ಚಿತ್ರಗಳಲ್ಲಿ: ನವರಾತ್ರಿ ಸಂಭ್ರಮಕ್ಕೆ ಮುಂಬೈ ರೆಡಿ

ಬೆಂಗಳೂರು, ಅ.3: : ನವರಾತ್ರಿ ಹಬ್ಬ ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗುಜರಾತ್ , ಮುಂಬೈ, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ ಹಾಗೂ ಪಂಜಾಬಿನಲ್ಲಿ ನವರಾತ್ರಿಯ ಸಂದರ್ಭಗಳಲ್ಲಿ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ.

ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ಎಂಬ ಒಂಭತ್ತು ರೂಪದಲ್ಲಿ ಶಕ್ತಿ ಸ್ವರೂಪಳಾದ ದೇವಿಯನ್ನು ಆರಾಧಿಸಲಾಗುತ್ತದೆ. ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಸಾರ್ವಜನಿಕ ಗಣೇಶೋತ್ಸವ ನಂತರ ಮುಂಬೈನಲ್ಲಿ ಕೋಲ್ಕತ್ತಾದಂತೆ ಬೃಹತ್ ಆಕಾರದ ದುರ್ಗಾ ಮಾತೆಯ ಮೂರ್ತಿಗಳನ್ನು ಪೆಂಡಾಲ್ ಗಳಲ್ಲಿ ಸ್ಥಾಪಿಸಿ ಹಬ್ಬದ ಆಚರಣೆ ಸಂಭ್ರಮ ಕಾಣಲಾಗುತ್ತದೆ.

ಉಳಿದಂತೆ, ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹುಬ್ಬಳ್ಳಿ ಕಡೆಗೆ ಎರಡು ರೈಲುಗಳನ್ನು ಚಾಲನೆ ನೀಡಿದ್ದಾರೆ. ಸಿಕಂದರಾದ್ ಹಾಗೂ ಹುಬ್ಬಳ್ಳಿ ನಡುವಿನ ಎಕ್ಸ್ ಪ್ರೆಸ್ ಹಾಗೂ ಮುಂಬೈ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲುಗಳಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಹಸಿರು ನಿಶಾನೆ ತೋರಿಸಿದ್ದಾರೆ.

ಹೈದರಾಬಾದಿನಲ್ಲಿ ಕಾಕ್ ಪಿಟ್ ನಲ್ಲಿ ಕುಳಿತ ಸಿಎಂ ಕಿರಣ್ ಕುಮಾರ್ ರೆಡ್ಡಿ, ಪ್ಯಾಲೆಸ್ಟೈನ್ ನಲ್ಲಿ ಮಹಿಳೆಯೊಬ್ಬಳು ಸಸಿಗಳ ಆರೈಕೆ ಮಾಡುತ್ತಿರುವುದು, ಶಾಂಘೈನಲ್ಲಿ ಟೆನಿಸ್ ತಾರೆ ರೋಜರ್ ಫೆಡರರ್, ಕೋಲ್ಕತ್ತಾದಲ್ಲಿ ಕ್ಯಾನ್ಸರ್ ಗೆದ್ದ ಯುವರಾಜ್, ಮನೀಶಾ ಕೊಯಿರಾಲ, ಎಆರ್ ರೆಹಮಾನ್ ಸಂಗೀತ ಉತ್ಸವ, ಮುಂಬೈನಿಂದ ಸಲ್ಮಾನ್ ಖಾನ್, ಭುವನ ಸುಂದರಿ ಒಲಿವಿಯಾ ಕಲ್ಪೊ, ಸಚಿನ್-ಲಾರಾ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ...

ಮುಂಬೈನಲ್ಲಿ

ಮುಂಬೈನಲ್ಲಿ

ಸಾರ್ವಜನಿಕ ಗಣೇಶೋತ್ಸವ ನಂತರ ಮುಂಬೈನಲ್ಲಿ ಕೋಲ್ಕತ್ತಾದಂತೆ ಬೃಹತ್ ಆಕಾರದ ದುರ್ಗಾ ಮಾತೆಯ ಮೂರ್ತಿಗಳನ್ನು ಪೆಂಡಾಲ್ ಗಳಲ್ಲಿ ಸ್ಥಾಪಿಸಿ ಹಬ್ಬದ ಆಚರಣೆ ಸಂಭ್ರಮ ಕಾಣಲಾಗುತ್ತದೆ.

ಪ್ಯಾಲೇಸ್ಟೈನ್ ನಿಂದ

ಪ್ಯಾಲೇಸ್ಟೈನ್ ನಿಂದ

ಬಿಲಿನ್: ಪ್ಯಾಲೇಸ್ಟೈನ್ ಮಹಿಳೆಯೊಬ್ಬರು tear gas canisters ಗಳಲ್ಲಿ ಬೆಳೆಸಲಾಗುತ್ತಿರುವ ಸಸಿಗಳಿಗೆ ನೀರು ಹಾಕುತ್ತಿದ್ದಾರೆ.

ಮುಂಬೈನಲ್ಲಿ ಸುಂದರಿ

ಮುಂಬೈನಲ್ಲಿ ಸುಂದರಿ

ನವದೆಹಲಿ ನಂತರ ಮುಂಬೈಗೆ ಬಂದಿರುವ ಭುವನ ಸುಂದರಿ ಒಲಿವಿಯಾ ಕಲ್ಪೊ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ನವದೆಹಲಿಯಲ್ಲಿ ದಿಗ್ಗಜರು

ನವದೆಹಲಿಯಲ್ಲಿ ದಿಗ್ಗಜರು

ನವದೆಹಲಿ: ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯ ಲೀಗ್ ಹಂತದ ಕೊನೆ ಪಂದ್ಯದ ವೇಳೆ ಕ್ರಿಕೆಟ್ ಲೋಕದ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರಾ ಅವರು ಒಟ್ಟಿಗೆ ಕಾಣಿಸಿಕೊಂಡರು. PTI Photo by Manvender Vashist

ರೋಜರ್ ಫೆಡರರ್

ರೋಜರ್ ಫೆಡರರ್

ಶಾಂಘೈ: ಇಲ್ಲಿನ ಪುಡೊಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವೀಸ್ ಟೆನಿಸ್ ತಾರೆ ರೋಜರ್ ಫೆಡರರ್ ಅವರು ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿದ್ದಾರೆ. ಶಾಂಘೈ ಮಾಸ್ಟರ್ ಟೆನಿಸ್ ಟೂರ್ನಿಯಲ್ಲಿ ಫೆಡರರ್ ಆಡುತ್ತಿದ್ದಾರೆ.

ಕೋಲ್ಕತ್ತದಲ್ಲಿ ಯುವಿ

ಕೋಲ್ಕತ್ತದಲ್ಲಿ ಯುವಿ

ಕೋಲ್ಕತ್ತದಲ್ಲಿ ಕ್ಯಾನ್ಸರ್ ಗೆದ್ದ ಕ್ರಿಕೆಟರ್ ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. PTI Photo by Ashok Bhaumik

ಕೋಲ್ಕತ್ತದಲ್ಲಿ ಯುವಿ

ಕೋಲ್ಕತ್ತದಲ್ಲಿ ಯುವಿ

ಕೋಲ್ಕತ್ತದಲ್ಲಿ ಕ್ಯಾನ್ಸರ್ ಗೆದ್ದ ಕ್ರಿಕೆಟರ್ ಯುವರಾಜ್ ಸಿಂಗ್ ಅವರು ಕ್ಯಾನ್ಸರ್ ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ಕ್ಯಾನ್ಸರ್ ನಿಂದ ಚೇತರಿಕೆ ಹೊಂದಿರುವ ನಟಿ ಮನೀಷಾ ಕೊಯಿರಾಲ ಅವರು ಯುವರಾಜ್ ಜತೆ ಕೈ ಜೋಡಿಸಿದ್ದಾರೆ.

ಕೋಲ್ಕತ್ತದಲ್ಲಿ ಯುವಿ

ಕೋಲ್ಕತ್ತದಲ್ಲಿ ಯುವಿ

ಬೆಂಗಾಳಿ ನಟಿ ರಿತುಪರ್ಣಾ ಸೇನ್ ಗುಪ್ತಾ ಜತೆ ಕ್ರಿಕೆಟರ್ ಯುವರಾಜ್ ಸಿಂಗ್

ರೆಹಮಾನ್ ಸಂಗೀತ ಉತ್ಸವ

ರೆಹಮಾನ್ ಸಂಗೀತ ಉತ್ಸವ

ಕೋಲ್ಕತ್ತಾ: Rahmanishq ಹೆಸರಿನಲ್ಲಿ ಎಆರ್ ರೆಹಮಾನ್ ಸಂಗೀತ ಉತ್ಸವ PTI Photo by Swapan Mahapatra

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ಮುಂಬೈ: ಇಲ್ಲಿನ ಪನ್ ವೆಲ್ ನಲ್ಲಿ ವಾಹನ ಉತ್ಪನ್ನವೊಂದರರ ಪ್ರಚಾರದಲ್ಲಿ ನಿರತರಾಗಿರುವ ಸಲ್ಮಾನ್ ಖಾನ್. PTI Photo by Mitesh Bhuvad

ರೈಲಿಗೆ ಚಾಲನೆ

ರೈಲಿಗೆ ಚಾಲನೆ

ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹುಬ್ಬಳ್ಳಿ ಕಡೆಗೆ ಎರಡು ರೈಲುಗಳನ್ನು ಚಾಲನೆ ನೀಡಿದ್ದಾರೆ. ಸಿಕಂದರಾದ್ ಹಾಗೂ ಹುಬ್ಬಳ್ಳಿ ನಡುವಿನ ಎಕ್ಸ್ ಪ್ರೆಸ್ ಹಾಗೂ ಮುಂಬೈ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲುಗಳಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ವಿವರ ಇಲ್ಲಿ ಓದಿ

ದುರ್ಗಾಪೂಜೆಗೆ ತಯಾರಿ

ದುರ್ಗಾಪೂಜೆಗೆ ತಯಾರಿ

ಕೋಲ್ಕತ್ತಾದಲ್ಲಿ ನವರಾತ್ರಿಯ ದುರ್ಗಾಪೂಜೆಗೆ ತಯಾರಿ ಭರ್ಜರಿಯಾಗಿ ನಡೆದಿದೆ

ಸೀರೆ ಸುಂದರಿ

ಸೀರೆ ಸುಂದರಿ

ಟಾಲಿವುಡ್ ನಟಿ ಕಾಜಲ್ ಅಗರವಾಲ್ ಅವರು ಹೈದರಾಬಾದಿನಲ್ಲಿ ಶೋರೂಮ್ ಉದ್ಘಾಟನೆ ಸಂದರ್ಭದಲ್ಲಿ ಕಾಣಿಸಿದ್ದು ಹೀಗೆ

ಇತ್ತೀಚಿನ ಸುದ್ದಿಗಳು

ಇತ್ತೀಚಿನ ಸುದ್ದಿಗಳು

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+