ಚಿತ್ರಸುದ್ದಿ : ಕೆಸಿಆರ್ 60, ತೆಲಂಗಾಣ ಸೃಷ್ಟಿ

ಹೈದರಾಬಾದ್, ಫೆ.18: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಜೀವಮಾನವನ್ನೇ ಮುಡಿಪಾಗಿಟ್ಟು ಹೋರಾಟ ನಡೆಸುತ್ತಾ ಬಂದಿರುವ ಕೆ.ಸಿ ಚಂದ್ರಶೇಖರ್ ಅವರಿಗೆ ಈಗ 60 ರ ಹರೆಯ. ಯುಪಿಎ ಸರ್ಕಾರ ತೆಲಂಗಾಣ ರಾಜ್ಯ ಮಸೂದೆ ಮಂಡನೆ ವಿಳಂಬ ಮಾಡಿರುವುದು ಕೆಸಿಆರ್ ಅವರ ಮನೆಯ ಸಂಭ್ರಮಕ್ಕೂ ತಣ್ಣಿರೆರೆಚಿದೆ. ಕೆಸಿಆರ್ ಅವರ ಷಷ್ಠಿಪೂರ್ತಿ ಮಹೋತ್ಸವ ಸರಳವಾಗಿ ಆಪ್ತರು ಬಂಧುಮಿತ್ರರ ಸಮ್ಮುಖದಲ್ಲಿ ಜರುಗಿದೆ.

ಕೆಸಿಆರ್ ಅವರು ಮಗಳು ಕೆ. ಕವಿತಾ ಅವರ ಒತ್ತಾಯದ ಮೇರೆಗೆ ಸೂಟುಧಾರಿಯಾಗಿ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ತಿನ್ನಿಸಿದ್ದಾರೆ. ಪ್ರತ್ಯೇಕ ತೆಲಂಗಾಣದಲ್ಲಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಕೋರಿದ್ದಾರೆ. ಇದೀಗ ಬಂದ ಸುದ್ದಿ ಪ್ರಕಾರ (ಸಮಯ 3.30 ಸಂಸತ್ತಿನಲ್ಲಿ ಕೇವಲ 23 ನಿಮಿಷಗಳಲ್ಲಿ ಧ್ವನಿಮತದ ಮೂಲಕ ತೆಲಂಗಾಣ ರಚನೆ ವಿಧೇಯಕ ಅಂಗೀಕಾರವಾಗಿದೆ.)

ಉಳಿದಂತೆ ಇಂದಿನ ಚಿತ್ರಸುದ್ದಿಯಲ್ಲಿ ಡಿಎಂಕೆ ಪಕ್ಷದ 50ನೇ ಸ್ಥಾಪನಾ ದಿನಾಚರಣೆ, ದೆಹಲಿಯ ಪ್ರಾಣಿ ಸಂಗ್ರಹಾಲಯದಲ್ಲಿ ರಾಷ್ಟ್ರ ಪಕ್ಷಿ ನರ್ತನ, ಹೈದರಾಬಾದಿನಲ್ಲಿ ವಿದ್ಯಾರ್ಥಿನಿಯರ ಸಾಹಸ ಅಭ್ಯಾಸ, ಶ್ರೀನಗರದಲ್ಲಿನ ಚಳಿ ಚಳಿ ದೃಶ್ಯಗಳಿವೆ ತಪ್ಪದೇ ನೋಡಿ...

 ಕೆಸಿಆರ್ 60, ತೆಲಂಗಾಣ 'ನೋ'ಸೃಷ್ಟಿ

ಕೆಸಿಆರ್ 60, ತೆಲಂಗಾಣ 'ನೋ'ಸೃಷ್ಟಿ

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿ ಜೀವಮಾನವನ್ನೇ ಮುಡಿಪಾಗಿಟ್ಟು ಹೋರಾಟ ನಡೆಸುತ್ತಾ ಬಂದಿರುವ ಕೆ.ಸಿ ಚಂದ್ರಶೇಖರ್ ಅವರಿಗೆ ಈಗ 60 ರ ಹರೆಯ.

ಕೆಸಿಆರ್ 60 ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ

ಕೆಸಿಆರ್ 60 ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ

ಯುಪಿಎ ಸರ್ಕಾರ ತೆಲಂಗಾಣ ರಾಜ್ಯ ಮಸೂದೆ ಮಂಡನೆ ವಿಳಂಬ ಮಾಡಿರುವುದು ಕೆಸಿಆರ್ ಅವರ ಮನೆಯ ಸಂಭ್ರಮಕ್ಕೂ ತಣ್ಣಿರೆರೆಚಿದೆ. ಕೆಸಿಆರ್ ಅವರ ಷಷ್ಠಿಪೂರ್ತಿ ಮಹೋತ್ಸವ ಸರಳವಾಗಿ ಆಪ್ತರು ಬಂಧುಮಿತ್ರರ ಸಮ್ಮುಖದಲ್ಲಿ ಜರುಗಿದೆ.

 ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಅಸ್ತು

ತೆಲಂಗಾಣ ರಾಜ್ಯ ರಚನೆ ವಿಧೇಯಕಕ್ಕೆ ಅಸ್ತು

ತೆಲಂಗಾಣ ಪರ ಹೋರಾಟಾಗರ ಕೆಸಿ ಚಂದ್ರಶೇಖರ್ ಅವರು 60ನೇ ಹುಟ್ಟುಹಬ್ಬ ಆಚರಣೆ ಬೆನ್ನಲ್ಲೇ ವಿಧೇಯಕಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿರುವುದು ತೆಲಂಗಾಣ ಭಾಗದ ಜನತೆಯ ಹರ್ಷವನ್ನು ಹಿಗ್ಗಿಸಿದೆ.

ತಿರುಚನಾಪಳ್ಳಿಯಲ್ಲಿ ಡಿಎಂಕೆ ನಾಯಕಿ ಖುಷ್ಬೂ

ತಿರುಚನಾಪಳ್ಳಿಯಲ್ಲಿ ಡಿಎಂಕೆ ನಾಯಕಿ ಖುಷ್ಬೂ

ತಿರುಚನಾಪಳ್ಳಿಯಲ್ಲಿ ಡಿಎಂಕೆ ಪಕ್ಷದ 50ನೇ ಹಬ್ಬದ ಸಂಭ್ರಮದಲ್ಲಿ ನಾಯಕಿ ಖುಷ್ಬೂ ಭಾಷಣ

ದೆಹಲಿ ಪ್ರಾಣಿಸಂಗ್ರಹಾಲಯದಲ್ಲಿ ನವಿಲು

ದೆಹಲಿ ಪ್ರಾಣಿಸಂಗ್ರಹಾಲಯದಲ್ಲಿ ನವಿಲು

ನವದೆಹಲಿ : ದೆಹಲಿ ಪ್ರಾಣಿಸಂಗ್ರಹಾಲಯದಲ್ಲಿ ನವಿಲು ಕಂಡು ಬಂದಿದ್ದು ಹೀಗೆ PTI Photo by Kamal Kishore.. ನವಿಲು ರಕ್ಷಣೆ ಬಗ್ಗೆ ಲೇಖನ ಇಲ್ಲಿ ಓದಿ

ಅಮೃತಸರ್ ದಲ್ಲಿ ನಟಿ ಹ್ಯೂಮಾ ಖುರೇಶಿ

ಅಮೃತಸರ್ ದಲ್ಲಿ ನಟಿ ಹ್ಯೂಮಾ ಖುರೇಶಿ

ಆಭರಣ ಮಳಿಗೆ ಪ್ರಚಾರಕ್ಕಾಗಿ ಅಮೃತಸರ್ ಗೆ ಬಂದಿದ್ದ ಬಾಲಿವುಡ್ ನಟಿ ಹ್ಯೂಮಾ ಖುರೇಶಿ.PTI Photo by Deepak Sharma

ಶ್ರೀನಗರದಿಂದ ಬಂದ ಚಳಿ ಚಳಿ ಚಿತ್ರ

ಶ್ರೀನಗರದಿಂದ ಬಂದ ಚಳಿ ಚಳಿ ಚಿತ್ರ

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರು ಚಳಿಗಾಲದ ಮಜಾ ಅನುಭವಿಸುತ್ತಿದ್ದಾರೆ. PTI Photo by S Irfan

ಹಿಮ ಆವೃತ ಮರಗಳ ಹಾದಿಯಲ್ಲಿ

ಹಿಮ ಆವೃತ ಮರಗಳ ಹಾದಿಯಲ್ಲಿ

ಶ್ರೀನಗರ : ಹಿಮ ಆವೃತ ಮರಗಳ ಹಾದಿಯಲ್ಲಿ ಸಾಗುತ್ತಿರುವ ಪ್ರವಾಸಿಗ

ವಿದ್ಯಾರ್ಥಿನಿಗಳಿಂದ ಆತ್ಮರಕ್ಷಣೆ ಕಲೆ ಕಲಿಕೆ

ವಿದ್ಯಾರ್ಥಿನಿಗಳಿಂದ ಆತ್ಮರಕ್ಷಣೆ ಕಲೆ ಕಲಿಕೆ

ಹೈದರಾಬಾದಿನಲ್ಲಿ ವಿದ್ಯಾರ್ಥಿನಿಗಳಿಂದ ಆತ್ಮರಕ್ಷಣೆ ಕಲೆ ಕಲಿಕೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+