ಇಷ್ಟು ದಿನ ಬೇಕಾದ ಕಡೆಯೆಲ್ಲಾ ಗೂಗಲ್ ಪೇ, ಫೋನ್ ಪೇ ಬಳಸಿದ್ದಿರಾ..ಇನ್ಮುಂದೆ ಕಷ್ಟ ಬಿಡಿ

ನವದೆಹಲಿ, ನವೆಂಬರ್‌ 23: ಕ್ಯಾಶ್‌ಲೆಸ್‌ ದುನಿಯಾ ಅಂತ ಕೈಯಲ್ಲಿ ಫೋನ್ ಹಿಡಿದುಕೊಂಡು ಆರಾಮಾಗಿ ತಿರುಗಿದ್ದಿರಾ...? ಏನೇ ತೆಗೆದುಕೊಂಡರು ಪೋನ್ ಬಳಸಿ ಹಣ ನೀಡಿ ಶಾಪಿಂಗ್ ಮಾಡುತ್ತಿದ್ದಿರಾ..? ಸ್ಪಲ್ಪ ನಿಲ್ಲಿ. ಇನ್ಮುಂದೆ ಹಿಂಗೆ ಬೇಕಾದ ಕಡೆಯೆಲ್ಲಾ ಗೂಗಲ್ ಪೇ, ಪೋನ್‌ ಪೇ, ಪೇಟಿಎಂ ಸೇರಿದಂತೆ ಬೇರೆ ಬೇರೆ ಆಪ್‌ ಮೂಲಕ ಹಣ ನೀಡೋದಕ್ಕೆ ಕಷ್ಟವಾಗುತ್ತದೆ.

ಅರೇ..ಯಾಕೆ ಅಂತಿರಾ...? ಇಷ್ಟು ದಿನ ನಿಮಗೆ ಕ್ಯಾಶ್ ಲೇಸ್ ಆಗಿ ಬದುಕೊದನ್ನು ಕಲಿಸಿದ್ದ ಸರ್ಕಾರ, ಬ್ಯಾಂಕ್‌ಗಳು ಈಗ ಈ ಆಪ್‌ಗಳ ಮೇಲೆ ವಹಿವಾಟಿನ ಮಿತಿ ಹೇರಲು ಪ್ರಾರಂಭಿಸುತ್ತಿವೆ. ಶೀಘ್ರದಲ್ಲೇ ಇದು ಜಾರಿಗೂ ಬರಲಿದೆ.

ಇದರರ್ಥ ನೀವು ಯುಪಿಐ ಪಾವತಿ ಅಪ್ಲಿಕೇಶನ್‌ಗಳು ಅಂದರೆ ಗೂಗಲ್ ಪೇ, ಪೋನ್‌ ಪೇ, ಪೇಟಿಎಂ, ಭೀಮ್ ಅಪ್ ಸೇರಿದಂತೆ ಹಲವಾರು ಪಾವತಿ ಅಪ್ಲಿಕೇಶನ್‌ಗಳಿಂದ ಒಂದು ನಿರ್ದಿಷ್ಟ ಪ್ರಮಾಣದ ವಹಿವಾಟುಗಳನ್ನು ಮಾತ್ರ ಮಾಡಲು ಸಾಧ್ಯವಾಗುತ್ತದೆ.

Transaction Limit May Impose On Google Pay, PhonePe, Paytm and other UPI apps

ಯುಪಿಐ ಡಿಜಿಟಲ್ ಯೋಜನೆಗಳನ್ನು ನಿರ್ವಹಿಸುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯೊಂದಿಗೆ ಚರ್ಚೆ ನಡೆಸಿದೆ. ಇದರ ಪ್ರಕಾರ ಸಂಸ್ಥೆಯು ಡಿಸೆಂಬರ್ 31 ರ ಗಡುವಿನೊಳಗೆ ವ್ಯವಹಾರದ ಪ್ರಮಾಣವನ್ನು ಶೇ 30 ಗೆ ಸೀಮಿತಗೊಳಿಸುವ ಗುರಿಯನ್ನು ಹೊಂದಿದೆ.

ಸದ್ಯಕ್ಕೆ, ಈ ಆಪ್‌ಗಳನ್ನು ಬಳಸಿ ನಡೆಸಸುತ್ತಿರುವ ವಹಿವಾಟುಗಳ ಸಂಖ್ಯೆಗೆ ಯಾವುದೇ ಮಿತಿಯಿಲ್ಲ. ವರದಿಗಳ ಪ್ರಕಾರ, ಗೂಗಲ್ ಪೇ ಮತ್ತು ಫೋನ್ ಪೇ ಸುಮಾರು ಶೇ 80 ಮಾರುಕಟ್ಟೆ ಪಾಲನ್ನು ಹೊಂದಿವೆ.

ಮಾರುಕಟ್ಟೆ ಪಾಲು, ಬಳಕೆದಾರರ ಕುರಿತ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ಈಗಾಗಲೇ ಸಭೆ ನಡೆಸಲಾಗಿದೆ. ಎನ್‌ಪಿಸಿಐ ಅಧಿಕಾರಿಗಳಲ್ಲದೆ, ಹಣಕಾಸು ಸಚಿವಾಲಯ ಮತ್ತು ಆರ್‌ಬಿಐನ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

Transaction Limit May Impose On Google Pay, PhonePe, Paytm and other UPI apps

ಹೀಗಾಗಿ ಸುಖಾಸುಮ್ಮನೆ ಎಲ್ಲಾ ಕಡೆ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಬಳಸುವುದನ್ನು ಈಗಿನಿಂದಲೇ ಕಡಿಮೆ ಮಾಡುವುದು ಉತ್ತಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+