ಕಬಡ್ಡಿ ಕಬಡ್ಡಿ ಎಂದು ಕೋಟಿ ಗೆದ್ದ ಮಹಿಳೆಯರು

ಜಲಂಧರ್, ಡಿ.13: ಪ್ರಪ್ರಥಮ ಬಾರಿಗೆ ವಿಶ್ವಕಪ್ ಕಬಡ್ಡಿ ಟೂರ್ನಿಯ ಫೈನಲ್ ತಲುಪಿದ್ದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದ ಭಾರತದ ಮಹಿಳೆಯರು 49-21 ಅಂಕಗಳ ಅಂತರದಲ್ಲಿ ವಿಜಯೋತ್ಸವ ಆಚರಿಸಿದ್ದಾರೆ. ವಿಶ್ವಕಪ್ ವನಿತೆಯರ ಕಬಡ್ಡಿ ಚಾಂಪಿಯನ್ ಶಿಪ್ ಭಾರತದ ಪಾಲಾಗಿದೆ.

ಅತ್ಯಂತ ಕುತೂಹಲಕಾರಿಯಾಗಿದ್ದ ಅಂತಿಮ ಹಣಾಹಣಿಯಲ್ಲಿ ನ್ಯೂಜಿಲೆಂಡ್ ತಂಡ ಬಿರುಸಿನ ಪೈಪೋಟಿ ನೀಡಿದ್ದು ವಿಶೇಷವಾಗಿತ್ತು. ಪಂದ್ಯದ ದ್ವಿತೀಯಾರ್ಧದ ಆಟದಲ್ಲಿ ಭಾರತದ ಮಹಿಳೆಯರು ಮೇಲುಗೈ ಸಾಧಿಸುವ ಮೂಲಕ ಒಂದು ಕೋಟಿ ರು ಮೌಲ್ಯದ ಪ್ರತಿಷ್ಠಿತ ವಿಶ್ವಕಪ್ ಗೆದ್ದಿದ್ದಾರೆ.

ಭಾರತೀಯ ವನಿತಾ ತಂಡದ ಅನು ರಾಣಿ ಅವರು ಬೆಸ್ಟ್ ಸ್ಟಾಪರ್ ಆಗಿ ಪುರಸ್ಕೃತರಾದರು. ರಾಮ್ ಬತೇರಿ ಅವರು ಬೆಸ್ಟ್ ರೈಡರ್ ಆಗಿ ಪರಿಗಣಿತರಾದರು. ಇವರಿಬ್ಬರಿಗೂ ಬಹುಮಾನವಾಗಿ ಮಾರುತಿ ಆಲ್ಟೋ ಕಾರು ದೊರಕಿದೆ.

ಉಳಿದಂತೆ, ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಿದ ವಸುಂಧರಾ ರಾಜೇ, ಮುಂಬೈನಲ್ಲಿ ಸನ್ನಿ ಜತೆ ಶಾರುಖ್, ಸಂಸತ್ತಿನಲ್ಲಿ ರಾಹುಲ್ ಗಾಂಧಿ ಜತೆ ಸಚಿನ್ ತೆಂಡೂಲ್ಕರ್, ಚೆನ್ನೈನಲ್ಲಿ ಶೋಭನಾ ನೃತ್ಯ, ಕೊಚ್ಚಿಯಲ್ಲಿ ಐಶ್ವರ್ಯಾ ರೈ, ಕೆಆರ್ ನಗರದಲ್ಲಿ ಆನೆಗಳ ಹಿಂಡು ಮುಂತಾದ ಚಿತ್ರಗಳಿವೆ...

ಅಮೃತಸರದಲ್ಲಿ

ಅಮೃತಸರದಲ್ಲಿ

ಅಮೃತಸರ: ಪಾಕಿಸ್ತಾನದ ಮಹಿಳಾ ಕಬಡ್ಡಿ ತಂಡ ಇಂಡೋ-ಪಾಕ್ ಅಂತಾರಾಷ್ಟ್ರೀಯ ಗಡಿಯಲ್ಲಿದ್ದಾಗ ಸೆರೆ ಸಿಕ್ಕ ಚಿತ್ರ. 4ನೇ ಮಹಿಲಾ ವಿಶ್ವಕಪ್ 2013ರಲ್ಲಿ ಪಾಕಿಸ್ತಾನಿ ತಂಡ ಕೂಡಾ ಪಾಲ್ಗೊಂಡಿತ್ತು. PTI photo by Deepak Sharma

ಭಾರತದ ಹೆಮ್ಮೆಯ ಪುತ್ರಿಯರು

ಭಾರತದ ಹೆಮ್ಮೆಯ ಪುತ್ರಿಯರು

ಜಲಂಧರ್: 4ನೇ ಮಹಿಳಾ ವಿಶ್ವಕಪ್ 2013ರ ಫೈನಲ್ ನಲ್ಲಿ ನ್ಯೂಜಿಲೆಂಡ್ ಸೋಲಿಸಿ ಕಪ್ ಗೆದ್ದ ಭಾರತ ತಂಡ

ಚೆನ್ನೈನಲ್ಲಿ

ಚೆನ್ನೈನಲ್ಲಿ

ನಟಿ ಶೋಭನಾ ಅವರು ಗುರುವಾರ ಆರಂಭಗೊಂಡ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ನೃತ್ಯ ಪ್ರದರ್ಶನ ನೀಡಿದರು. PTI Photo by R Senthil Kumar

ನವದೆಹಲಿಯಲ್ಲಿ

ನವದೆಹಲಿಯಲ್ಲಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಸಂಸದೀಯ ವ್ಯವಹಾರಗಳ ಸಚಿವ ಕಮಲನಾಥ್ ಜತೆಗೆ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್.

2001ರ ಸಂಸತ್ ಮೇಲಿನ ದಾಳಿ ಪ್ರಕರಣದ 12ನೇ ಕಹಿ ನೆನಪು ಹಾಗೂ ಅಂದು ಮೃತಪಟ್ಟ ಹುತಾತ್ಮರಿಗೆ ನಮನ ಇಂದು ಸಲ್ಲಿಸಲಾಯಿತು. PTI Photo by Subhav Shukla

ಕೆ.ಆರ್ ನಗರ

ಕೆ.ಆರ್ ನಗರ

ಕೃಷ್ಣರಾಜ ನಗರ: ಮೈಸೂರಿನ ನಾಗರಹೊಳೆ ಅಭಯಾರಣ್ಯದಲ್ಲಿ ಎರಡು ತಂಟೆಕೋರ ಸಲಗಗಳನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಅನೆಗಳ ಹಿಂಡು

ಜಲಂಧರ್ ನಲ್ಲಿ ಕಬಡ್ಡಿ

ಜಲಂಧರ್ ನಲ್ಲಿ ಕಬಡ್ಡಿ

ಯುಎಸ್ಎ ಹಾಗೂ ಸ್ಪಾನೀಷ್ ಕಬಡ್ಡಿ ಆಟಗಾರರ ಭಂಗಿ. PTI photo by Deepak Sharma

ಜೈಪುರದಲ್ಲಿ

ಜೈಪುರದಲ್ಲಿ

ಜೈಪುರ: ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ರಾಜಸ್ಥಾನದಲ್ಲಿ ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿತ್ರದಲ್ಲಿ ರಾಜಸ್ಥಾನ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+