ದಟ್ಟ ಹಿಮದ ನಡುವೆಯೂ ರೈಲು ಸಂಚಾರ, ಇಂಡಿಯಾದ ಸ್ವಿಡ್ಜರ್ಲೆಂಡ್ ಅಂತೆ ಇದು, ವಿಡಿಯೋ ಭಾರೀ ವೈರಲ್
ನವದೆಹಲಿ, ಫೆಬ್ರವರಿ, 02: ದೇಶದ ಬಹುತೇಕ ಭಾಗಗಲ್ಲಿ ತಾಪಮಾನದ ಪ್ರಮಾಣ ಕಡಿಮೆಯಾಗುತ್ತಿದ್ದು, ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ. ಜೊತೆಗೆ ಮಂಜು ಮುಚ್ಚಿದ ವಾತಾವರಣವೂ ನಿರ್ಮಾಣವಾಗುತ್ತಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಎಲ್ಲಿ ನೋಡಿದರೂ ಕೂಡ ಮಂಜುಗಡ್ಡೆ ನಿರ್ಮಾಣವಾಗುತ್ತಿದೆ.
ಈ ಹಿಮವಂತೂ ಥೇಟ್ ಸ್ವಿಡ್ಜರ್‌ಲೆಂಡ್‌ನಂತೆ ಕಾಣುತ್ತದೆ. ಇದರಲ್ಲಿಯೇ ರೈಲುಗಳು ಸಂಚಾರ ಮಾಡುತ್ತಿದ್ದು, ಈ ದೃಶ್ಯಗಳನ್ನು ಬಹುತೇಕ ಮಂದಿ ಸಾಮಾಜಿಕ ಜಾಲಾತಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗೆಯೇ ರೈಲ್ವೆ ಸಚಿವರು ಕೂಡ ಹಿಮದಲ್ಲಿ ರೈಲು ಸಂಚಾರದ ಅದ್ಭುತ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಹಿಮಪಾತದ ನಡುವೆಯೂ ರೈಲೊಂದು ಸಂಚಾರ ಮಾಡುತ್ತಿರುವ ಅದ್ಭುತ ವೀಡಿಯೊವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ದೃಶ್ಯವಂತೂ ಸ್ವರ್ಗದಂತೆ ಬಾಸವಾಗುತ್ತಿದೆ. ಅಲ್ಲದ ಇದಕ್ಕೆ ತುಂಬಾ ಪ್ರತಿಕ್ರಿಯೆಗಳು ಬರುತ್ತಲೇ ಇವೆ.
कश्मीर की वादियों में स्नोफॉल !
— Ashwini Vaishnaw (@AshwiniVaishnaw) February 1, 2024
📍Baramulla - Banihal section pic.twitter.com/WCsMSYKRqd
ಕೇಂದ್ರಾಡಳಿತ ಪ್ರದೇಶದಲ್ಲಿನ ಬಾರಾಮುಲ್ಲ-ಬಹಿಹಾಲ್ ವಿಭಾಗದಿಂದ ಆ ರೈಲು ಕಾರ್ಯಾಚರಣೆ ನಡೆಸುತ್ತಿದೆ ಎಂದು ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅವರು ಬರೆದುಕೊಂಡಿದ್ದಾರೆ. ಅಲ್ಲದೆ ಇದೇ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ಇದೀಗ ಭಾರೀ ಸದ್ದು ಮಾಡುತ್ತಿದೆ.
ಮೂರು ಮಾರ್ಗಗಗಳಲ್ಲಿ ಹೈಸ್ಪೀಡ್ ರೈಲು: ದಕ್ಷಿಣ ರೈಲ್ವೆಯು ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಹೈಸ್ಪೀಡ್ ರೈಲುಗಳನ್ನು ಓಡಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಜನರಲ್ ಮ್ಯಾನೇಜರ್ ಆರ್‌ಎನ್ ಸಿಂಗ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, "ನಾವು ಈ ಮಾರ್ಗದಲ್ಲಿ ಸೆಮಿ-ಹೈಸ್ಪೀಡ್ ರೈಲುಗಳನ್ನು ನೋಡುತ್ತಿದ್ದೇವೆ. ಅವು ಗಂಟೆಗೆ 200 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತವೆ. ಇನ್ನು ಹೈಸ್ಪೀಡ್ ಲೈನ್ ಅನ್ನು ರೈಲ್ವೆಗೆ ಜೋಡಿಸಲು ಸಮೀಕ್ಷೆ ನಡೆಯುತ್ತಿದೆ," ಎಂದು ಅವರು ಹೇಳಿದರು .
ಇದೇ ಜೋಡಣೆಯನ್ನು ಟ್ರ್ಯಾಕ್‌ಗಳನ್ನು ಬಲಪಡಿಸುವ ಮೂಲಕ ಬಳಸಬಹುದು. ಕೆಲವು ಸ್ಟ್ರೆಚ್‌ಗಳಲ್ಲಿ ನಾವು ಹೊಸ ಟ್ರ್ಯಾಕ್‌ಗಳನ್ನು ಹಾಕಬೇಕಾಗಬಹುದು. ಈ ಬಗ್ಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಮಾರ್ಚ್‌ನೊಳಗೆ ಇದು ಸಿದ್ಧವಾಗಲಿದೆ ಎಂದು ಹೇಳಿದರು.












Click it and Unblock the Notifications