Live : ಬಾಬಾ ರಾಮ್ ರಹೀಂ ಶಿಕ್ಷೆ ಪ್ರಮಾಣ ನಿಗದಿ ವಿಚಾರಣೆ ಮುಕ್ತಾಯ

Posted By:
Subscribe to Oneindia Kannada

ರೋಹ್ಟಕ್, ಆಗಸ್ಟ್ 28: ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿರುವ ಹರ್ಯಾಣದ ಡೇರಾ ಸಚ್ಚಾ ಸೌದಾ ಪಂಗಡದ ಧರ್ಮಗುರು ಬಾಬಾ ರಾಮ್ ರಹೀಂ ಸಿಂಗ್ ಅವರ ಶಿಕ್ಷೆಯ ಪ್ರಮಾಣ ಇನ್ನು ಕೆಲವೇ ನಿಮಿಷಗಳಲ್ಲಿ ಪ್ರಕಟಗೊಳ್ಳಲಿದೆ. ಇದೀಗ ವಿಚಾರಣೆಯು ಮುಗಿದಿದ್ದು, ಎರಡೂ ಕಡೆಯ ವಕೀಲರು (ಬಾಬಾ ಪರ ವಕೀಲ ಹಾಗೂ ಸಿಬಿಐ ವಕೀಲ) ನ್ಯಾಯಾಲಯದಿಂದ ಹೊರಬಂದಿದ್ದಾರೆ. ನ್ಯಾಯಾಧೀಶರು ಇನ್ನು ಕೆಲವೇ ನಿಮಿಷಗಳಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.

   Ram Rahim Case Sentencing Today | Oneindia Kannada

   ಡೇರಾ ಸಚ್ಚಾ ಸೌಧದ ಹಣಕಾಸು ನೀತಿ ಬಗ್ಗೆ ಗೊತ್ತೆ?

   ಅವರನ್ನು ದೋಷಿಯೆಂದು ತೀರ್ಮಾನ ಮಾಡಿದ ದಿನದಂದೇ ಇಡೀ ಹರ್ಯಾಣ ರಣರಂಗವಾಗಿ, ಎಲ್ಲೆಲ್ಲೂ ಗಲಭೆ, ಹಿಂಸಾಚಾರ ತಲೆದೋರಿ 30ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಅಲ್ಲದೆ, ಲಕ್ಷಾಂತರ ರು. ಆಸ್ತಿ ಪಾಸ್ತಿ ನಷ್ಟವಾಗಿತ್ತು.

   Tril to decide amount of punishment for baba ram rahim singh began in Rohtak

   ಇದರ ಸೂಕ್ಷ್ಮತೆಯನ್ನು ಅರಿತಿರುವ ಸರ್ಕಾರ, ಭದ್ರತೆ ಹಿನ್ನೆಲೆಯಲ್ಲಿ ರೋಹ್ಟಕ್ ಜೈಲಿನಲ್ಲಿ ವಿಚಾರಣೆ ನಡೆಸಲಾಗಿದೆ. ಜೈಲಿನ ಗ್ರಂಥಾಲಯವನ್ನೇ ನ್ಯಾಯಾಲಯದ ಕೊಠಡಿಯನ್ನಾಗಿ ಪರಿವರ್ತಿಸಲಾಗಿದೆ.

   ರಾಮ್ ರಹೀಮ್ ತೀರ್ಪು : ಪ್ರಧಾನಿಗೆ ನಾರಿಮನ್ ನೀಡಿದ ಸಲಹೆ ಏನು?

   ಈಗ, ಬಾಬಾ ಪರ ವಕೀಲರು ಹಾಗೂ ಸರ್ಕಾರಿ ವಕೀಲರ ನಡುವೆ ಬಾಬಾಗೆ ನೀಡಬೇಕಿರುವ ಶಿಕ್ಷೆಯ ಪ್ರಮಾಣದ ಬಗ್ಗೆ ತಮ್ಮ ವಾದ ಮಂಡಿಸಿದ್ದರು. ಬಾಬಾ ಪರ ವಕೀಲರು ಶಿಕ್ಷೆಯನ್ನು ಆದಷ್ಟೂ ಕಡಿಮೆಗೊಳಿಸುವ ಇರಾದೆ ಹೊಂದಿದ್ದಾರೆ. ಆದರೆ, ಸರ್ಕಾರಿ ವಕೀಲರು ಅವರಿಗೆ ಜೀವಾವಧಿ ಶಿಕ್ಷೆಗೆ ಪಟ್ಟು ಹಿಡಿದಿದ್ದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The trial to fix the amount of punishment for Baba Ram Rahim Singh has begun at Rohtak Jail on August 28, 2017 at 2:30 p.m. Final judgement may arrive soon.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ