Tirupati laddu row: ಜಗನ್ ಮೋಹನ್ ರೆಡ್ಡಿಯಿಂದ ʼಹಿಂದೂ ಅಸ್ತ್ರʼ; ಆಂಧ್ರ ಸಮ್ಮಿಶ್ರ ಸರ್ಕಾರಕ್ಕೆ ಶಾಕ್!
ಆಂಧ್ರಪ್ರದೇಶದ ತಿರುಪತಿಯ ಲಡ್ಡು ಪ್ರಸಾದ ವಿವಾದವು ಹಿಂದೂ ಹಾಗೂ ರಾಜಕೀಯ ಅಸ್ತ್ರವಾಗುತ್ತಿರುವ ಬೆನ್ನಲ್ಲೇ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಹ ಚಂದ್ರಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಅವರಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ತಿರುಪತಿ ಲಡ್ಡಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ. ಇದೆಲ್ಲ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಅವಧಿಯಲ್ಲೇ ಆಗಿದೆ ಎಂದು ಆಂಧ್ರದ ಸಿ.ಎಂ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದೀಗ ಜಗನ್ ತಿರುಪತಿಗೆ ಭೇಟಿ ನೀಡಲು ಮುಂದಾಗಿದ್ದಾರೆ. ಅಲ್ಲದೇ...
ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್‌ಮೋಹನ್ ರೆಡ್ಡಿಗೆ ರಾಜಕೀಯವಾಗಿಯೇ ಅತಂತ್ರವಾಗುವ ಹಾಗೂ ಜನರಿಂದ ದೂರವಾಗುವ ಆತಂಕ ಎದುರಾಗಿದೆ. ಜಗನ್ ಆಡಳಿತದಲ್ಲೇ ತಿರುಪತಿಯ ಲಡ್ಡಿನಲ್ಲಿ ಹಸು, ಹಂದಿಯ ಕೊಬ್ಬಿನ ಅಂಶ ಹಾಗೂ ಮೀನಿನ ಎಣ್ಣೆಯನ್ನು ಬಳಸಲಾಗಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇದು ಇನ್ನಿಲ್ಲದಂತೆ ಜಗನ್ ಅನ್ನು ಸಂಕಷ್ಟಕ್ಕೆ ದೂಡಿದೆ. ಚಂದ್ರಬಾಬು ನಾಯ್ಡು ಅವರು ಸತ್ಯವನ್ನು ತಿರುಚುತ್ತಿದ್ದಾರೆ ಎಂದು ಜಗನ್ ಅವರು ದೂರಿದ್ದಾರೆ.

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸೆಪ್ಟೆಂಬರ್ 28ಕ್ಕೆ ಜಗನ್ ರೆಡ್ಡಿ ಭೇಟಿ ನೀಡಲಿದ್ದಾರೆ. ಸೆಪ್ಟೆಂಬರ್ 27ರ ರಾತ್ರಿಯೇ ತಿರುಮಲದಲ್ಲಿ ಬಂದು ಇಳಿಯಲಿದ್ದಾರೆ ಎಂದು ವೈಎಸ್‌ಆರ್ ಪಕ್ಷದ ನಾಯಕರು ಹೇಳಿರುವುದು ವರದಿಯಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿ ಅವರು ತಿರುಪತಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಮೂಲಕ ಜಗನ್ ಅವರು ಆಡಳಿತ ಪಕ್ಷದ ನಾಯಕರಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಈಗಾಗಲೇ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ತಿರುಪತಿ ಲಡ್ಡಿನಲ್ಲಿ (ಪ್ರಸಾದದಲ್ಲಿ) ಕಲಬರಕೆ ತುಪ್ಪ ಬಳಸಿದ್ದಕ್ಕಾಗಿ ಪ್ರಾಯಶ್ಚಿತವಾಗಿ ಪ್ರತಿಯೊಬ್ಬ ಹಿಂದೂವು ಸಹ ವ್ರತ ಕೈಗೊಳ್ಳಬೇಕು ಎಂದು ಕರೆ ನೀಡಿದ್ದರು. ಅಲ್ಲದೇ ಅವರು ಸಹ 11 ದಿನಗಳ ವ್ರತ ಮಾಡಿದ್ದರು. ಇದೀಗ ಇದೇ ಅಸ್ತ್ರವನ್ನು ಜಗನ್ ಮೋಹನ್ ರೆಡ್ಡಿ ಅವರು ಬಳಸುತ್ತಿದ್ದು, ಚಂದ್ರಬಾಬು ನಾಯ್ಡು ಅವರು ಪಾಪ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಅವರು ತಿರುಪತಿ ದೇವಸ್ಥಾನವನ್ನೂ ಬಿಟ್ಟಿಲ್ಲ. ಈ ಪವಿತ್ರ ದೇವಸ್ಥಾನದಲ್ಲಿ ನೀಡುವ ಲಡ್ಡಿನಲ್ಲೂ ಕಲಬೆರಕೆ ತುಪ್ಪವನ್ನು ಬಳಸಿದ್ದಾರೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಆಂಧ್ರ ಸಮ್ಮಿಶ್ರ ಸರ್ಕಾರಕ್ಕೆ ಹಿಂದೂ ಧರ್ಮದ ಮೂಲಕವೇ ಜಗನ್ ಪೂಜೆಯ ಅಸ್ತ್ರವನ್ನು ಬಳಸುತ್ತಿದ್ದಾರೆ.
ಚಂದ್ರಬಾಬು ನಾಯ್ಡು ಪಾಪ; ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡಿ
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡಿರುವ ಪಾಪದ ಪ್ರಾಯಶ್ಚಿತಕ್ಕಾಗಿ ಆಂಧ್ರಪ್ರದೇಶದಾದ್ಯಂತ ಎಲ್ಲರೂ ಶನಿವಾರ (ಸೆಪ್ಟೆಂಬರ್ 28)ದಂದು ವಿಶೇಷ ಪೂಜೆಗಳಲ್ಲಿ ಭಾಗವಹಿಸಿ, ರಾಜ್ಯದಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ಮಾಡೋಣ ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಕರೆ ನೀಡಿದ್ದಾರೆ. ಎಲ್ಲರೂ ಆಂಧ್ರ ಸಿ.ಎಂ ಚಂದ್ರಬಾಬು ಮಾಡಿರುವ ಪಾಪಕ್ಕೆ (ಸುಳ್ಳು ಸುದ್ದಿ ಹಾಗೂ ಸತ್ಯವನ್ನು ತಿರುಚಿದ್ದಾರೆ ಎಂಬ ಆರೋಪ) ಪ್ರಾಯಶ್ಚಿತ ಮಾಡಿಕೊಳ್ಳೋಣ ಎಂದು ಅವರು ಆಂಧ್ರಪ್ರದೇಶದ ಜನರಿಗೆ ಕರೆ ನೀಡಿದ್ದಾರೆ.












Click it and Unblock the Notifications