• search

ಹೊಸೂರು ಏರ್‌ಪೋರ್ಟ್‌ ಆರಂಭಕ್ಕೆ ಒತ್ತಾಯಿಸಿ ಪಳನಿಸ್ವಾಮಿ ಪತ್ರ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜೂನ್‌ 25: ಥಲ್ಲಿ ಏರ್‌ಪೋರ್ಟ್‌ ಕಾರ್ಯಾರಂಭಗೊಳಿಸುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.

  ಥಲ್ಲಿ ಏರ್‌ಪೋರ್ಟ್‌ ಹೊಸೂರು ಸಮೀಪದಲ್ಲಿದೆ, ತಮಿಳುನಾಡು ಸರ್ಕಾರ ಮತ್ತೊಂದು ಪ್ರಯತಣಕ್ಕೆ ಕೈ ಹಾಕಿದ್ದು, ಈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ತಕ್ಷಣದಿಂದಲೇ ಆರಂಭಿಸುವಂತೆ ಪತ್ರ ಸುರೇಶ್‌ ಪ್ರಭು ಅವರಿಗೆ ಬರೆದಿದ್ದಾರೆ.

  ಬೆಂಗಳೂರು ಏರ್‌ಪೋರ್ಟ್‌: ಪೈಲಟ್, ಸಿಬ್ಬಂದಿಗೆ ಪ್ರತ್ಯೇಕ ಪ್ರವೇಶ ಟರ್ಮಿನಲ್

  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರಾಪೇಕ್ಷಣಾ ಪತ್ರವನ್ನು ನಿರೀಕ್ಷಿಸಿದ್ದು, ಹೊಸೂರು ಏರ್‌ಪೋರ್ಟ್‌ನ ತುರ್ತು ಕಾರ್ಯಾರಂಭಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಲಿ ಎಂದು ಪಳನಿಸ್ವಾಮಿ ಒತ್ತಾಯಿಸಿದ್ದಾರೆ.

  TN urges center to open Thalli airport near Bengaluru

  ಈ ವಿಮಾನ ನಿಲ್ದಾಣವು ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್ ಕಾರಿಡಾರ್ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ. ಈ ವಿಮಾನ ನಿಲ್ದಾಣ ಆರಂಭವಾದರೆ ಎಲೆಕ್ಟ್ರಾನಿಕ್‌ಸಿಟಿ, ಜಿಗಣಿ ಪ್ರದೇಶಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ.

  ಎಲೆಕ್ಟ್ರಾನಿಕ್‌ ಸಿಟಿಗೆ 28ಕಿ.ಮೀ ದೂರದಲ್ಲಿ ಈ ವಿಮಾನ ನಿಲ್ದಾಣವಿದೆ. ಕಡಿಮೆ ದರದ ವಿಮಾನಯಾನ ಯೋಜನೆ ಉಡಾನ್‌ ಅನ್ವಯ ಈ ನಿಲ್ದಾಣವನ್ನು ಬಳಸಿಕೊಳ್ಳಲು ತಮಿಳುನಾಡು ಬಯಸಿದೆ. ಈ ಸಂಬಂಧ ಪಳನಿಸ್ವಾಮಿ ಸುರೇಶ್‌ ಪ್ರಭುವಿಗೆ ಪತ್ರ ಬರೆದಿದ್ದು, ವಿಮಾನ ನಿಲ್ದಾಣ ಕಾರ್ಯಾಚರಂಭಕ್ಕೆ ಅನುಮತಿ ಕೇಳಿದ್ದಾರೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Just 28 km away from electronic city of Bengaluru, Thalli airport near Hosur should be opened which will help to develop Bangalore outskirts, Tamil Nadu chief minister K. Palanisamy urged central civil aviation minister in a letter.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more