• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ಚುನಾವಣೆ, ಚಳವಳಿ, ಚಳಿಗಾಲ

By Mahesh
|

ಬೆಂಗಳೂರು, ಡಿ.23: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ನಲ್ಲಿ ಚುನಾವಣೆ ಫಲಿತಾಂಶದ ಸಂಭ್ರಮಾಚರಣೆ ಚಿತ್ರಗಳು ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ನಾವು ಸಿದ್ಧ ಎಂದಿರುವ ಪಿಡಿಪಿ, ಜಾರ್ಖಂಡ್ ನಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ.. ಕದನ ಕುತೂಹಲ ಚಿತ್ರಗಳು, ಜಂತರ್ ಮಂತರ್ ಬಳಿ ಮೋದಿ ಸರ್ಕಾರದ ವಿರುದ್ಧ ಸಿಡಿದೆದ್ದ ಸಮಾಜವಾದಿ ಸೋದರರು, ಚಳಿಗಾಲದ ಉತ್ತರ ಭಾರತ, ಕಾಮಸೂತ್ರ ಮಿಸ್ ಮ್ಯಾಕ್ಸಂ, ಸೇರಿದಂತೆ ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ ನೋಡಿ...

ಜಾರ್ಖಂಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳು

ಜಾರ್ಖಂಡ್ ನಲ್ಲಿ ಬಿಜೆಪಿ ಅಭ್ಯರ್ಥಿಗಳು

ಜಾರ್ಖಂಡ್ ನ ಧನ್ ಬಾದ್ ಅಸೆಂಬ್ಲಿಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರು ಅನಾಮಧೇಯವಾಗಿ ಬಿದ್ದಿದ್ದ 400ಕ್ಕೂ ಅಧಿಕ ಮತಯಂತ್ರಗಳನ್ನು ಪರಿಶೀಲಿಸುತ್ತಿದ್ದಾರೆ.

ಮಿಸ್ ಬಿಹಾರ್ ಸೌಂದರ್ಯ ಸ್ಪರ್ಧೆ

ಮಿಸ್ ಬಿಹಾರ್ ಸೌಂದರ್ಯ ಸ್ಪರ್ಧೆ

ಮಿಸ್ ಬಿಹಾರ್ ಸೌಂದರ್ಯ ಸ್ಪರ್ಧೆ ವಿಜೇತರಾದ ಮಿಸ್ ನೇಹಾ ಸಿಂಗ್(ಮಧ್ಯೆ), ಮೊದಲ ರನ್ನರ್ ಅಪ್ ತಾನ್ಯ(ಎಡಬದಿ) ರುಚಿ ಸಿಂಗ್ (ಬಲ ಬದಿ)

ನವದೆಹಲಿಯಲ್ಲಿ ಚಳಿ ಹೊಡೆತಕ್ಕೆ ಸಿಲುಕಿದ ಗೌಡ್ರು

ನವದೆಹಲಿಯಲ್ಲಿ ಚಳಿ ಹೊಡೆತಕ್ಕೆ ಸಿಲುಕಿದ ಗೌಡ್ರು

ನವದೆಹಲಿ: ಜಂತರ್ ಮಂತರ್ ಬಳಿ ನಡೆದ ಜನತಾ ಪರಿವಾರ ಸಮಾವೇಶದಲ್ಲಿ ಚಳಿ ತಡೆದುಕೊಂಡು ಕುಳಿತ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ.

ಜನತಾ ಪರಿವಾರದ ಮುಖಂಡರು

ಜನತಾ ಪರಿವಾರದ ಮುಖಂಡರು

ಜನತಾ ಪರಿವಾರದ ಮುಖಂಡರಾದ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಆರ್ ಜೆಡಿ ಲಾಲೂ ಪ್ರಸಾದ್ ಯಾದವ್, ಜೆಡಿಯು ಶರದ್ ಯಾದವ್ ಅವರು ಹಾಸ್ಯದ ಚಟಾಕಿ ಹಾರಿಸಿದ ಕ್ಷಣ. .PTI Photo by Atul Yadav

ಸದನದಲ್ಲಿ ಮಲ್ಲಿಕಾರ್ಜುನ ಖರ್ಗೆ ಆರ್ಭಟ

ಸದನದಲ್ಲಿ ಮಲ್ಲಿಕಾರ್ಜುನ ಖರ್ಗೆ ಆರ್ಭಟ

ಸದನದಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರ್ಭಟಿಸಿದ್ದು ಹೀಗೆ.. PTI Photo / TV GRAB

ಮುಸ್ಲಿಮರ ಜೊತೆ ಸಾಂತಾಕ್ಲಾಸ್ ಸಂಭ್ರಮ

ಮುಸ್ಲಿಮರ ಜೊತೆ ಸಾಂತಾಕ್ಲಾಸ್ ಸಂಭ್ರಮ

ಕೋಲ್ಕತ್ತಾದಲ್ಲಿ ಮುಸ್ಲಿಮರ ಜೊತೆ ಸಾಂತಾಕ್ಲಾಸ್ ಸಂಭ್ರಮಿಸಿದ್ದು ಹೀಗೆ... PTI Photo by Ashok Bhaumik

ಮುಂಬೈನಲ್ಲಿ ಕಾಮಸೂತ್ರ ಬೆಡಗಿಯರು

ಮುಂಬೈನಲ್ಲಿ ಕಾಮಸೂತ್ರ ಬೆಡಗಿಯರು

ಮುಂಬೈನಲ್ಲಿ ಕಾಮಸೂತ್ರ ಮಿಸ್ ಮ್ಯಾಕ್ಸಿಂ 2015ಬೆಡಗಿಯರ ಜೊತೆ ನಟಿ ಮಲೈಕಾ ಅರೋರಾ ಖಾನ್.

ಅಲಹಾಬಾದಿನಲ್ಲಿ ಚಳಿಯೋ ಚಳಿ

ಅಲಹಾಬಾದಿನಲ್ಲಿ ಚಳಿಯೋ ಚಳಿ

ಅಲಹಾಬಾದಿನಲ್ಲಿ ಚಳಿಯೋ ಚಳಿ ಮುಂಜಾನೆ ಎಲ್ಲೆಡೆ ಬೆಂಕಿ ಹಾಕಿ ಚಳಿ ಕಾಯಿಸುವ ದೃಶ್ಯ ಸಾಮಾನ್ಯವಾಗಿದೆ. PTI Photo

ಚಳಿ ನಡುವೆಯೂ ತಾಲೀಮು ಜೋರು

ಚಳಿ ನಡುವೆಯೂ ತಾಲೀಮು ಜೋರು

ಗಣತಂತ್ರ ದಿನಾಚರಣೆ ಅಂಗವಾಗಿ ಚಳಿ ನಡುವೆಯೂ ಭಾರತೀಯ ವಾಯುಸೇನೆ ಪಡೆಯಿಂದ ತಾಲೀಮು ಜೋರಾಗಿ ನಡೆದಿದೆ. PTI Photo by Atul Yadav

ಮೆಟ್ರೋದಲ್ಲಿ ಕೇಂದ್ರ ಸಚಿವ ನಾಯ್ಡು

ಮೆಟ್ರೋದಲ್ಲಿ ಕೇಂದ್ರ ಸಚಿವ ನಾಯ್ಡು

ನವದೆಹಲಿಯ ವಿಮಾನ ನಿಲ್ದಾಣದ ಟಿ3 ಟರ್ಮಿನಲ್ ನಿಂದ ಮೆಟ್ರೋದಲ್ಲಿ ಸಂಚಲಿಸಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಟಿಆರ್ ಎಸ್ ನ ಕವಿತಾ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics around the world: The Bharatiya Janata Party (BJP) was set to make history in Jammu and Kashmir Tuesday as counting of votes polled in assembly elections put it close behind the People's Democratic Party (PDP).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more