ಕೋವಿಂದ್ ಬಗ್ಗೆ 2016ರಲ್ಲೇ ಭವಿಷ್ಯ ನುಡಿದಿದ್ದ ನಿತೀಕ್ಷ್

Posted By:
Subscribe to Oneindia Kannada

ಬೆಂಗಳೂರು, ಜೂನ್ 20: ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕಂಡು ಅಚ್ಚರಿ ಮೂಡಿರಬಹುದು. ರಾಮ್ ನಾಥ್ ಕೋವಿಂದ್ ಹೆಸರು ಯಾರೂ ಕೂಡಾ ಊಹಿಸಿರಲಿಲ್ಲ ಎಂಬ ಮಾತು ಸುಳ್ಳಲಾಗಿದೆ.

ಸ್ವಯಂ ಘೋಷಿತ ಕ್ವಿಜ್ ಮಾಸ್ಟರ್, ಟ್ವಿಟ್ಟರ್ ಬಳಕೆದಾರರೊಬ್ಬರು 2016ರಲ್ಲೇ ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ಸೂಚಿಸಿದ್ದಾರೆ. ರಾಹುಲ್ ಎಂಬುವರು ಟ್ವಿಟ್ಟರ್ ನಲ್ಲಿ ಕೇಳಿದ್ದ ಸಮೀಕ್ಷೆಗೆ ಉತ್ತರ ರೂಪವಾಗಿ, ಬಿಜೆಪಿ ಅಭ್ಯರ್ಥಿ ರಾಮನಾಥ್ ಎಂದು ಹೇಳಿದ್ದರು.

ಭಾರತದ ರಾಷ್ಟ್ರಪತಿ ಅಯ್ಕೆ ಹೇಗೆ? ಎಲೆಕ್ಟ್ರೋಲ್ ಕಾಲೇಜ್ ಹೇಗಿದೆ?

ನರೇಂದ್ರ ಮೋದಿ ಅವರ ಅಚ್ಚರಿಯ ಆಯ್ಕೆ ಬಗ್ಗೆ ಎಲ್ಲರ ಮಾತನಾಡುವಾಗ, ಬಿಹಾರದ ಹಾಲಿ ರಾಜ್ಯಪಾಲ ಕೋವಿಂದ್ ಅವರ ಹೆಸರನ್ನು 2016ರಲ್ಲೇ ಸೂಚಿಸಿದ್ದ ನಿತೀಕ್ಷ್ ಶ್ರೀವಾಸ್ತವ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ. ನಾಸ್ಟ್ರಡಮಸ್, ಟ್ವಿಟ್ಟರ್ ಭವಿಷ್ಯಗಾರ ಎನಿಸಿಕೊಂಡಿದ್ದಾರೆ.

ರಾಮ್ ನಾಥ್ ಕೋವಿಂದ್ ಮುಂದಿನ ರಾಷ್ಟ್ರಪತಿ

ಟ್ವಿಟ್ಟರ್, ವಾಟ್ಸಪ್ ನಲ್ಲಿ ನಿತೀಕ್ಷ್ ಅವರ ಭವಿಷ್ಯ ಹೇಳುವ ಟ್ವೀಟ್ ಪ್ರತಿ ಹರಿದಾಡುತ್ತಿದೆ. ನಮ್ಮ ಭವಿಷ್ಯವನ್ನು ಹೇಳಿ ಎಂದು ನಿತೀಕ್ಷ್ ರನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಇಷ್ಟಕ್ಕೂ ನಿತೀಕ್ಷ್ ಟ್ವೀಟ್ ಮಾಡಿದ್ದು ಯಾವಾಗ? ಮುಂದಿನ ಭವಿಷ್ಯ ವಾಣಿ ಏನು? ಮುಂದೆ ಓದಿ...

ವ್ಯಕ್ತಿ ಚಿತ್ರ: ದಲಿತ ನಾಯಕ, ವಕೀಲ ರಾಮನಾಥ್ ಕೋವಿಂದ್

ರಾಹುಲ್ ಟ್ವೀಟ್ ಗೆ ಪ್ರತ್ಯುತ್ತರ

ರಾಹುಲ್ ಟ್ವೀಟ್ ಗೆ ಪ್ರತ್ಯುತ್ತರ

ರಾಹುಲ್ ಶರ್ಮ ಎಂಬುವರು ಕೇಳಿದ ಸಮೀಕ್ಷೆ(poll) ಗೆ ಜೂನ್ 02, 2016ರಲ್ಲೇ ಉತ್ತರ ನೀಡಿದ್ದ ನಿತೀಕ್ಷ್ ಅವರು ಬಿಹಾರದ ಹಾಲಿ ರಾಜ್ಯಪಾಲ ರಾಮ್ ನಾಥ್ ಕೋವಿಂದ್ ಅವರು ಸಮರ್ಥ ನಾಯಕ, ದಲಿತ, ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳವರು ಎಂದು ಹೆಸರಿಸಿದ್ದಾರೆ.

ವರ್ಷದ ಹಿಂದೆಯೇ ಉತ್ತರ ಸಿಕ್ಕಿದೆ

ವರ್ಷದ ಹಿಂದೆಯೇ ಉತ್ತರ ಸಿಕ್ಕಿದೆ

ವಾಹ್ ಇದು ಅದ್ಭುತ ಒಂದು ವರ್ಷದ ಹಿಂದೆಯೇ ಭವಿಷ್ಯ ಹೇಳಿದ್ದೀರಿ ಎಂದು ನಿತೀಕ್ಷ್ ರನ್ನು ಹೊಗಳುತ್ತಿರುವ ಟ್ವೀಟ್ ಲೋಕ.

ಅಮಿತ್ ಫೋನ್ ಟ್ಯಾಪ್

ಅಮಿತ್ ಫೋನ್ ಟ್ಯಾಪ್

ಕೋವಿಂದ್ ಅವರು ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಾರೆ ಎಂದು ಅಷ್ಟು ನಿಖರವಾಗಿ ಹೇಳಲು ಹೇಗೆ ಸಾಧ್ಯ? ಅದು ಒಂದು ವರ್ಷಕ್ಕೂ ಮುಂಚಿತವಾಗಿ ಭವಿಷ್ಯ ನುಡಿಯುವುದೆಂದರೇನು? ಬಹುಶಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಫೋನ್ ಟ್ಯಾಪ್ ಮಾಡಿರಬೇಕು ಎಂದು ತಮಾಷೆ ಮಾಡಿದ ಟ್ವೀಟ್ ಮಂದಿ.

ನಿತೀಕ್ಷ್ ಗೆ ವಿಚಿತ್ರ ಪ್ರಶ್ನೆಗಳು

ನಿತೀಕ್ಷ್ ಗೆ ವಿಚಿತ್ರ ಪ್ರಶ್ನೆಗಳು

ನಿತೀಕ್ಷ್ ಅವರೇ ನಿಮ್ಮ ಭವಿಷ್ಯ ನಿಜವಾಗಿದೆ. ನನ್ನ ಭವಿಷ್ಯದ ಬಗ್ಗೆ ಕೂಡಾ ಸ್ವಲ್ಪ ಹೇಳಿ, ನಾನು ಯಾವಾಗ ಮದುವೆಯಾಗುತ್ತೇನೆ ಎಂದು ಕೇಳಿ ತಮಾಷೆ ಮಾಡಲಾಗಿದೆ.

ಕ್ರಿಕೆಟ್ ಬಗ್ಗೆ ಭವಿಷ್ಯ

ಕ್ರಿಕೆಟ್ ಬಗ್ಗೆ ಭವಿಷ್ಯ

ಇಷ್ಟು ನಿಖರವಾಗಿ ಭವಿಷ್ಯ ಹೇಳುವ ನೀವು, ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ಬಗ್ಗೆ ಭವಿಷ್ಯ ಏಕೆ ನುಡಿಯಲಿಲ್ಲ ಎಂದು ಕೇಳಿದ್ದಾರೆ. ಕ್ರಿಕೆಟ್ ಬಗ್ಗೆ ಭವಿಷ್ಯ ನುಡಿಯುವಂತೆ ಕೇಳಿದ್ದಾರೆ.

ಉಪ ರಾಷ್ಟ್ರಪತಿ ಆಯ್ಕೆ

ಉಪ ರಾಷ್ಟ್ರಪತಿ ಆಯ್ಕೆ

ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಭವಿಷ್ಯವನ್ನು ಹೇಳಿದ್ದ ನಿತೀಕ್ಷ್ ಅವರು ಇತ್ತೀಚೆಗೆ ಟ್ವೀಟ್ ಮಾಡಿ, ಉಪರಾಷ್ಟ್ರಪತಿ ಸ್ಥಾನಕ್ಕೆ ಹಮೀದ್ ಅನ್ಸಾರಿ ಅವರ ನಂತರ
ಹುಕುಮ್ ದೇವ್ ನಾರಾಯಣ್ ಅವರ ಆಯ್ಕೆ ಬಹುತೇಕ ಖಚಿತ ಎಂದಿದ್ದಾರೆ.

ಲೆಕ್ಕಾಚಾರದ ಭವಿಷ್ಯ

ಲೆಕ್ಕಾಚಾರದ ಭವಿಷ್ಯ

ಬಿಜೆಪಿಯ ನಡೆಯನ್ನು ಬಹುವರ್ಷದಿಂದ ವಿಶ್ಲೇಷಿಸುತ್ತಾ ಬಂದಿರುವ ನಿತೀಕ್ಷ್ ಅವರು ಲೆಕ್ಕಾಚಾರ ಹಾಕಿ ಈ ಭವಿಷ್ಯ ನುಡಿದಿದ್ದಾರೆ. ಇದು ತಮಾಷೆಗಾಗಿ ಯಾವುದೋ ಹೆಸರು ತೆಗೆದುಕೊಂಡಿದ್ದಲ್ಲ ಎಂದು ನಿತೀಕ್ಷ್ ಪರ ಅವರ ಸ್ನೇಹಿತರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Self-proclaimed quizzer called Nitiksh Srivastava, who had accurately predicted in 2016 that Ram Nath Kovind, current governor of Bihar, as the BJP’s presidential candidate
Please Wait while comments are loading...