Get Updates
Get notified of breaking news, exclusive insights, and must-see stories!

Tirupati Laddu Controversy: ಎಲ್ಲ ಸೂಪರ್‌ 6 ಬಚಾವ್‌ಗೆ ಎಂದ ಜಗನ್ ಮೋಹನ ರೆಡ್ಡಿ

ತಿರುಪತಿ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಪ್ರತಿಕ್ರಿಯಿಸಿದ್ದು, ಬಿಜೆಪಿ (ಎನ್‌ಡಿಎ) ಮೇಲೆಯೇ ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಲದೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಕೆಂಡಕಾರಿದ್ದಾರೆ. ಬಿಜೆಪಿ ಹಾಗೂ ಎನ್‌ಡಿಎಯಿಂದ ಈ ರೀತಿ ನಡೆದಿದೆ ಎಂದು ಸಹ ಗಂಭೀರ ಆರೋಪವನ್ನು ಮಾಡಿದ್ದಾರೆ. ಜಗಮ್ ಮೋಹನ್‌ ಹೇಳಿದ್ದೇನು ಎನ್ನುವ ಮಾಹಿತಿ ಇಲ್ಲಿದೆ.

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಪ್ರಸಾದವಾದ ಲಡ್ಡಿನಲ್ಲಿ ಪ್ರಾಣಿ ಕೊಬ್ಬು ಬಳಸಲಾಗುತ್ತಿತ್ತು ಎನ್ನುವ ಗಂಭೀರ ಆರೋಪ ಕೇಳಿಬಂದಿದ್ದು, ಹಿಂದೂ ಧರ್ಮೀಯರಲ್ಲಿ ಆತಂಕ ಮೂಡಿದೆ. ಇದೀಗ ಈ ವಿಷಯ ರಾಷ್ಟ್ರದಾದ್ಯಂತ ಚರ್ಚೆಯಾಗುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದೂಗಳು ಆಗ್ರಹಿಸಿದ್ದಾರೆ. ಹಿಂದೂಗಳ ಆರಾಧ್ಯದೈವ ತಿರುಪತಿ ತಿರುಮಲದ ಬಗ್ಗೆ ಜನರಲ್ಲಿ ಅಪಾರ ಗೌರವ ಹಾಗೂ ಭಕ್ತಿ ಇದೆ. ಆದರೆ, ಈಗ ಕೇಳಿ ಬರುತ್ತಿರುವ ಗಂಭೀರ ಆರೋಪ ಎಂತವರನ್ನು ದಂಗು ಬಡಿಸಿದೆ.

Tirupati Laddu Controversy What is Jagan s serious allegation about NDA

ಈ ರೀತಿ ಪ್ರಾಣಿಗಳ ಕೊಬ್ಬಿನ ಅಂಶವನ್ನು (ಕಲಬೆರೆಕೆ ತುಪ್ಪ) ಈ ಹಿಂದೆ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿ ಇದ್ದ ವೈಎಸ್‌ಆರ್‌ಸಿಪಿ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರ ಅವಧಿಯಲ್ಲೇ ಆಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು. ಈ ಬಗ್ಗೆ ಜಗನ್‌ ಮಾತನಾಡಿದ್ದಾರೆ. ಅಲ್ಲದೇ, ಪ್ರತಿ ಆರು ತಿಂಗಳಿಗೊಮ್ಮೆ ಟಿಡಿಪಿಯಿಂದ ತುಪ್ಪ ಪೂರೈಕೆದಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಈ ಪ್ರಕ್ರಿಯೆನ್ನು ನಾವು ದಶಕಗಳ ಕಾಲದಿಂದ ಮುಂದುವರಿಸಿಕೊಂಡು ಬಂದ್ದೇವೆ. ಇದರಲ್ಲಿ ಹೊಸ ಬದಲಾವಣೆ ಏನು ಮಾಡಿಲ್ಲ ಎಂದಿದ್ದಾರೆ.

ಲಡ್ಡಿನಲ್ಲಿ ಬಳಸಲಾಗಿರುವ ತುಪ್ಪ ಕಲಬೆರಕೆಯದ್ದು ಎನ್ನುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ. ಇದು ವಿಶ್ವದಾದ್ಯಂತ ಇರುವಂತಹ ಕೋಟ್ಯಾಂತರ ಜನ ಭಕ್ತಾಧಿಗಳ ಭಾವನೆಯ ವಿಷಯವಾಗಿದೆ. ಈ ರೀತಿ ಭಕ್ತರ ಭಾವನೆಯೊಂದಿಗೆ ಆಟವಾಡುವುದು ಸರಿಯೇ ಎಂದು ಜಗನ್‌ ಪ್ರಶ್ನೆ ಮಾಡಿದ್ದಾರೆ.

ಎನ್‌ಡಿಎ ವಿರುದ್ಧ ಗಂಭೀರ ಆರೋಪ ಮಾಡಿದ ಜಗನ್‌

ಇನ್ನು ಜಗನ್ ಮೋಹನ್‌ ರೆಡ್ಡಿ ಎನ್‌ಡಿಎ ವಿರುದ್ಧವೇ ಗಂಭೀರ ಆರೋಪವನ್ನು ಮಾಡಿದ್ದಾರೆ. ಎನ್‌ಡಿಎ ಸರ್ಕಾರದಲ್ಲಿ ಲ್ಯಾಬ್‌ನ ರಿಪೋರ್ಟ್‌ಗಳು ಹಾಗೂ ಪರೀಕ್ಷೆಗಳು ಸಂದರ್ಭ ಅನುಸಾರ ಫಲಿತಾಂಶವೂ ತಯಾರಾಗುತ್ತಿರುವುದು ವಿಪರ್ಯಾಸವೇ ಸರಿ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಲ್ಯಾಬ್‌ನ ರಿಪೋರ್ಟ್‌ನ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದು, ಇದು ಲ್ಯಾಬ್‌ನಲ್ಲಿ ಎನ್‌ಡಿಎ ತಯಾರಿಸಿರುವ ವರದಿಯಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸೂಪರ್‌ ಸಿಕ್ಸ್‌ ಎಲ್ಲೋಯ್ತು ?

ಸಿ.ಎಂ ಚಂದ್ರಬಾಬು ನಾಯ್ಡು ತಮ್ಮ ರಾಜಕೀಯ ಲಾಭಕ್ಕಾಗಿ ದೇವರನ್ನೂ ಬಿಡುತ್ತಿಲ್ಲ. ಆಂಧ್ರಪ್ರದೇಶದ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಉದ್ದೇಶದಿಂದಲೇ ಈ ರೀತಿ ಮಾಡುತ್ತಿದ್ದಾರೆ. ಅವರ 100 ದಿನಗಳ ಆಡಳಿತವನ್ನು ಜನ ನೋಡಿದ್ದಾರೆ. ಇದನ್ನು ಮರೆಮಾಚಿ ಜನರ ಗಮನವನ್ನು ಬೇರೆ ಕಡೆ ಸೆಳೆಯುವ ತಂತ್ರ ಇದಾಗಿದೆ ಎಂದು ಜಗನ್‌ ಹೇಳಿದ್ದಾರೆ. ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ಸೂಪರ್‌ ಸಿಕ್ಸ್‌ ಭರವಸೆಗಳನ್ನು ಆಂಧ್ರ ಜನರ ಮುಂದೆ ಇರಿಸಿದ್ದರು. ಆ ಭರವಸೆಗಳನ್ನು ಈಡೇರಿಸಲು ರಾಜ್ಯ ಸರ್ಕಾರದಿಂದ ಆಗಿಲ್ಲ. ಸೂಪರ್‌ ಸಿಕ್ಸ್‌ನಿಂದ ತಪ್ಪಿಸಿಕೊಳ್ಳಲು ಹಾಗೂ ಜನರ ಗಮನವನ್ನು ಬೇರೆಡೆ ಸೆಳೆಯಲು ಚಂದ್ರಬಾಬು ನಾಯ್ಡು ಅವರು ಇದೀಗ ತಿರುಪತಿ ಲಡ್ಡು ವಿವಾದವನ್ನು ಸೃಷ್ಟಿ ಮಾಡಿದ್ದಾರೆ ಎಂದು ಜಗನ್‌ ಆರೋಪಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+