ಅಪ್ಪಳಿಸಿದ ತಿತ್ಲಿ ಚಂಡಮಾರುತ: ಒಡಿಶಾ-ಆಂಧ್ರದಲ್ಲಿ ಹೈಅಲರ್ಟ್
ಭುವನೇಶ್ವರ, ಅಕ್ಟೋಬರ್ 11: ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಅಪ್ಪಳಿಸಿರುವ ತಿತ್ಲಿ ಸೈಕ್ಲೋನ್ ನಿಂದಾಗಿ 3 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಗಂಟೆಗೆ 126 ಕಿಮೀ ವೇಗದಲ್ಲಿ ಚಲಿಸುವ ತಿತ್ಲಿ ಚಂಡಮಾರುತ ಉಭಯ ರಾಜ್ಯಗಳ ಜನರಲ್ಲೂ ಭೀತಿ ಹುಟ್ಟಿಸಿದೆ. ಒಡಿಶಾದ ಗೋಪಾಲ್ಪುರ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂ ನಡುವೆ ಗುರುವಾರ ಬೆಳಿಗ್ಗೆ ಗಂಟೆಗೆ 126 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಇದರೊಟ್ಟಿಗೆ ಮಳೆಯೂ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
#WATCH: #TitliCyclone makes landfall in Gopalpur. #Odisha pic.twitter.com/x49MsPkU9U
— ANI (@ANI) October 11, 2018

ಮುಂದಿನ 18 ಗಂಟೆಗಳ ಕಾಲವೂ ಚಂಡಮಾರುತದ ಹಾವಳಿ ಮುಂದುವರಿಯುವ ಸಾಧ್ಯತೆ ಇದೆ. ತಿತ್ಲಿಯಿಂದಾಗಿ ಹಲವೆಡೆ ಭೂಕುಸಿತವೂ ಉಂಟಾಗುವ ಸಾಧ್ಯತೆ ಇದ್ದು, ಜನರಿಗೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಲು ಕೋರಲಾಗಿದೆ. ಒಡಿಶಾದ ಹಲವು ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಈ ಸೈಕ್ಲೋನ್ ಸಂಭಿಸಿದೆ. ಅರಬ್ಬೀ ಸಮುದ್ರದಲ್ಲಿ ಲುಬಾನ್ ಎಂಬ ಚಂಡಮಾರುತವೂ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications