬಂದಿದ್ದಾರೆ. ಹಾಗಾಗಿ ಅವರು ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿದ್ದಾರೆ ಎಂದು ರಾಹುಲ್ ಬಜಾಜ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The twin great grandsons of Mahatma Gandhi's "fifth son" have become billionaires riding the draft of their uncle's motorcycle business. Anurang Jain's net worth hit $1.1 billion, according to the Bloomberg Billionaires Index, after auto parts maker Endurance Technologies Ltd.
Please Wait while comments are loading...