TTD Ladddu: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ: ಆಂಧ್ರದ ಸಿಎಂಗೆ ಕೇಂದ್ರದ ಸೂಚನೆ ಏನು?
TTD Ladddu Parsadam: ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ಬರೀ ದೇಶ ಅಲ್ಲದೆ, ವಿಶ್ವದೆಲ್ಲೆಡೆ ಪ್ರಸಿದ್ಧಿ ಪಡೆದಿದೆ. ಇಂತಹ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗುತ್ತದೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಇನ್ನು ಇದೀಗ ಈ ವಿವಾದದ ವರದಿ ಕೊಡುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ಕೇಳಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ಕೋಟ್ಯಂತರ ಭಕ್ತರಿಗೆ ನೀಡಲಾಗುವ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದಲ್ಲಿನ ಪ್ರಾಣಿಗಳ ಕೊಬ್ಬನ್ನು ಹಾಕಲಾಗುತ್ತದೆ ಎನ್ನುವ ವಿವಾದ ಕೇಳಿಬಂದಿದೆ. ಇನ್ನು ಈ ಬಗ್ಗೆ ವಿವರವಾದ ವರದಿಯನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರಿಗೆ ಕೇಳಿದ್ದಾರೆ.

ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು ಅಧಿಕಾರದಲ್ಲಿದ್ದಾಗ ಬಳಸಿದ ತುಪ್ಪದ ಮಾದರಿಗಳಲ್ಲಿ ಗೋಮಾಂಸ ಟಾಲೋ, ಮೀನಿನ ಎಣ್ಣೆ ಮತ್ತು ಹಂದಿ ಕೊಬ್ಬು ಅಥವಾ ಹಂದಿ ಮಾಂಸದ ಕುರುಹುಗಳಿವೆ ಎಂದು ಗುಜರಾತ್ ಸರ್ಕಾರಿ ಪ್ರಯೋಗಾಲಯದ ವರದಿಯನ್ನು ನಾಯ್ಡು ಅವರ ತೆಲುಗು ದೇಶಂ ಪಕ್ಷ ಈ ವಾರ ಉಲ್ಲೇಖಿಸಿದೆ.
ಇನ್ನು ಈ ವಿವಾದ ಕ್ಷಣಕ್ಕೊಂದು ತಿರುವುಪಡೆದುಕೊಳ್ಳುತ್ತಿದೆ. ದನದ ಕೊಬ್ಬು ಮಾತ್ರವಲ್ಲದೆ, ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಕೆ ಮಾತ್ರ ಆಗುತ್ತಿಲ್ಲ. ಜೊಗೆತೆ ಇತರೆ ಕೊಬ್ಬಿನ ಅಂಶಗಳು ಸಹ ಬಳಕೆ ಆಗಿರುವುಂತಹ ಆಘಾತಕಾರಿ ಮಾಹಿತಿಯೊಂದ ಲ್ಯಾಬ್ ರಿಪೋರ್ಟ್ ವರದಿಯಿಂದ ಬಹಿರಂಗವಾಗಿದೆ.
ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶವಷ್ಟೇ ಅಲ್ಲದೇ ಇತರೆ ಕೊಬ್ಬಿನ ಅಂಶಗಳು ಪತ್ತೆಯಾಗಿರುವುದಾಗಿ ಲ್ಯಾಬ್ ವರದಿಯಿಂದ ತಿಳಿದುಬಂದಿದೆ. ಇದಕ್ಕೆ ಕಲಬೆರೆಕೆಯ ತುಪ್ಪ ಸರಬರಾಜು ಹಿನ್ನೆಲೆ ಎಂಬುದಾಗಿ ಟಿಟಿಡಿ ಕಾರ್ಯಕಾರಿ ಅಧಿಕಾರಿ ಶ್ಯಾಮಲಾ ರಾವ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿರುಪತಿ ತಿರುಮಲ ಪ್ರಸಾದವಾದಂತ ಲಡ್ಡು ತಯಾರಿಕೆಗಾಗಿ ಎಆರ್ ಡೈರಿಯಿಂದ ತುಪ್ಪವನ್ನು ಸರಬರಾಜು ಮಾಡಲಾಗುತ್ತಿತ್ತು. ಕಲಬೆರೆಕೆಯಿಂದ ಕೂಡಿರುವ ಅನುಮಾನದಿಂದ ಗುಜರಾತ್‌ನಲ್ಲಿ ಸರ್ಕಾರಿ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು ಎಂದಿದ್ದಾರೆ.
ಲ್ಯಾಬ್ ರಿಪೋರ್ಟ್ ನೋಡಿ ನಮಗೆ ಶಾಕ್ ಆಗಿದೆ. ವರದಿಯಂತೆ ತಿರುಪತಿ ತಿರುಮಲ ಲಡ್ಡು ಪ್ರಸಾದಕ್ಕೆ ಎಆರ್ ಡೈರಿಯಿಂದ ಸರಬರಾಜಂತ ತುಪ್ಪವು ಕನಿಷ್ಠ ಮಟ್ಟದಿಂದ ಕೂಡಿದೆ. ಕಲಬೆರೆಕೆಯ ತುಪ್ಪವನ್ನು ಸರಬರಾಜು ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ತಿರುಪತಿ ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರೆಕೆಯ ತುಪ್ಪವೇ ಕಾರಣ ಎಂಬುದಾಗಿ ತಿಳಿದುಬಂದಿದೆ. ಜೊತೆಗೆ ದನದ ತುಪ್ಪದಲ್ಲಿ ಮೀನಿನ ಎಣ್ಣೆ, ಪಾಮ್ ಆಯಿಲ್, ಭೀಪ್, ಹಂದಿ ಕೊಬ್ಬು, ಸೋಯಾಬಿನ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಮೆಕ್ಕೆ ಜೋಳದ ಎಣ್ಣೆ ಬೆರೆಸಿರುವುದಾಗಿ ಲ್ಯಾಬ್ ರಿಪೋರ್ಟ್‌ನಿಂದ ತಿಳಿದುಬಂದಿದೆ.












Click it and Unblock the Notifications