ನೆಟ್ ನ್ಯೂಟ್ರಾಲಿಟಿಯಿಂದ ಮುಕ್ತ ಮತ್ತು ಉಚಿತ ಇಂಟರ್ನೆಟ್ ಗೆ ಆನೆ ಬಲ

Subscribe to Oneindia Kannada

ನವದೆಹಲಿ, ಡಿಸೆಂಬರ್ 6: ದೇಶದಲ್ಲಿ ನೆಟ್ ನ್ಯೂಟ್ರಾಲಿಟಿಯ ಬಗ್ಗೆ ಮುಕ್ತವಾದ ಚರ್ಚೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಶನ್ ಅಧ್ಯಕ್ಷ ಶುಭೋ ರಾಯ್ ನೆಟ್ ನ್ಯೂಟ್ರಾಲಿಟಿ ಮತ್ತು ಇದರ ಬಗೆಗಿನ ಟ್ರಾಯ್ ಶಿಫಾರಸ್ಸುಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಸಾಮಾನ್ಯವಾಗಿ ನೀವು ಯಾವುದೋ ಒಂದು ಚಾನಲ್ ನ್ನು ಇಂಟರ್ನೆಟ್ ನಲ್ಲಿ ನೋಡಬೇಕು ಎಂದುಕೊಂಡಿರುತ್ತೀರಿ. ಆದರೆ ನಿಮಗೆ ಇಂಟರ್ನೆಟ್ ಕಂಪನಿ ನಾವು ಈ ಚಾನಲ್ ಸೇವೆ ನೀಡುತ್ತಿಲ್ಲ. ಬೇರೆ ಚಾನಲ್ ನೋಡಲು ನಿಮಗೆ ಸಲಹೆ ನೀಡುತ್ತದೆ. ಇದು ಆ್ಯಪ್, ಇ ಕಾಮರ್ಸ್ ತಾಣಗಳಿಗೂ ಅನ್ವಯವಾಗುತ್ತದೆ.

ಈ ಮೂಲಕ ಇಂಟರ್ನೆಟ್ ಸೇವೆ ನೀಡುವ ಕಂಪೆನಿಗಳು ತಮ್ಮ ಮೂಲಕ ಹಾದು ಹೋಗುವ ಮಾಹಿತಿಗಳಿಗೆ ತಡೆ ಒಡ್ಡುತ್ತವೆ. ಇದರಿಂದ ನೀವು ಉಚಿತವಾಗಿ ಬಯಸಿದ ಹಾಗೂ ಹಣ ತೆತ್ತು ನೋಡಬೇಕು ಎಂದುಕೊಂಡ ವೆಬ್ಸೈಟ್ ನ ಮಾಹಿತಿಗಳು ಸಿಗುವುದಿಲ್ಲ.

TRAI’s Net Neutrality Recommendations Strengthens Free and Open Internet in India

ಆದರೆ ಈ ರೀತಿ ಮಾಡುವುದು ಸರಿಯಲ್ಲ. ಅಂತರ್ಜಾಲ ಸೇವೆಯನ್ನು ಮುಕ್ತವಾಗಿಡಬೇಕು. ಇದಕ್ಕೆ ಯಾರೂ ದ್ವಾರಪಾಲಕರು ಇರಬಾರದು ಎಂಬುದು ರಾಯ ಅಭಿಪ್ರಾಯವಾಗಿದೆ. ಕೆಲವೊಮ್ಮೆ ಗಣತಂತ್ರ ದೇಶಗಳಲ್ಲಿ ಜನರ ಹಕ್ಕುಗಳನ್ನು ಗೌರವಿಸುವ ಸರಕಾರ ಮಾತ್ರ ಕೆಲವು ವಿಷಯಗಳಿಗೆ ನಿರ್ಬಂಧ ವಿಧಿಸುತ್ತದೆ. ಈ ಮೂಲಕ ಸಾಂವಿಧಾನಿಕ ಹಕ್ಕುಗಳನ್ನು ಅಂತರ್ಜಾಲಕ್ಕೂ ವಿಸ್ತರಿಸಲಾಗುತ್ತದೆ ಎನ್ನುತ್ತಾರೆ ರಾಯ್.

ರಾಯ್ ಪ್ರಕಾರ ಈ ರೀತಿ ತಾರತಮ್ಯ ನಡೆಸುವ ಧೋರಣೆ ಮೊದಲು ಆರಂಭವಾಗಿದ್ದು ಅಮೆರಿಕಾದಲ್ಲಿ. ನಂತರ ಅಲ್ಲಿ ನಿರಂತರ ಪ್ರತಿಭಟನೆಗಳೆಲ್ಲಾ ನಡೆದು ಒಬಾಮ ಸರಕಾರ ಗಟ್ಟಿಯಾಗಿ ನಿಂತು ಓಪನ್ ಇಂಟರ್ನೆಟ್ ಡೈರೆಕ್ಟಿವ್ ನಿಯಮಗಳನ್ನು ಜಾರಿಗೆ ತಂದಿತು. ಆದರೆ ಭಾರತದಲ್ಲಿ ಹಾಗಾಗಲಿಲ್ಲ.

ಇಲ್ಲಿ ಪ್ರಧಾನ ಮಂತ್ರಿಗಳು ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ತಾಳದೆ ಇದನ್ನು ಟ್ರಾಯ್ ವಿವೇಚನೆ ಬಿಟ್ಟು ಬಿಟ್ಡರು. ಇದೀಗ ನೆಟ್ ನ್ಯೂಟ್ರಾಲಿಟಿಗೆ ಸಂಬಂಧಿಸಿದಂತೆ ಟ್ರಾಯ್ ಮೂರು ಶಿಫಾರಸ್ಸುಗಳನ್ನು ಮಾಡಿದ್ದು ಇವು ಮುಕ್ತ ಮತ್ತು ಸ್ವತಂತ್ರ ಅಂತರ್ಜಾಲಕ್ಕೆ ಸಂಬಂಧಿಸಿದಂತೆ ಪ್ರಮುಖವಾಗಿವೆ ಎನ್ನುತ್ತಾರೆ ರಾಯ್.

ಈ ಶಿಫಾರಸ್ಸುಗಳ ಮೂಲಕ ನ್ಯಾಯಸಮ್ಮತ ಸಾಂಪ್ರದಾಯಿಕ ವಿಧಾನದಲ್ಲಿ ನಾವು ಬದುಕಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
TRAI’s (Telecom Regulatory Authority of India) net neutrality recommendations strengthens free and open internet in India says president of Internet and Mobile Association of India, Subho Ray.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ