ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ದಿಕ್ಕು ಬದಲಿಸಿದ 'ಐದು' ಮಹಾನಗರಗಳು

|
Google Oneindia Kannada News

ದೆಹಲಿ, ಜೂನ್ 13: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ. ನಿನ್ನೆ ಒಂದೇ ದಿನ ದೇಶದಲ್ಲಿ 11,458 ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,08,993ಕ್ಕೆ ಏರಿಕೆಯಾಗಿದೆ.

Recommended Video

ಹುಚ್ಚ ವೆಂಕಟ್ ಗೆ ಹೊಡೆದವರ ಮೇಲೆ FIR ದಾಖಲು | Huccha Venkat | Srirangapatna

ಅಮೆರಿಕ, ಬ್ರೆಜಿಲ್, ರಷ್ಯಾ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್ ಸೋಂಕು ಹೊಂದಿರುವ ನಾಲ್ಕನೇ ರಾಷ್ಟ್ರ ಭಾರತ ಎನಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಸೋಂಕು ವರದಿಯಾಗಿದೆ. ದೇಶದ ಶೇಕಡಾ 41ರಷ್ಟು ಕೇಸ್‌ಗಳು ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದಲೇ ವರದಿಯಾಗಿದೆ.

Breaking: ಕೊರೊನಾ ಸೋಂಕು ಹೆಚ್ಚಳ: ಬೀಜಿಂಗ್‌ನಲ್ಲಿ ಮತ್ತೆ ಲಾಕ್‌ಡೌನ್ Breaking: ಕೊರೊನಾ ಸೋಂಕು ಹೆಚ್ಚಳ: ಬೀಜಿಂಗ್‌ನಲ್ಲಿ ಮತ್ತೆ ಲಾಕ್‌ಡೌನ್

ಇನ್ನು ದೆಹಲಿ ಮತ್ತು ಗುಜರಾತ್‌ನಲ್ಲಿ 20 ಸಾವಿರಕ್ಕೂ ಹೆಚ್ಚ ಕೇಸ್‌ಗಳು ವರದಿಯಾಗಿದೆ. ಹಾಗ್ನೋಡಿದ್ರೆ, ದೇಶದ ಐದು ನಗರಗಳಲ್ಲಿ ಮಾತ್ರ ಕೊರೊನಾ ಅಟ್ಟಹಾಸ ಮಾಡಿದೆ. ಈ ಐದು ನಗರಗಳಿಂದಲೇ ದೇಶದ 50ರಷ್ಟು ಸೋಂಕು ಪತ್ತೆಯಾಗಿದೆ. ಒಂದು ಹಂತಕ್ಕೆ ದೇಶದಲ್ಲಿ ನಿಯಂತ್ರಣದಲ್ಲಿ ಕೊರೊನಾ ವೈರಸ್ ದಿಕ್ಕು ಬದಲಿಸಿದ್ದೇ ಆ ಐದು ನಗರಗಳು. ಅಷ್ಟಕ್ಕೂ, ಆ ಐದು ರಾಜ್ಯಗಳು ಯಾವುದು? ಯಾವ ರಾಜ್ಯದಲ್ಲಿ ಎಷ್ಟು ಕೇಸ್ ದಾಖಲಾಗಿದೆ. ಮುಂದೆ ಓದಿ....

ದೇಶಕ್ಕೆ ಬಹುದೊಡ್ಡ ಕಂಟಕ ಮುಂಬೈ

ದೇಶಕ್ಕೆ ಬಹುದೊಡ್ಡ ಕಂಟಕ ಮುಂಬೈ

ಮಹಾರಾಷ್ಟ್ರದಲ್ಲಿ 1,01,141 ಜನರಿಗೆ ಕೊರೊನಾ ಸೋಂಕು ತಗುಲಿದ್ದರೆ, ಅದರಲ್ಲಿ ಶೇಕಡಾ 50ರಷ್ಟು ಕೇಸ್ ಮುಂಬೈಗೆ ಸೇರಿದ್ದು. ಮುಂಬೈನಲ್ಲಿ ಒಟ್ಟು 55,451 ಜನರಿಗೆ ಮಹಾಮಾರಿ ವಕ್ಕರಿಸಿದೆ. ಭಾರತದ ಪಾಲಿಗೆ ಮುಂಬೈ ನಂಬರ್ ವನ್ ಕೊರೊನಾ ಹಾಟ್‌ಸ್ಪಾಟ್‌ ನಗರವಾಗಿದೆ. ಇದುವರೆಗೂ 2044 ಮಂದಿ ಮುಂಬೈನಲ್ಲಿ ಸಾವನ್ನಪ್ಪಿದ್ದಾರೆ. ಈಜಿಫ್ಟ್, ನೆದರ್ಲಂಡ್, ಸ್ವಿಡೇನ್, ಯುಎಇ ದೇಶಗಳಿಗಿಂತ ಮುಂಬೈನಲ್ಲಿ ಹೆಚ್ಚು ಕೇಸ್ ದಾಖಲಾಗಿದೆ.

ಮುಂಬೈನ ಅವಳಿ ನಗರ ಪುಣೆ-ಥಾಣೆ

ಮುಂಬೈನ ಅವಳಿ ನಗರ ಪುಣೆ-ಥಾಣೆ

ಮಹಾರಾಷ್ಟ್ರದಲ್ಲಿ ಮುಂಬೈ ಮಾತ್ರವಲ್ಲ ಪುಣೆ ಮತ್ತು ಥಾಣೆ ನಗರಗಳಲ್ಲಿಯೂ ಕೊರೊನಾ ರಣಕೇಕೆ ಹಾಕಿದೆ. ಪುಣೆ ನಗರದಲ್ಲಿ ಒಟ್ಟು 11,281 ಮಂದಿಗೆ ಸೋಂಕು ತಗುಲಿದ್ದರೆ, ಥಾಣೆಯಲ್ಲಿ 16,443 ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲೇ ಮೂರು ನಗರಗಳು ಕೊವಿಡ್ ಹಾಟ್‌ಸ್ಪಾಟ್‌ ಆಗಿವೆ.

'ಕೊರೊನಾ ತಡೆಯಲು ಈ ಔಷಧಿ ಬಳಸಬೇಕಂತೆ': ಇದು ನಕಲಿ ಔಷಧಿ ಚೀಟಿ ಎಚ್ಚರಿಕೆ'ಕೊರೊನಾ ತಡೆಯಲು ಈ ಔಷಧಿ ಬಳಸಬೇಕಂತೆ': ಇದು ನಕಲಿ ಔಷಧಿ ಚೀಟಿ ಎಚ್ಚರಿಕೆ

ಚೆನ್ನೈನಲ್ಲಿ ಕೊರೊನಾ ರಣಕೇಕೆ

ಚೆನ್ನೈನಲ್ಲಿ ಕೊರೊನಾ ರಣಕೇಕೆ

ದಕ್ಷಿಣ ಭಾರತ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಕೊರೊನಾ ರುದ್ರನರ್ತನ ಮಾಡಿದೆ. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಅಂಟಿಕೊಂಡಿದೆ. ಚೆನ್ನೈ ಮಹಾನಗರದಲ್ಲಿ ಮಾತ್ರ 28924 ಮಂದಿಗೆ ಕೊವಿಡ್ ದೃಢವಾಗಿದೆ. ತಮಿಳುನಾಡಿನ ಒಟ್ಟು ಪ್ರಕರಣಗಳಲ್ಲಿ ಶೇಕಡಾ 70 ರಷ್ಟು ಕೇಸ್ ಚೆನ್ನೈನಲ್ಲಿ ವರದಿಯಾಗಿದೆ.

ಡೇಂಜರ್‌ಜೋನ್‌ನಲ್ಲಿ ಅಹಮದಬಾದ್

ಡೇಂಜರ್‌ಜೋನ್‌ನಲ್ಲಿ ಅಹಮದಬಾದ್

ಮುಂಬೈ, ಚೆನ್ನೈ ನಗರಗಳಂತೆ ಗುಜರಾತ್‌ನ ಅಹಮದಬಾದ್‌ನಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ಗುಜರಾತ್‌ನಲ್ಲಿ ಒಟ್ಟು 22,527 ಮಂದಿಗೆ ಕೊರೊನಾ ತಗುಲಿದೆ. ಅದರಲ್ಲಿ 15,962 ಜನರು ಅಹಮದಬಾದ್‌ಗೆ ಸೇರಿದವರು. ಗುಜರಾತ್‌ನಲ್ಲಿ ಒಟ್ಟು 1416 ಜನರು ಪ್ರಾಣ ಕಳೆದುಕೊಂಡಿದ್ದರೆ, ಅದರಲ್ಲಿ 1139 ಮಂದಿ ಅಹಮದಬಾದ್‌ ಮೂಲವದರು.

 ರಾಷ್ಟ್ರರಾಜಧಾನಿಯನ್ನ ಮರೆಯುವಂತಿಲ್ಲ

ರಾಷ್ಟ್ರರಾಜಧಾನಿಯನ್ನ ಮರೆಯುವಂತಿಲ್ಲ

ದೇಶದ ಐದು ಕೊರೊನಾ ಹಾಟ್‌ಸ್ಪಾಟ್‌ ನಗರಗಳ ಜೊತೆ ರಾಷ್ಟ್ರ ರಾಜಧಾನಿ ದೆಹಲಿ ಕೊಡುಗೆ ಮರೆಯುವಂತಿಲ್ಲ. ಭೂ ವಿಸ್ತೀರ್ಣದಲ್ಲಿ ಚಿಕ್ಕದಾಗಿದ್ದರೂ ಕೊರೊನಾ ಕೇಸ್‌ಗಳ ಪಟ್ಟಿಯಲ್ಲಿ ಟಾಪ್‌ನಲ್ಲಿದೆ. ದೆಹಲಿಯಲ್ಲಿ ಈವರೆಗೂ 36824 ಮಂದಿಗೆ ಕೊವಿಡ್ ಸೋಂಕು ತಗುಲಿದೆ. 1214 ಜನರು ಪ್ರಾಣ ಕಳೆದುಕೊಂಡಿದ್ದಾರೆ.

English summary
Coronavirus Update In India: Mumbai, Pune, Ahmedabad, Chennai, Jaipur are among the cities with high Covid-19 cases in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X