Tirupati laddu row: ಧರ್ಮೋ ರಕ್ಷತಿ ರಕ್ಷಿತಃ ಎಂದು ಗುಡುಗಿದ್ದೇಕೆ ಪವನ್‌ ಕಲ್ಯಾಣ್‌

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದ ಲಡ್ಡು ವಿವಾದ ತಣ್ಣಗಾಗಿದೆ ಎನಿಸಿದರೂ, ವಿವಾದ ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಆಂಧ್ರಪ್ರದೇಶದಲ್ಲಿ ಇದೀಗ ನಟ ಹಾಗೂ ಉಪ ಮುಖ್ಯಮಂತ್ರಿ ಧರ್ಮೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಿದ್ದಾರೆ. ಧರ್ಮೋ ರಕ್ಷತಿ ರಕ್ಷಿತಃ ಎಂದರೆ (ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ) ಈ ನಿಟ್ಟಿನಲ್ಲಿ ಜನಸೇನಾ ಪಕ್ಷವು ಬೃಹತ್‌ ಅಭಿಯಾನವನ್ನು ನಡೆಸುತ್ತಿದೆ. ಇದರ ನಡುವೆ ನಟ ಪ್ರಕಾಶ್‌ ರಾಜ್‌ ಅವರು ಆಂಧ್ರಪ್ರದೇಶ ಸರ್ಕಾರಕ್ಕೆ ಟಾಂಗ್‌ ನೀಡುವುದನ್ನು ಮುಂದುವರಿಸಿದ್ದಾರೆ.

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಅಂಶ ಬಳಸಲಾಗಿದೆ ಎನ್ನುವುದು ಗಂಭೀರ ಚರ್ಚೆಗೆ ನಾಂದಿಯಾಡಿತ್ತು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು, 11 ದಿನ ಪ್ರಾಶ್ಚಿತ ವ್ರತವನ್ನು ಮಾಡಿದ್ದರು. ಹಿಂದೂ ಹಾಗೂ ಸನಾತನ ಧರ್ಮದ ರಕ್ಷಣೆಯ ಬಗ್ಗೆ ಅವರು ಜಾಗೃತಿಯ ಮಾತುಗಳನ್ನು ಆಡಿದ್ದರು. ಇದೀಗ ಅವರು ಜನಸೇನಾ ಪಕ್ಷದಿಂದ ಧರ್ಮೋ ರಕ್ಷತಿ ರಕ್ಷಿತಃ ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

Tirupati laddu row Pawan Kalyan Said Dharma Rakshati Rakstih

ಜನಸೇನಾದಿಂದ ಪ್ರಾಯಶ್ಚಿತ ದೀಕ್ಷೆ: ತಿರುಪತಿ ತಿರುಮಲದಲ್ಲಿ ನೀಡುವ ಪ್ರಸಾದವಾದ ಲಡ್ಡಿನಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ಹೀಗಾಗಿ, ಪ್ರಾಯಶ್ಚಿತ ದೀಕ್ಷೆ ಮಾಡುತ್ತಿದ್ದೇನೆ ಎಲ್ಲಾ ಹಿಂದೂಗಳು ಇದನ್ನು ಮಾಡಬೇಕು ಎಂದು ಅವರು ಹೇಳಿದ್ದರು.

ಇದೀಗ ಪವನ್‌ ಕಲ್ಯಾಣ್‌ ಅವರು ಪ್ರಾರಂಭಿಸಿದ ಪ್ರಾಯಶ್ಚಿತ ದೀಕ್ಷೆಯನ್ನು ಜನಸೇನಾ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಭಕ್ತಾಧಿಗಳು ಮುಂದುವರಿಸುತ್ತಿದ್ದಾರೆ. ಈ ವ್ರತದ ಭಾಗವಾಗಿ ದೇವಸ್ಥಾನದಲ್ಲಿ ಸೇರುವ ಭಕ್ತಾಧಿಗಳು, ದೇವರ ನಾಮವನ್ನು ಜಪಿಸುತ್ತಿದ್ದಾರೆ. ಅಲ್ಲದೇ ದೇವರೇ ಕ್ಷಮಿಸು ನಮ್ಮಿಂದ ತಿಳಿಯದೆ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ.

ಇನ್ನು ಸನಾತನ ಧರ್ಮದ ಬಗ್ಗೆ ಯಾರಾದರು ಹಗುರವಾಗಿ ಮಾತನಾಡಿದರೆ, ಅವರನ್ನು ಬೀದಿಗೆ ಎಳೆಯುತ್ತೇನೆ. ತಪ್ಪು ನಡೆದಿದೆ ಅದನ್ನು ಸರಿಪಡಿಸಿಕೊಂಡು ಪ್ರಾಯಶ್ಚಿತ ಮಾಡಿಕೊಳ್ಳಿ ಇಲ್ಲವೇ ಬಾಯಿ ಮುಚ್ಚಿಕೊಂಡು ಇರಿ. ನಮ್ಮ ಧಾರ್ಮಿಕ ಭಾವನೆಗಳನ್ನು ಕೆಣಕಬೇಡಿ ಎಂದು ಪವನ್‌ ಕಲ್ಯಾಣ್‌ ಎಚ್ಚರಿಸಿದ್ದಾರೆ.

ಪ್ರಕಾಶ್‌ ರಾಜ್‌ ಹೇಳಿದ್ದೇನು ?

ಈ ನಡುವೆ ಪ್ರಕಾಶ್‌ ರಾಜ್‌ ಅವರು ಆಂಧ್ರಪ್ರದೇಶ ಸರ್ಕಾರಕ್ಕೆ ಟಾಂಗ್‌ ಕೊಡುವುದನ್ನು ಮುಂದುವರಿಸಿದ್ದಾರೆ. ಯಾರ ಹೆಸರನ್ನೂ ಉಲ್ಲೇಖ ಮಾಡದೆ ಅವರು ಮಾಡಿರುವ ಟ್ವೀಟ್‌ ಈ ರೀತಿ ಇದೆ. ಹೊಸ ಭಕ್ತನಿಗೆ ಪಂಗನಾಮ ಲೆಕ್ಕವ!, ಅಲ್ವಾ, ಸಾಕು... ಜನರಿಗೆ ಅವಶ್ಯವಿರುವ ಕೆಲಸಗಳತ್ತ ಗಮನಕೊಡಿ ಎಂದು ಹೇಳಿದ್ದಾರೆ.

ಏನಿದು ತಿರುಪತಿ ಲಡ್ಡು ವಿವಾದ: ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡುವ ಪ್ರಸಾದವಾದ ಲಡ್ಡುವಿನಲ್ಲಿ ಹಸುವಿನ ಕೊಬ್ಬಿನ ಅಂಶ, ಹಂದಿಯ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆಯನ್ನು ತುಪ್ಪದೊಂದಿಗೆ ಬಳಸಲಾಗಿದೆ ಎನ್ನುವ ಗಂಭೀರ ಆರೋಪವು ಕೇಳಿ ಬಂದಿತ್ತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮೊದಲು ಈ ವಿಷಯವನ್ನು ಪ್ರಸ್ತಾಪಿಸಿದ್ದರು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವಧಿಯಲ್ಲೇ ಇದೆಲ್ಲ ನಡೆದಿದೆ ಎಂದು ದೂರಿದ್ದರು. ಇದಾದ ನಂತರ ಆಂಧ್ರಪ್ರದೇಶದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಈ ನಡುವೆ ಪ್ರಕಾಶ್‌ ರಾಜ್‌ ಹಾಗೂ ಪವನ್‌ ಕಲ್ಯಾಣ್‌ ನಡುವೆಯೂ ಟ್ವೀಟ್‌ ವಾರ್‌ ನಡೆದಿತ್ತು. ಇದೀಗ ಮತ್ತೆ ಪ್ರಕಾಶ್‌ ರಾಜ್‌ ಟಾಂಗ್‌ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+