ಯುಗಾದಿ ಹಬ್ಬಕ್ಕೆ 2 ದಿನ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲ: ಕಾರಣ ಹೀಗಿದೆ
ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 21 ಮತ್ತು 22 ರಂದು ಎಲ್ಲ ವಿಧದ ದರ್ಶನ ಭಾಗ್ಯ ಇಲ್ಲ. ಕಾರಣ ತಿಳಿಯಿರಿ.
ತಿರುಮಲ, ಮಾರ್ಚ್ 19: ಯುಗಾದಿ ಹಬ್ಬದ ಪ್ರಯುಕ್ತ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 21 ಮತ್ತು 22 ರಂದು ಎಲ್ಲಾ ಆರ್ಜಿತ ಸೇವೆಗಳು ಮತ್ತು ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಿರುವುದಾಗಿ ಭಾನುವಾರ ಟಿಟಿಡಿ ಆಡಳಿತ ಮಂಡಳಿಯುಯ ಪ್ರಕಟಿಸಿದೆ.
ಇದೇ ತಿಂಗಳ ಮಾರ್ಚ್ 22 ರಂದು ಬುಧವಾರ ಚೈತ್ರ ಶುದ್ಧ ಪಾಡ್ಯಮಿ ಇರಲಿದೆ. ಆ ಶುಭ ದಿನದಂದು ತಿರುಮಲ ದೇವಸ್ಥಾನದಲ್ಲಿ ಯುಗಾದಿ ಆಸ್ಥಾನ ಸೇರಿದಂತೆ ಕೆಲವು ಧಾರ್ಮಿಕ ಕಾರ್ಯಗಳನ್ನು ಆಚರಿಸಲಾಗುವುದು. ಮಾರ್ಚ್ 22 ರಂದು ಯುಗಾದಿ ಹಬ್ಬದ ನಿಮಿತ್ತ ಮಾರ್ಚ್ 21 ರಂದು ಸಾಂಪ್ರದಾಯಿಕ ದೇವಾಲಯದ ಶುದ್ಧೀಕರಣ ಉತ್ಸವ ಕೊಯಿಲ್ ಆಳ್ವಾರ್ ತಿರುಮಂಜನಂ ನೆರವೇರಿಸಲಾಗುತ್ತದೆ. ಕಾರಣಗಳಿಂದಾಗಿ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ಮುಚ್ಚರಲಿದೆ.

ಕೋಯಿಲ್ ಆಳ್ವಾರ್ ತಿರುಮಂಜನಂ ಮತ್ತು ಯುಗಾದಿಯ ಹಬ್ಬದ ಕಾರಣ ಮಾರ್ಚ್ 21 ಮತ್ತು 22 ರಂದು ತಿಮ್ಮನ ಭಕ್ತರಿಗೆ ದರ್ಶನ ಇರುವುದಿಲ್ಲ. ಅದರಂತೆ ಮಾರ್ಚ್ 20 ಮತ್ತು 21ರಂದು ವಿಐಪಿ ದರ್ಶನಕ್ಕೂ ಅವಕಾಶ ಇಲ್ಲವೆಂದು ಟಿಟಿಡಿ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಒಂದು ವಿಐಪಿ ದರ್ಶನಕ್ಕೆ ಶಿಫಾರಸು ಬಂದರೂ ಆ ಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ. ಭಕ್ತರು ಇದನ್ನು ಗಮನಿಸಿ ಸಹಕರಿಸಬೇಕು ಎಂದು ಟಿಟಿಡಿ ಪ್ರಕಟಣೆ ಮೂಲಕ ಮನವಿ ಮಾಡಿದೆ.
ಕಳೆದ ಶನಿವಾರ (ಮಾರ್ಚ್ 18) ಸಂಜೆ ತಿರುಮಲದಲ್ಲಿ ಸಂತ ಶ್ರೀ ತಾಳ್ಳಪಾಕ ಅನ್ನಮಾಚಾರ್ಯರ 520ನೇ ಪುಣ್ಯತಿಥಿ ಆಚರಣೆ ನಡೆಯಿತು. ಅಹೋಬಿಲ ಮಠದ 46ನೇ ಪೀಠಾಧಿಪತಿ ಶ್ರೀ ಸತಗೋಪ ರಂಗನಾಥ ಯತೀಂದ್ರ ಮಹಾದೇಶಿಕನ್ ಸ್ವಾಮೀಜಿ ಅವರು ತಮ್ಮ ಅನುಗ್ರಹ ಭಾಷಣದಲ್ಲಿ ಅನ್ನಮಾಚಾರ್ಯರು ಅಹೋಬಿಲ ಮಠದೊಂದಿಗೆ ಹೊಂದಿದ್ದ ಸಂಬಂಧವನ್ನು ಸ್ಮರಿಸಿದರು.

ಇದೇ ವೇಳೆ ಶ್ರೀ ನರಸಿಂಹ ಸ್ವಾಮಿಯ ದಿವ್ಯ ಆಶೀರ್ವಾದದಿಂದ ಅನ್ನಮಾಚಾರ್ಯರಿಗೆ 32 ಬೀಜಾಕ್ಷರ ಮಹಾ ಮಂತ್ರವನ್ನು ನೀಡಲಾಯಿತು. 32 ಸಾವಿರ ಕಾವ್ಯ ರತ್ನಗಳನ್ನು ಸಂಕೀರ್ತನೆಗಳ ರಚಿಸಲಾಗಿದೆ. ಟಿಟಿಡಿ ಪ್ರತಿ ಕೃತಿಗೆ ಅರ್ಥ ಮತ್ತು ಸಾರವನ್ನು ಹೊಂದಿರುವ 'ಅನ್ನಮಯ್ಯ ಸಂಕೀರ್ತನ ಲಹರಿ' ಅನ್ನು ಶೀಘ್ರದಲ್ಲೇ ಪುಸ್ತಕದ ರೂಪದಲ್ಲಿ ಹೊರತರುತ್ತಿದ್ದೇವೆ ಎಂದು ಮುಖ್ಯಸ್ಥ ಡಾ ವಿಭೀಷಣ ಶರ್ಮಾ ತಿಳಿಸಿದರು.
ಹಿಂದೂ ಧರ್ಮದಲ್ಲಿ ಯುಗಾದಿ ಹೊಸ ವರ್ಷವಾಗಿರುತ್ತದೆ. ಎಲ್ಲ ಆಚರಣೆಗಳು ಈ ದಿನ ವಿಶೇಷತೆ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ದೇವರ ದರ್ಶನ ಪಡೆಯಲು ಇಚ್ಛಿಸುವ ಭಕ್ತರ ಪೈಕಿ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಈ ವರ್ಷ ದರ್ಶನ ಭಾಗ್ಯ ಇಲ್ಲದಾಗಿದೆ. ನಿಷೇಧಿತ ದಿನದ ಬಳಿಕ ದರ್ಶನ ಸಿಗಲಿದೆ.












Click it and Unblock the Notifications