Tirupati-Shirdi Train: 04 ರಾಜ್ಯಗಳ ಮಾರ್ಗವಾಗಿ ಹೊಸ ರೈಲು ಸೇವೆ ಆರಂಭ: ನಿಲುಗಡೆ, ವೇಳಾಪಟ್ಟಿ ಇಲ್ಲಿದೆ
Tirupati-Shirdi Train: ನಾಲ್ಕು ರಾಜ್ಯಗಳಿಗೆ ಸಂಪರ್ಕ ಸೇತುವೆಯಾಗಿ ಪ್ರಮುಖ ಧಾರ್ಮಿಕ ಕ್ಷೇತ್ರಗಳವರೆಗೆ ಸೇವೆ ನೀಡುವ ಪ್ರಮುಖ ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಚಾಲನೆ ನೀಡಿದ್ದಾರೆ. ಈ ಮೂಲಕ ಬಹುದಿನಗಳ ಪ್ರಯಾಣಿಕರ ಬೇಡಿಕೆ ಈಡೇರಿದಂತಾಗಿದೆ. ತಿರುಪತಿ - ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಇದಾಗಿದ್ದು, ಒಟ್ಟು ಸುಮಾರು 1000 ಕಿಲೋ ಮೀಟರ್‌ಗೂ ದೂರ ಕ್ರಮಿಸಲಿದೆ. ಇದರ ಮಾರ್ಗ, ನಿಲುಗಡೆ, ವೇಳಾಪಟ್ಟಿ ವಿವರ ಇಲ್ಲಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು ನವದೆಹಲಿ ರೈಲ್ ಭವನದಲ್ಲಿತಿರುಪತಿ - ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ಮಂಗಳವಾರ ಹಸಿರು ನಿಶಾನೆ ತೋರಿಸಿದರು. ಈ ರೈಲು ಸೇವೆಯು ಎರಡೂ ದೈವಿಕ ಕ್ಷೇತ್ರಗಳ ನಡುವಿನ ಸಂಚಾರಕ್ಕೆ ಅನುಕೂಲ ಕಲ್ಪಿಸುತ್ತದೆ. ಹಾಗೆಯೇ, ಯಾತ್ರಿಕರ ಸುಗಮ, ಸುರಕ್ಷಿತ ಮತ್ತು ವೇಗದ ಪ್ರಯಾಣಕ್ಕೆ ಸಹಾಯಕವಾಗಲಿದೆ ಎಂದರು.

ಈ ರೈಲು ಹಿಂದೂ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುತ್ತದೆ. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರದ ನಾಲ್ಕು ರಾಜ್ಯಗಳ ಭಕ್ತರು ಒಳಗೊಂಡಂತೆ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಆಗಲಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಆಂಧ್ರಪ್ರದೇಶ ತಿರುಪತಿಯಿಂದ ಮಹಾರಾಷ್ಟ್ರದ ಶಿರಡಿವರೆಗೆ ಸಾಗಲಿದೆ. ಒಟ್ಟು ಸುಮಾರು 1,200 ಕಿಲೋ ಮೀಟರ್ ದೂರು ಕ್ರಮಿಸಲಿದೆ. ತಿರುಪತಿಯಿಂದ ಹೊರಟು ತೆಲಂಗಾಣ, ಕರ್ನಾಟಕ ಮೂಲಕ ಶಿರಡಿವರೆಗೆ ನೇರ ರೈಲು ಸಿಕ್ಕಂತಾಗಿದೆ.
ದೀರ್ಘ ಪ್ರಯಾಣದ ರೈಲಿನ ಜೊತೆಗೆ ಪ್ರಾದೇಶಿಕ ರೈಲುಗಳ ಬೇಡಿಕೆ ಸಹ ಇದೆ. ವಿವಿಧ ಮಾರ್ಗಗಳಲ್ಲಿ ದೈನಂದಿನ ರೈಲುಗಳಿಗೆ ಪ್ರಯಾಣಿಕರಿಗೆ ಹೆಚ್ಚಿನ ಬೇಡಿಕೆ ಇದೆ. ಅದರಲ್ಲಿ ಕರ್ನಾಟಕದಿಂದ ಮತ್ತು ಕರ್ನಾಟಕದಲ್ಲಿ ಸಂಚರಿಸುವ ಕ್ರಮವಾಗಿ ಬೆಳಗಾವಿ-ಪುಣೆ ಅಥವಾ ಚಾಮರಾಜನಗರ-ಬೀದರ್ ನಂತಹ ಹೊಸ ಮಾರ್ಗಗಳ ಆರಂಭಕ್ಕೆ ಒತ್ತಾಯ ಇದೆ.
Hon’ble Minister of State for Railways Shri @VSOMANNA_BJP flagged off the new Tirupati–Sainagar Shirdi Express, giving a major boost to religious tourism, enhancing regional connectivity and ease of travel.#RailInfra4AndhraPradesh #RailInfra4Maharashtra pic.twitter.com/DQ3yOCFjf1
— Ministry of Railways (@RailMinIndia) December 9, 2025
ತಿರುಪತಿ-ಶಿರಡಿ ರೈಲಿನ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳು
ತಿರುಪತಿ-ಶಿರಡಿ ಸಾಯಿನಗರ ಎಕ್ಸ್‌ಪ್ರೆಸ್ ರೈಲು (17425) ಪ್ರತಿ ಭಾನುವಾರ ಬೆಳಗ್ಗೆ 4 ಗಂಟೆಗೆ ತಿರುಪತಿ ನಿಲ್ದಾಣದಿಂದ ಪ್ರಯಾಣ ಆರಂಭಿಸುತ್ತದೆ. ಮಾರನೇ ದಿನ ಬೆಳಗ್ಗೆ 10.45ಕ್ಕೆ ಶಿರಡಿ ತಲುಪಲಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದ ನೆಲ್ಲೂರು, ಗುಂಟೂರು ಮತ್ತು ತೆಲಂಗಾಣದ ಹೈದರಾಬಾದ್, ಕರ್ನಾಟಕದ ಬೀದರ್ ಮೂಲಕ 31 ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಸಾಗಲಿದೆ. ಒಟ್ಟು 31 ಗಂಟೆ ಸುದೀರ್ಘ ಪ್ರಯಾಣ ಕ್ರಮಿಸಿ ಶಿರಡಿ ತಲುಪಲಿದೆ.
ಮತ್ತೊಂದು ರೈಲು ಶಿರಡಿ ಸಾಯಿನಗರ -ತಿರುಪತಿ ಎಕ್ಸ್‌ಪ್ರೆಸ್ ರೈಲು (17428) ಇದು ಸೋಮವಾರ ರಾತ್ರಿ 08 ಗಂಟೆಗೆ ಶಿಡಿಯಿಂದ ಪ್ರಯಾಣ ಆರಂಭಿಸುತ್ತದೆ. ಮರಳಿ ಅದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತಲೇ ಬುಧವಾರ ಬೆಳಗ್ಗೆ 1.30ಕ್ಕೆ (ಮಧ್ಯರಾತ್ರಿ) ತಿರುಪತಿಗೆ ಬಂದು ಸೇರುತ್ತದೆ. ಇದರಿಂದ ಹೈದರಾಬಾದ್, ಬೀದರ್, ಆಂಧ್ರ ಪ್ರದೇಶದ ಹಲವಾರು ಜಿಲ್ಲೆಗಳ ಜನರಿಗೆ ಅನುಕೂಲವಾಗಿದೆ.












Click it and Unblock the Notifications