ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಖಿಲೇಶ ಅಕಟಕಟಾ, ಈ ತಾಯಿ ಅಳು ಕಾಣದೆ!

By Mahesh
|
Google Oneindia Kannada News

ಬೆಂಗಳೂರು, ಮಾ.4: ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಅರಾಜಕತೆ ಮುಂದುವರೆದಿದೆ. ಕಿರಿಯ ವೈದ್ಯರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ. ಸರ್ಕಾರದ ಮನವಿಗೆ ವೈದ್ಯರು ಪುರಸ್ಕರಿಸುತ್ತಿಲ್ಲ. ಸುಮಾರು 300ಕ್ಕೂ ಅಧಿಕ ವೈದ್ಯ ಶಿಕ್ಷಕರು ರಾಜೀನಾಮೆ ನೀಡಿದ್ದಾರೆ. ಇತ್ತ ಈ ಗೊಂದಲಗಳಿಂದಾಗಿ ಜನತೆ ತತ್ತರಿಸುತ್ತಿದ್ದಾರೆ. ತಾಯಿಯೊಬ್ಬರು ತನ್ನ ಮಗುವಿನ ಆರೋಗ್ಯ ಬಗ್ಗೆ ಚಿಂತಿಸುತ್ತಾ ಆಸ್ಪತ್ರೆ ಹೊರಗಡೆ ದುಃಖಿಸಿದ ಚಿತ್ರ ಇಲ್ಲಿದೆ.

ಜಿಎಸ್ ವಿ ಮೆಡಿಕಲ್ ಕಾಲೇಜಿನ 24 ಕಿರಿಯ ವೈದ್ಯರ ಬಿಡುಗಡೆಗೆ ಅಗ್ರಹಿಸಿ ಕಾನ್ಪುರದ ಎಸ್ಎಸ್ಪಿ ಯಶಸ್ವಿನಿ ಯಾದವ್ ಹಾಗೂ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಿ ವೈದ್ಯರು, ಖಾಸಗಿ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು, ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಬನಾರಸ್ ಹಿಂದೂ ವಿವಿಯ ವಿದ್ಯಾರ್ಥಿಗಳು ಹೋರಾಟಕ್ಕೆ ಸಾಥ್ ನೀಡಿದ್ದಾರೆ. 24 ವಿದ್ಯಾರ್ಥಿಗಳ ಮೇಲೆ ಗಲಭೆ, ದೊಂಬಿಯಲ್ಲಿ ತೊಡಗಿದ ಆರೋಪ ಹೊರೆಸಲಾಗಿದೆ.

ಉಳಿದಂತೆ ಟಾಟಾ ಸಮೂಹದ ಸಂಸ್ಥಾಪಕ ಜೆ.ಎನ್ ಟಾಟಾರ 175ನೇ ಜನ್ಮ ದಿನೋತ್ಸವವನ್ನು ಟಾಟಾ ಸಮೂಹದ ಸಿಇಒ ಸೈರಸ್ ಮಿಸ್ತ್ರಿ ಅವರು ಜೇಮ್ಶೇಡ್ ಪುರದಲ್ಲಿ ಆಚರಿಸಿದರು. ವಾಷಿಂಗ್ಟನ್ ನಿಂದ ಬಂದಿರುವ ಚಳಿಗಾಲದ ಚಿತ್ರ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನಿಗೆ ರಷ್ಯಾ ಮಿಲಿಟರಿ ಪಡೆ ಕಳಿಸಲು ಸನ್ನದ್ಧರಾಗಿರುವ ಚಿತ್ರ, ಬ್ರೆಜಿಲಿನಲ್ಲಿ ಸಾಂಬಾ ನೃತ್ಯ, ಬಿಜೆಪಿ ಪ್ರಧಾನಿ ಅಭ್ಯರ್ಥಿ ಜತೆ ವೇದಿಕೆ ಹಂಚಿಕೊಂಡ ರಾಮ್ ವಿಲಾಸ್ ಪಾಸ್ವಾನ್, ಎನ್ ಡಿ ತಿವಾರಿ ಹಾಗೂ ಪುತ್ರನ ಸಮಾಗಮ ಮುಂತಾದ ಚಿತ್ರಗಳಿವೆ...

ಅಖಿಲೇಶ ಅಕಟಕಟಾ, ಈ ತಾಯಿ ಆಳು ಕಾಣದೆ!

ಅಖಿಲೇಶ ಅಕಟಕಟಾ, ಈ ತಾಯಿ ಆಳು ಕಾಣದೆ!

ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಅರಾಜಕತೆ ಮುಂದುವರೆದಿದೆ. ಕಿರಿಯ ವೈದ್ಯರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ. ಸರ್ಕಾರದ ಮನವಿಗೆ ವೈದ್ಯರು ಪುರಸ್ಕರಿಸುತ್ತಿಲ್ಲ. ಸುಮಾರು 300ಕ್ಕೂ ಅಧಿಕ ವೈದ್ಯ ಶಿಕ್ಷಕರು ರಾಜೀನಾಮೆ ನೀಡಿದ್ದಾರೆ. ಇತ್ತ ಈ ಗೊಂದಲಗಳಿಂದಾಗಿ ಜನತೆ ತತ್ತರಿಸುತ್ತಿದ್ದಾರೆ. ತಾಯಿಯೊಬ್ಬರು ತನ್ನ ಮಗುವಿನ ಆರೋಗ್ಯ ಬಗ್ಗೆ ಚಿಂತಿಸುತ್ತಾ ಆಸ್ಪತ್ರೆ ಹೊರಗಡೆ ದುಃಖಿಸಿದ ಚಿತ್ರ ಇಲ್ಲಿದೆ.

ಜೆ.ಎನ್ ಟಾಟಾರ 175ನೇ ಜನ್ಮ ದಿನೋತ್ಸವ

ಜೆ.ಎನ್ ಟಾಟಾರ 175ನೇ ಜನ್ಮ ದಿನೋತ್ಸವ

ಟಾಟಾ ಸಮೂಹದ ಸಂಸ್ಥಾಪಕ ಜೆ.ಎನ್ ಟಾಟಾರ 175ನೇ ಜನ್ಮ ದಿನೋತ್ಸವವನ್ನು ಟಾಟಾ ಸಮೂಹದ ಸಿಇಒ ಸೈರಸ್ ಮಿಸ್ತ್ರಿ ಅವರು ಜೇಮ್ಶೇಡ್ ಪುರದಲ್ಲಿ ಆಚರಿಸಿದರು.

300ಕ್ಕೂ ಅಧಿಕ ವೈದ್ಯ ಶಿಕ್ಷಕರು ರಾಜೀನಾಮೆ

300ಕ್ಕೂ ಅಧಿಕ ವೈದ್ಯ ಶಿಕ್ಷಕರು ರಾಜೀನಾಮೆ

ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದಲ್ಲಿ ಅರಾಜಕತೆ ಮುಂದುವರೆದಿದೆ. ಕಿರಿಯ ವೈದ್ಯರ ಮೇಲೆ ಪೊಲೀಸರ ದಬ್ಬಾಳಿಕೆ ಖಂಡಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ. ಸರ್ಕಾರದ ಮನವಿಗೆ ವೈದ್ಯರು ಪುರಸ್ಕರಿಸುತ್ತಿಲ್ಲ. ಸುಮಾರು 300ಕ್ಕೂ ಅಧಿಕ ವೈದ್ಯ ಶಿಕ್ಷಕರು ರಾಜೀನಾಮೆ ನೀಡಿದ್ದಾರೆ.

ಉಕ್ರೇನಿಗೆ ರಷ್ಯಾ ಮಿಲಿಟರಿ ಪಡೆ

ಉಕ್ರೇನಿಗೆ ರಷ್ಯಾ ಮಿಲಿಟರಿ ಪಡೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಉಕ್ರೇನಿಗೆ ರಷ್ಯಾ ಮಿಲಿಟರಿ ಪಡೆ ಕಳಿಸಲು ಸನ್ನದ್ಧ ಎಂಬ ಸುಳಿವು ನೀಡಿದ್ದಾರೆ

ಎನ್ ಡಿ ತಿವಾರಿ ಹಾಗೂ ಪುತ್ರನ ಸಮಾಗಮ

ಎನ್ ಡಿ ತಿವಾರಿ ಹಾಗೂ ಪುತ್ರನ ಸಮಾಗಮ

ಕಾಂಗ್ರೆಸ್ ಮುಖಂಡ ಎನ್ ಡಿ ತಿವಾರಿ ಹಾಗೂ ಪುತ್ರ ರೋಹಿತ್ ಸಮಾಗಮ

ವಾಷಿಂಗ್ಟನ್ ನಿಂದ ಬಂದಿರುವ ಚಳಿಗಾಲದ ಚಿತ್ರ

ವಾಷಿಂಗ್ಟನ್ ನಿಂದ ಬಂದಿರುವ ಚಳಿಗಾಲದ ಚಿತ್ರ

ವಾಷಿಂಗ್ಟನ್ ನ ಕಾಪಿಟಲ್ ಹಿಲ್ ನಿಂದ ಬಂದಿರುವ ಚಳಿಗಾಲದ ಚಿತ್ರ. ಗ್ರೇಟರ್ ವಾಷಿಂಗ್ಟನ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಹಿಮಪಾತದ ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶದ ಶಾಲಾ-ಕಾಲೇಜುಗಳು ಮುಚ್ಚಿವೆ.

ರಿಯೋ ಡಿಜನೈರೋನಿಂದ ಸಾಂಬಾ ನೃತ್ಯ

ರಿಯೋ ಡಿಜನೈರೋನಿಂದ ಸಾಂಬಾ ನೃತ್ಯ

ರಿಯೋ ಡಿಜನೈರೋನಿಂದ ಸಾಂಬಾ ನೃತ್ಯದ ಚಿತ್ರ (Xinhua/Xu Zijian/IANS)(ctt)

ಕಾರ್ನಿವಲ್ ಪರೇಡ್

ಕಾರ್ನಿವಲ್ ಪರೇಡ್

ಲೂಸರ್ನೆ ನಲ್ಲಿ ವಾರ್ಷಿಕ ಕಾರ್ನಿವಲ್ ಪರೇಡ್ ನಲ್ಲಿ ಕಂಡು ಬಂದ ದೃಶ್ಯ AP/PTI

ಒಂದೇ ವೇದಿಕೆಯಲ್ಲಿ ಮೋದಿ ಜತೆ ಪಾಸ್ವಾನ್

ಒಂದೇ ವೇದಿಕೆಯಲ್ಲಿ ಮೋದಿ ಜತೆ ಪಾಸ್ವಾನ್

ಬಿಜೆಪಿ ಬೆಂಬಲ ದೊರೆತ ಮೇಲೆ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಒಂದೇ ವೇದಿಕೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ರಾಮ್ ವಿಲಾಸ್ ಪಾಸ್ವಾನ್ ಜತೆ ಬಿಹಾರದ ಮುಜಾಫರ್ ಪುರ್ ನಲ್ಲಿ ಕಾಣಿಸಿಕೊಂಡರು. (Photo: IANS)

English summary
Todays news stories in pics around the world: Nearly 300 teachers of GSV Medical College in Kanpur resigned on Monday in the wake of a massive protest by junior doctors against the arrest of their colleagues, paralysing medical service. Oneindia News brings to you interesting photographs from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X