ಬ್ರೇಕಿಂಗ್ ನ್ಯೂಸ್ : ರಾಹುಲ್- ಅಖಿಲೇಶ್ ಹೊಂದಾಣಿಕೆ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

ರಾಹುಲ್- ಅಖಿಲೇಶ್ ಹೊಂದಾಣಿಕೆ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ
* ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು: ದೇವೇಗೌಡ
* ಅನಿವಾರ್ಯ ಪರಿಸ್ಥಿತಿಯಲ್ಲಿ ಹೊಂದಾಣಿಕೆ ಅಗತ್ಯ
* ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಂದ ಪ್ರತಿಕ್ರಿಯೆ
* ಡಿಜಿಟಲ್ ಇಂಡಿಯಾಕ್ಕಿಂತ ಫಾರ್ಮರ್ಸ್ ಇಂಡಿಯಾ ಬೇಕಿದೆ
* ಡಿಜಿಟಲ್ ಇಂಡಿಯಾ ಅಳವಡಿಕೆಗೆ ಇನ್ನೂ ಕಾಲಾವಕಾಶ ಬೇಕು

Today's Top News, Breaking News | News in Brief January 17

ಕೇಶವಕೃಪಾದಲ್ಲಿ ಆರೆಸ್ಸೆಸ್ ಮುಖಂಡರ ಮಹತ್ವದ ಸಭೆ
* ಬೆಂಗಳೂರಿನಲ್ಲಿ ಆರೆಸ್ಸೆಸ್ ಸಮನ್ವಯ ಸಭೆ ಆರಂಭ
* ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಭಾಗಿ
* ಅರೆಸ್ಸೆಸ್ ಅಧೀನದ 40 ಸಂಘಟನೆಗಳ ಸದಸ್ಯರ ಉಪಸ್ಥಿತಿ

Today's Top News, Breaking News | News in Brief January 17

ಜಯಲಲಿತಾ ಅವರ ಸೋದರ ಸೊಸೆ ದೀಪಾ ರಾಜಕೀಯಕ್ಕೆ
* ಚೆನ್ನೈನಲ್ಲಿ ದೀಪಾ ರಾಜಕೀಯ ಎಂಟ್ರಿಗೆ ಭರ್ಜರಿ ಸಿದ್ಧತೆ ನಡೆದಿದೆ.
* ಶಶಿಕಲಾ ನಟರಾಜನ್ ಗೆ ಪರ್ಯಾಯ ಶಕ್ತಿಯಾಗಿ ದೀಪಾ
* ಬೆಂಗಳೂರಿನ ನಿವಾಸಿ ದೀಪಾ ಅವರು ಜಯಾ ಸೋದರನ ಪುತ್ರಿ

Today's Top News, Breaking News | News in Brief January 17

****
ಸಿಬಿಐ ಮುಖ್ಯಸ್ಥ ಸ್ಥಾನ ಯಾರಿಗೆ ಒಲಿಯಲಿದೆ?
* ದೆಹಲಿಯ ಪೊಲೀಸ್ ಮುಖ್ಯಸ್ಥ ಅಲೋಕ್ ವರ್ಮ ರೇಸಿನಲ್ಲಿ ಮುಂದೆ
* ಹಂಗಾಮಿ ಮುಖ್ಯಸ್ಥರಾಗಿ ಆರ್ ಕೆ ಅಸ್ತಾನ ನೇಮಕಕ್ಕೆ ವಿರೋಧ.
* ಹಿರಿಯ ಐಪಿಎಸ್ ಮಹಿಳಾ ಅಧಿಕಾರಿ ಅರ್ಚನಾ ರಾಮಸುಂದರಂ ನೇಮಕ ಸಾಧ್ಯತೆ.

***

ಜಲ್ಲಿಕಟ್ಟು ವಿವಾದ: ನಟ ತ್ರಿಶಾ ಕೃಷ್ಣನ್ ಪೊಲೀಸರ ಭದ್ರತೆ?
* ಜಲ್ಲಿಕಟ್ಟು ವಿರುದ್ಧ ನಿಂತಿರುವ ಪೆಟಾ ಸಂಸ್ಥೆ ಪರ ನಿಂತಿದ್ದಾರೆ ಎಂದು ತ್ರಿಶಾ ವಿರುದ್ಧ ತಮಿಳರ ಆಕ್ರೋಶ
* ಇತ್ತೀಚೆಗೆ ಬಹುಭಾಷಾ ನಟಿ ತ್ರಿಶಾ ಅವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿತ್ತು.
* ಈಗ ತ್ರಿಶಾಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಅವರ ತಾಯಿ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
***
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Today's Top News, Breaking News, News in Brief January 17: J Jayalalithaa, her niece Deepa Jayakumar is set to announce her political plans today. In the ruling AIADMK, a section sees her as the counterweight to Jayalalithaa's close friend Sasikala Natarajan
Please Wait while comments are loading...