ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿಯಲ್ಲಿ ಹಿರಿಯ ನಾಗರಿಕರು ದರ್ಶನ ಪಡೆಯುವುದು ಈಗ ಸುಲಭ

|
Google Oneindia Kannada News

ಅಮರಾವತಿ, ನವೆಂಬರ್ 24; ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ದೇವರ ದರ್ಶನದ ನಿಯಮಗಳಲ್ಲಿ ಕೆಲವು ಬದಲಾವಣೆ ತಂದಿದೆ. ಇದರಿಂದಾಗಿ ದೇವರ ದರ್ಶನಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ಸಹಾಯಕವಾಗಲಿದೆ.

ಹಿರಿಯ ನಾಗರಿಕರು ಸುಲಭವಾಗಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ಟಿಟಿಡಿ ಎರಡು ಸ್ಲಾಟ್‌ಗಳನ್ನು ನಿಗದಿ ಮಾಡಿದೆ. ಪ್ರತಿದಿನ ಈ ಸ್ಲಾಟ್‌ ಲಭ್ಯವಿದ್ದು, ಹಿರಿಯ ನಾಗರಿಕರು ಆ ಸಮಯದಲ್ಲಿ ದರ್ಶನಕ್ಕೆ ಹೋಗಬಹುದು.

ಹುಬ್ಬಳ್ಳಿ-ತಿರುಪತಿ ರೈಲು ಪುನರಾರಂಭ, ವೇಳಾಪಟ್ಟಿ ಹುಬ್ಬಳ್ಳಿ-ತಿರುಪತಿ ರೈಲು ಪುನರಾರಂಭ, ವೇಳಾಪಟ್ಟಿ

ಪ್ರತಿದಿನ ಬೆಳಗ್ಗೆ 10 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ ವಿಶೇಷ ಸ್ಲಾಟ್‌ ನಿಗದಿ ಮಾಡಲಾಗಿದೆ. ಈ ಸಮಯದಲ್ಲಿ ಹಿರಿಯ ನಾಗರಿಕರು ವಯಸ್ಸು ನಮೂದಿಸಿರುವ ಫೋಟೋ ಇರುವ ಗುರುತಿನ ಚೀಟಿಯನ್ನು ತೋರಿಸಿ, ದರ್ಶನ ಪಡೆಯಬಹುದು.

ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ ಬೀದರ್-ತಿರುಪತಿ ನಡುವೆ ಹೊಸ ರೈಲು; ವೇಳಾಪಟ್ಟಿ

TTD Made Darshan Easy For Senior Citizens

ಈ ದರ್ಶನಕ್ಕೆ ಟಿಟಿಡಿ ವಿಶೇಷ ದರವನ್ನು ಏನೂ ನಿಗದಿ ಮಾಡಿಲ್ಲ. ಒಬ್ಬರು ಎರಡು ಲಾಡು ಪ್ರಸಾದ ಪಡೆಯಲು 20 ರೂ. ಮತ್ತು ಹೆಚ್ಚುವರಿ ಪ್ರತಿ ಲಾಡುವಿಗೆ 25 ರೂ. ನೀಡಬೇಕಾಗುತ್ತದೆ. ಹಿರಿಯ ನಾಗರಿಕರು ದರ್ಶನಕ್ಕಾಗಿ ತಾಸುಗಟ್ಟಲೇ ಕಾಯುವುದನ್ನು ತಪ್ಪಿಸಲು ಟಿಟಿಡಿ ಈ ವ್ಯವಸ್ಥೆ ಮಾಡಿದೆ.

Holidays List 2023 : ಹೊಸ ವರ್ಷದಲ್ಲಿ ಯಾವಾಗ ರಜೆ ತಿಳಿಯಿರಿ Holidays List 2023 : ಹೊಸ ವರ್ಷದಲ್ಲಿ ಯಾವಾಗ ರಜೆ ತಿಳಿಯಿರಿ

ಪ್ರತ್ಯೇಕ ಸಾಲು ನಿರ್ಮಾಣ; ಟಿಟಿಡಿ ನಿಗದಿಪಡಿಸಿದ ಸ್ಲಾಟ್‌ಗಳಲ್ಲಿ ಹಿರಿಯ ನಾಗರಿಕರು ಸುಲಭವಾಗಿ ದೇವರ ದರ್ಶನ ಮಾಡಲು ಅನುಕೂಲವಾಗುವಂತೆ ವಿಶೇಷ ಸಾಲು ತೆರೆಯಲಿದೆ. ಅಲ್ಲದೇ ಸಾಲಿನಲ್ಲಿ ಕಾಯುವಾಗ ಅವರಿಗೆ ಆಹಾರದ ವ್ಯವಸ್ಥೆಯನ್ನು ಸಹ ಮಾಡಿದೆ.

ಕಾರು ಪಾರ್ಕಿಂಗ್ ಪ್ರದೇಶದಿಂದ ಹಿರಿಯ ನಾಗರಿಕರು ದರ್ಶನಕ್ಕೆ ಹೋಗುವ ತನಕ ಮೆಟ್ಟಿಲು ಹತ್ತುವುದನ್ನು ತಪ್ಪಿಸಲು ಬ್ಯಾಟರಿ ಕಾರಿನ ವ್ಯವಸ್ಥೆಯನ್ನು ಮಾಡಿದೆ. ಹಿರಿಯ ನಾಗರಿಕರ ದರ್ಶನ ಸ್ಲಾಟ್ ಅವಧಿಯಲ್ಲಿ ಸಾಮಾನ್ಯ ದರ್ಶನ ಇರುವುದಿಲ್ಲ.

ಪ್ರತಿದಿನ ಹಿರಿಯ ನಾಗರಿಕರ ದರ್ಶನಕ್ಕೆ ಎರಡು ಸ್ಲಾಟ್ ನಿಗದಿ ಮಾಡಲಾಗಿದೆ. ಈ ಸ್ಲಾಟ್ ಅವಧಿ 30 ನಿಮಿಷಗಳು. ಸಾಲಿನಲ್ಲಿರುವ ಜನರನ್ನು ನೋಡಿಕೊಂಡು ಸಮಯ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.

ವಿಐಪಿ ದರ್ಶನದ ಅವಧಿಯಲ್ಲಿ ಬದಲಾವಣೆ; ಟಿಟಿಡಿ ನವೆಂಬರ್ ತಿಂಗಳಿನಲ್ಲಿ ತಿರುಪತಿ ವೆಂಕಟೇಶ್ವರನ ವಿಐಪಿ ದರ್ಶನದ ನಿಯಮದಲ್ಲಿ ಸಹ ಬದಲಾವಣೆ ಮಾಡಿದೆ. ವಿಐಪಿ ದರ್ಶನ ಮತ್ತು ಸಾಮಾನ್ಯ ದರ್ಶನದ ಸಮಯ ಒಂದೇ ಆಗಿದ್ದರಿಂದ ಭಕ್ತರಿಗೆ ಆಗುತ್ತಿದ್ದ ತೊಂದರೆ ಗಮನಿಸಿ ಈ ಬದಲಾವಣೆ ಮಾಡಲಾಗಿದೆ. ಆದರೆ ಈ ಬದಲಾವಣೆ ಪ್ರಾಯೋಗಿಕವಾಗಿದ್ದು, ಮುಂದುವರೆಸುವ ಕುರಿತು ನಂತರ ತೀರ್ಮಾನ ಕೈಗೊಳ್ಳಲಾಗುತ್ತದೆ.

tirupathi temple

ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ವಿಐಪಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹಿಂದೆ ಮುಂಜಾನೆ 2.30ರಿಂದ ಬೆಳಗ್ಗೆ 8ರ ತನಕ ವಿಐಪಿ ದರ್ಶನವಿತ್ತು. ಆದರೆ ಅದು ಕೆಲವು ಬಾರಿ 10 ಗಂಟೆಯ ತನಕವೂ ಸಾಗುತ್ತಿತ್ತು. ಇದರಿಂದಾಗಿ ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ಉಂಟಾಗುತ್ತಿತ್ತು. ಆದ್ದರಿಂದ ಈ ಬದಲಾವಣೆ ಮಾಡಲಾಗಿದೆ.

ಪ್ರತಿದಿನ ಮಧ್ಯಾಹ್ನ 12 ಗಂಟೆಯೊಳಗೆ ವಿಐಪಿ ದರ್ಶನ ಪೂರ್ಣಗೊಳಿಸಬೇಕು ಎಂದು ಟಿಟಿಡಿ ತೀರ್ಮಾನಿಸಿದೆ. ವಿಐಪಿ ದರ್ಶನದ ಅವಧಿ ಮುಗಿಯುವ ತನಕ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿರುವ ಉಚಿತ ದರ್ಶನದ ಭಕ್ತರು ತಾಸುಗಟ್ಟಲೇ ಕಾಯಬೇಕಿತ್ತು. ಇದರಿಂದಾಗಿ ಆಗುವ ಸಮಸ್ಯೆ ಬಗೆಹರಿಸಲು ಪ್ರಾಯೋಗಿಕ ಬದಲಾವಣೆ ಮಾಡಲು ಸಭೆಯಲ್ಲಿ ಎ. ವಿ. ಧರ್ಮರೆಡ್ಡಿ ಪ್ರಸ್ತಾಪ ಮಂಡಿಸಿದ್ದರು.

ವಿಐಪಿ ದರ್ಶನದ ಸಮಯ ಬದಲಾವಣೆ ಮಾಡಿ, ಉಚಿತ ದರ್ಶನದ ಭಕ್ತರಿಗೆ ಅನುಕೂಲ ಮಾಡಿಕೊಡುವ ಪ್ರಸ್ತಾವನೆ ಮುಂದಿಟ್ಟಿದ್ದರು. ಟಿಟಿಡಿ ಸಭೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಒಪ್ಪಿಗೆ ನೀಡಲಾಗಿದ್ದು, ನವೆಂಬರ್‌ನಿಂದಲೇ ಜಾರಿಗೆ ಬಂದಿದೆ.

ವಿಐಪಿ ದರ್ಶನವನ್ನು ಬೇಗ ಮುಗಿಸುವುದರಿಂದ ಸಾಮಾನ್ಯ ದರ್ಶನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಸಮಯವನ್ನು ನೀಡಬಹುದು ಎಂಬುದು ಲೆಕ್ಕಾಚಾರವಾಗಿದೆ. ಈಗ ಹಿರಿಯ ನಾಗರಿಕ ದರ್ಶನದ ಸಮಯಕ್ಕೆ ಸಹ ಸ್ಲಾಟ್ ನಿಗದಿ ಮಾಡಲಾಗಿದೆ.

English summary
Tirumala Tirupati Devasthanams (TTD) allotted daily two slots for senior citizens. The first darshan schedule starts at 10 AM and the second schedule at 3 PM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X