Get Updates
Get notified of breaking news, exclusive insights, and must-see stories!

Tirupati Temple: ಬಾಲಾಜಿ ಬಳಿ ಟನ್‌ಗಟ್ಟಲೇ ಚಿನ್ನ, ಸಾವಿರಾರು ಕೋಟಿ ಹಣ- ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಠೇವಣಿ? ಅಂಕಿಅಂಶ

ತಿರುಪತಿ, ಜುಲೈ 25: ಭಾರತದಲ್ಲೇ ಅತೀ ಶ್ರೀಮಂತ ದೇವರಾದ ತಿರುಪತಿ ಬಾಲಾಜಿ ಬಳಿ ಟನ್‌ಗಟ್ಟಲೇ ಚಿನ್ನ ಹಾಗೂ ಸಾವಿರಾರು ಕೋಟಿ ಹಣವಿರುವ ಮಾಹಿತಿ ಲಭ್ಯವಾಗಿದೆ. ಪ್ರತಿ ದಿನ ಸಾವಿರಾರು ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ಕಾಣಿಕೆ ನೀಡುತ್ತಾರೆ. ಬಾಲಾಜಿ ದೇವರ ಬಳಿ ಅಪಾರ ಪ್ರಮಾಣದ ಚಿನ್ನ ಹಾಗೂ ನಗದು ರೂಪದ ಹಣ ಸಂಗ್ರಹವಾಗಿದೆ. ಇದಕ್ಕೆ ಸಂಬಂಧಿಸಿದ ಅಂಕಿಅಂಶವನ್ನು ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ನೀಡಿದೆ.

ತಿರುಮಲದಲ್ಲಿರುವ ದೇವಸ್ಥಾನಗಳ ಪೈಕಿ ಪ್ರಧಾನ ದೇವರು ವೆಂಕಟೇಶ್ವರ. ಈ ದೇವರಿಗೆ ಸಂಬಂಧಿಸಿದ ಸಾವಿರಾರು ಕೋಟಿ ನಗರನ್ನು ಟಿಟಿಡಿ ದೇಶದ ಹೆಸರಾಂತ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿದೆ. ಟನ್‌ಗಟ್ಟಲೇ ಚಿನ್ನವನ್ನು ಬ್ಯಾಂಕ್‌ಗಳ ಲಾಕರ್‌ನಲ್ಲಿ ಇಡಲಾಗಿದೆ ಎಂದು ಟಿಟಿಡಿ ಹೇಳಿದೆ.

Tirupati Balaji has tons of gold, thousands of crores of money - how much deposits in which banks?

ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ, ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಎವಿ ಧರ್ಮ ರೆಡ್ಡಿ ಅವರು ಬಾಲಾಜಿಗೆ ಸಂಬಂಧಿಸಿದ ವಿವಿಧ ಅಂಕಿಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ತಿರುಮಲ ದೇಗುಲಕ್ಕೆ 2009-10ರಲ್ಲಿ ಪ್ರತಿದಿನ ಸರಾಸರಿ 50,000 ಭಕ್ತರು ಭೇಟಿ ನೀಡುತ್ತಿದ್ದರು. ಪ್ರಸ್ತುತ ಭಕ್ತರ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆಯಾಗಿದ್ದು, ಟಿಟಿಡಿಗೆ ಆದಾಯವೂ ಅದೇ ಅನುಪಾತದಲ್ಲಿ ಹೆಚ್ಚುತ್ತಿದೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ.

ದೇವಾಲಯಕ್ಕೆ ಸಂಬಂಧಿಸಿದ 17,000 ಕೋಟಿ ರೂಪಾಯಿ ನಗದು ಹಾಗೂ 11 ಟನ್ ಚಿನ್ನವನ್ನು ಠೇವಣಿ ಇಡಲಾಗಿದೆ ಎಂದು ಟಿಟಿಡಿ ಹೇಳಿದೆ. ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಇವುಗಳನ್ನು ಠೇವಣಿ ಇಡಲಾಗಿದೆ ಎಂದು ಮಾಹಿತಿ ನೀಡಿದೆ.

Tirupati Balaji has tons of gold, thousands of crores of money - how much deposits in which banks?

ಅಂಕಿಅಂಶಗಳ ಪ್ರಕಾರ, ತಿರುಮಲದಲ್ಲಿರುವ ಪ್ರಧಾನ ದೇವರಿಗೆ ಸಂಬಂಧಿಸಿದ 1.2 ಟನ್ ಚಿನ್ನಾಭರಣ ಮತ್ತು 10 ಟನ್ ಬೆಳ್ಳಿ ಇದೆ. ಹೆಚ್ಚುವರಿಯಾಗಿ, 11 ಟನ್ ಚಿನ್ನವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ.

ಭಕ್ತರು ಅರ್ಪಿಸುವ ಕೂದಲು, ವಿವಿಧ ಸೇವೆಗಳು, ದರ್ಶನಗಳಿಗೆ ಸಂಬಂಧಿಸಿದ ಟಿಕೆಟ್‌ಗಳ ಮಾರಾಟ, ಲಡ್ಡುಗಳ ಮಾರಾಟ, ಕೊಠಡಿಗಳ ಹಂಚಿಕೆ, ದೇಣಿಗೆ ಇತ್ಯಾದಿ ರೂಪದಲ್ಲಿ ನಗದನ್ನು ಸಂಗ್ರಹಿಸಲಾಗಿದೆ ಎಂದು ಟಿಟಿಡಿ ಹೇಳಿದೆ.

ವಾರ್ಷಿಕ ಬಜೆಟ್ ಹೆಚ್ಚಳ

2009-10ರಲ್ಲಿ, ಟಿಟಿಡಿ ಅಧ್ಯಕ್ಷ ಡಿ.ಕೆ.ಆದಿಕೇಶವುಲು ನಾಯ್ಡು ಅವರು ರೂ.1,365 ಕೋಟಿ ವಾರ್ಷಿಕ ಬಜೆಟ್‌ಗೆ ಅನುಮೋದನೆ ನೀಡಿದ್ದರು. ಅದೇ ವರ್ಷಕ್ಕೆ ರೂ.521 ಕೋಟಿ ಆದಾಯವನ್ನು ನಿರೀಕ್ಷಿಸಿದ್ದರು. ಹುಂಡಿಯಿಂದ ವಾರ್ಷಿಕ ಆದಾಯವಾಗಿ 555 ಕೋಟಿ ರೂ.ಗಳನ್ನು ಪಡೆಯಲಾಗಿತ್ತು.

Tirupati Balaji has tons of gold, thousands of crores of money - how much deposits in which banks?

ಆ ನಂತರ ಪ್ರಾಧಿಕಾರವು 2011-12ನೇ ಸಾಲಿಗೆ ರೂ.1,662 ಕೋಟಿ ವಾರ್ಷಿಕ ಬಜೆಟ್‌ಗೆ ಅನುಮೋದನೆ ನೀಡಿತ್ತು. ಇದೇ ಆರ್ಥಿಕ ವರ್ಷಕ್ಕೆ ಹುಂಡಿ ಮೂಲಕ 650 ಕೋಟಿ ಆದಾಯ ನಿರೀಕ್ಷಿಸಲಾಗಿತ್ತು.

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ, ಟಿಟಿಡಿಯ ಆದಾಯವು ತೀವ್ರವಾಗಿ ಕುಸಿಯಿತು. 2020-21ರಲ್ಲಿ ನಿರೀಕ್ಷಿತ 1,300 ಕೋಟಿ ರೂಪಾಯಿಗಳ ಬದಲಿಗೆ ಆದಾಯವು 721 ಕೋಟಿ ರೂಪಾಯಿಗಳಿಗೆ ಇಳಿಯಿತು. ಇದರ ಪರಿಣಾಮವಾಗಿ ಟಿಟಿಡಿ ತನ್ನ ವಾರ್ಷಿಕ ಬಜೆಟ್ ಅನ್ನು ಪರಿಷ್ಕರಿಸಿ 2,553 ಕೋಟಿ ರೂ.ಗೆ ಸೀಮಿತಗೊಳಿಸಿದೆ. ಇದು 2020-21 ಕ್ಕೆ 2,837 ಕೋಟಿ ವಾರ್ಷಿಕ ಬಜೆಟ್ ಆಗಿದೆ. 2021-22 ರಲ್ಲಿ 2,937.85 ಕೋಟಿ ವಾರ್ಷಿಕ ಬಜೆಟ್ ಅನ್ನು ಟಿಟಿಡಿ ಅನುಮೋದಿಸಿದೆ.

2023-24 ರ ಆರ್ಥಿಕ ವರ್ಷಕ್ಕೆ ಟಿಟಿಡಿ ಮಂಡಳಿಯು 4,411.68 ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಅನ್ನು ಅನುಮೋದಿಸಿದೆ. ಹುಂಡಿಯಿಂದ ಪ್ರತಿ ತಿಂಗಳು 100 ಕೋಟಿ ರೂಪಾಯಿ ಆದಾಯ ಬರುತ್ತಿದೆ. ಇದರೊಂದಿಗೆ ಟಿಟಿಡಿ ವಾರ್ಷಿಕ 1,200 ಕೋಟಿಯಿಂದ 1,300 ಕೋಟಿ ರೂ ವರೆಗೆ ವಾರ್ಷಿಕ ಆದಾಯವನ್ನು ಗಳಿಸುತ್ತಿದೆ ಎಂದು ಟಿಟಿಡಿ ಹೇಳಿದೆ.

Tirupati Balaji has tons of gold, thousands of crores of money - how much deposits in which banks?

ಭಕ್ತರು ಕೂದಲಿನ ಮೂಲಕ ಟಿಟಿಡಿ ವಾರ್ಷಿಕ ಆದಾಯವನ್ನು 150 ರಿಂದ 170 ಕೋಟಿ ರೂಪಾಯಿಗಳವರೆಗೆ ಪಡೆಯುತ್ತದೆ. ಹೆಚ್ಚುವರಿಯಾಗಿ, ಟಿಟಿಡಿ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿ, ಲಡ್ಡುಗಳ ಮಾರಾಟ, ವಿವಿಧ ಸೇವಾ ಟಿಕೆಟ್‌ಗಳು, ಭಕ್ತರಿಗೆ ಕೊಠಡಿಗಳ ಹಂಚಿಕೆ ಮತ್ತು ದೇಣಿಗೆಗಳ ಮೂಲಕ ನೂರಾರು ಕೋಟಿ ರೂಪಾಯಿಗಳನ್ನು ಗಳಿಸುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ( ಎಸ್‌ಬಿಐ ) ಇರಿಸಿರುವ ಠೇವಣಿ ಮೊತ್ತವು 5,358.11 ಕೋಟಿ ರೂ. ಆಗಿದೆ. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಯುಬಿಐ) 1,694.25 ಕೋಟಿ ರೂಪಾಯಿಗಳ ಠೇವಣಿಗಳನ್ನು ಇರಿಸಲಾಗಿದೆ. ಬ್ಯಾಂಕ್ ಆಫ್ ಬರೋಡಾ (ಬಿಒಬಿ) ರೂ 1,839.53 ಕೋಟಿ ಮೌಲ್ಯದ ಠೇವಣಿಗಳನ್ನು ಇಡಲಾಗಿದೆ. ಕೆನರಾ ಬ್ಯಾಂಕ್ ರೂ 1,351.00 ಕೋಟಿ ಠೇವಣಿಗಳನ್ನು ಹೊಂದಿದೆ. ಆಕ್ಸಿಸ್ ಬ್ಯಾಂಕ್ ರೂ 1,006.20 ಕೋಟಿ ಠೇವಣಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 2,122.85 ಕೋಟಿ ರೂಪಾಯಿಗಳ ಠೇವಣಿಗಳನ್ನು ಇರಿಸಲಾಗಿದೆ.

Tirupati Balaji has tons of gold, thousands of crores of money - how much deposits in which banks?

ಇದಲ್ಲದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ (ಪಿಎನ್‌ಬಿ) ಒಟ್ಟು ರೂ 660.43 ಕೋಟಿ ಠೇವಣಿಗಳನ್ನು ಇರಿಸಲಾಗಿದೆ. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ ರೂ 306.31 ಕೋಟಿ ಠೇವಣಿಗಳನ್ನು ಇಡಲಾಗಿದೆ ಎಂದು ಟಿಟಿಡಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+