Toll Plaza: ಟೋಲ್ ಶುಲ್ಕ ಸಂಗ್ರಹ ಸ್ಥಗಿತದ ಕುರಿತು ನಿತಿನ್ ಗಡ್ಡರಿ ಮಹತ್ವದ ಅಪ್ಡೇಟ್
Toll Plaza: ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾ ಕುರಿತು ಒಂದಲ್ಲ ಒಂದು ವಿಚಾರಗಳು ಮುನ್ನಲಡಗೆ ಬರುತ್ತಲೇ ಇರುತ್ತದೆ. ಹಾಗೆಯೇ ಇದೀಗ ಹೆದ್ದಾರಿ ಶುಲ್ಕ ಸಂಗ್ರಹದ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ಸಂಗ್ರಹವು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಶಾಶ್ವತವಾಗಿ ಮುಂದುವಯಲಿದೆ. ಅದನ್ನು ಸ್ಥಗಿತಗೊಳಿಸುವ ಪ್ರಸ್ತಾಪಗಳು ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಡಿಎಂಕೆ ರಾಜ್ಯಸಭಾ ಸದಸ್ಯ ಪಿ.ವಿಲ್ಸನ್ ಅವರು, ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ಮಾಡಲಾದ ಹೂಡಿಕೆ ಮತ್ತು ಸಂಗ್ರಹಿಸಿದ ಹಣದ ಲೆಕ್ಕ ಪರಿಶೋಧನೆ ಮಾಡಲಾಗುತ್ತಿದೆಯೇ ಹಾಗೂ ಟೋಲ್ ಶುಲ್ಕವನ್ನು ಇಳಿಕೆ ಮಾಡುವ ಇಲ್ಲವೇ ಟೋಲ್ ಪ್ಲಾಜಾಗಳನ್ನು ಮುಚ್ಚುವ ಪ್ರಸ್ತಾಪಗಳಿವೆಯೇ ಎಂದು ಪ್ರಶ್ನೆ ಕೇಳಿದದರು. ಇದಕ್ಕೆ ನಿತಿನ್ ಗಡ್ಕರಿ ಅವರು ಉತ್ತರವನ್ನೂ ಕೂಡ ಕೊಟ್ಟಿದ್ದಾರೆ.
ನಿತಿನ್ ಗಡ್ಡರಿ ಹೇಳಿದ್ದೇನು?: ಇದಕ್ಕೆ ಉತ್ತರಿಸಿದ ಸಚಿವ ನಿತಿನ್ ಗಡ್ಕರಿ ಅವರು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರಿಂದ ಟೋಲ್ ಶುಲ್ಕವನ್ನು ನಿರಂತರವಾಗಿ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಹಣದ ಹೂಡಿಕೆ ಹಾಗೂ ಸಂಗ್ರಹಿಸಿದ ಹಣ, ಶುಲ್ಕ ಕಡಿಮೆ ಮಾಡುವ ಪ್ರಶ್ನೇಯೇ ಇಲ್ಲ. ಅಲ್ಲದೆ, ಟೋಲ್‌ಗಳನ್ನು ಸ್ಥಗಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉತ್ತರಿಸಿದರು.
2008ರ ರಾಷ್ಟ್ರೀಯ ಹೆದ್ದಾರಿಗಳ ನಿಯಮಗಳ ಪ್ರಕಾರ, ರಿಯಾಯಿತಿ ಒಪ್ಪಂದದ ಪ್ರಕಾರ, ಗುರುತಿಸಲಾದ ಶುಲ್ಕವು ರಿಯಾಯಿತಿ ಅವಧಿ ಮುಗಿಯುವವರೆಗೂ ಒಮ್ಮೆ ರಿಯಾಯಯಿತಿ ಸಮಯ ಮುಗಿದ ಬಳಿಕ ಶುಲ್ಕವನ್ನು ಸರ್ಕಾರ, ಇಲ್ಲವೇ ಸಂಬಂಧಿಸಿದ ಪ್ರಾಧಿಕಾರವು ಸಂಗ್ರಹಿಸಲಿದೆ ಎಂದು ಮಾಹಿತಿ ನೀಡಿದರು.
ನಿಯಮಗಳ ಅನ್ವಯ ರಾಷ್ಟ್ರೀಯ ಹೆದ್ದಾರಿ, ಸೇತುವೆ, ಸುರಂಗ ಅಥವಾ ಬೈಪಾಸ್‌ಗಳಂತಹ ವಿಭಾಗಗಳಿಗೆ ವಿಧಿಸಬಹುದಾದ ಶುಲ್ಕವನ್ನು ಶಾಶ್ವತವಾಗಿ ಸಂಗ್ರಹಿಸುವುದನ್ನು ಮುಂದುವರೆಸಲಾಗುತ್ತದೆ ಎಂದು ಸಚಿವ ನಿತಿನ ಗಡ್ಕರಿ ಅವರು ತಿಳಿಸಿದರು.
ಬಿಲ್ಡ್ ಆಪರೇಟ್ ಟ್ರಾನ್ಸ್‌ಫರ್ ಯೋಜನೆಗಳ ವಿಷಯದಲ್ಲಿ, ರಿಯಾಯಿತಿ ಅವಧಿ ಮುಗಿದ ಬಳಿಕ ಟೋಲ್ ಪ್ಲಾಜಾವನ್ನು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಬಳಿಕ ಬಳಕೆದಾರ ಶುಲ್ಕವನ್ನು ಸರ್ಕಾರವು ತನ್ನ ಅನುಷ್ಠಾನ ಸಂಸ್ಥೆಗಳ ಮೂಲಕ ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದರು.












Click it and Unblock the Notifications