Tirupati News: ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳುವ ಭಕ್ತರ ಸುರಕ್ಷತೆಗೆ ಒತ್ತು ನೀಡಿದ ಟಿಟಿಡಿ.. ಇನ್ಮುಂದೆ ಈ ಸಮಸ್ಯೆ ಇರಲ್ಲ!

ತಿರುಮಲಕ್ಕೆ ನಿತ್ಯವೂ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಬಹುತೇಕರು ಪಾದಚಾರಿ ಮಾರ್ಗದಲ್ಲಿಯೇ ಬೆಟ್ಟಕ್ಕೆ ತೆರಳುತ್ತಾರೆ. ಆದರೆ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ಕಾಡುಪ್ರಾಣಿಗಳ ದಾಳಿ ಭೀತಿ ಹೆಚ್ಚಾಗಿದೆ. ಹೀಗಾಗಿ ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗದಲ್ಲಿ ಶ್ರೀವಾರಿ ದರ್ಶನಕ್ಕೆ ತೆರಳುವ ಭಕ್ತರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಟಿಟಿಡಿ ನಿರ್ಧರಿಸಿದೆ.

ಈಗಿರುವ ಟ್ರ್ಯಾಪ್ ಕ್ಯಾಮೆರಾಗಳ ಹೊರತಾಗಿ ಚಿರತೆ ಮತ್ತಿತರ ಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡಲು ಹೆಚ್ಚಿನ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಲು ಟಿಟಿಡಿ ಆದೇಶಿಸಿದೆ. ಈ ಬಗ್ಗೆ ಸರ್ಕಾರಿ ಅರಣ್ಯ ಅಧಿಕಾರಿಗಳು, ಟಿಟಿಡಿ ಅರಣ್ಯ ಸಿಬ್ಬಂದಿ, ಇಂಜಿನಿಯರಿಂಗ್ ಮತ್ತು ಭದ್ರತಾ ಇಲಾಖೆಗಳೊಂದಿಗೆ ಭದ್ರತಾ ಸಮಸ್ಯೆಗಳ ಕುರಿತು ಟಿಟಿಡಿ ಇಒ ಜಯ್ ಶ್ಯಾಮಲಾ ರಾವ್ ಚರ್ಚಿಸಿ ಆದೇಶ ನೀಡಿದ್ದಾರೆ.

Tirumala News Another important decision of TTD for devotees going to Tirumala

ಹೀಗಾಗಿ ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ತೆರಳುವ ಭಕ್ತರಿಗೆ ಇದರಿಂದ ಅನುಕೂಲವಾಗಲಿದೆ. ನಿರ್ಭಯದಿಂದ ಭಕ್ತರು ಶ್ರೀವಾರಿ ದರ್ಶನವನ್ನು ಪಡೆಯಬಹುದಾಗಿದೆ. ಅಲಿಪಿರಿ ನಡಿಗೆದಾರಿಯಲ್ಲಿ ಅದರಲ್ಲೂ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಿಂದ ಏಳನೇ ಮೈಲಿವರೆಗೆ ಪ್ರಾಣಿಗಳ ಚಲನವಲನ ಹೆಚ್ಚಾಗಿರುತ್ತದೆ. ಈ ಚಲನವಲನಗಳು ನಿಯಂತ್ರಣ ಕೊಠಡಿಗೆ ಸದಾ ಗೊತ್ತಾಗುವಂತೆ ಸಿಗ್ನಲಿಂಗ್ ವ್ಯವಸ್ಥೆ ಸುಧಾರಿಸಲು ಕ್ರಮಕೈಗೊಳ್ಳುವಂತೆ ಇಂಜಿನಿಯರಿಂಗ್ ಅಧಿಕಾರಿಗಳಿಗೆ ಇಒ ಶ್ಯಾಮಲಾ ರಾವ್ ಆದೇಶಿಸಿದ್ದಾರೆ.

ಮತ್ತೊಂದೆಡೆ ಪ್ರಾಣಿಗಳ ಚಲನವಲನದ ಬಗ್ಗೆ ಭದ್ರತಾ ಇಲಾಖೆಗೆ ಸೂಚನೆ ನೀಡಿ ಭಕ್ತರಿಗೆ ಎಚ್ಚರಿಕೆ ನೀಡಲು ಸೂಚಿಸಲಾಗಿದೆ. ಈ ಮೂಲಕ ಕಾಲ್ನಡಿಗೆಯಲ್ಲಿ ಭಕ್ತರ ಸುರಕ್ಷತೆಗೆ ಸಂಬಂಧಿಸಿದಂತೆ ಟಿಟಿಡಿ ಕ್ರಮ ಕೈಗೊಂಡಿದೆ.

Tirumala News Another important decision of TTD for devotees going to Tirumala

ಅಲ್ಲದೆ ಪಾದಚಾರಿ ಮಾರ್ಗವನ್ನು ಪರಿಶೀಲನೆಗೆ ಜಂಟಿ ಸಮಿತಿಯೊಂದನ್ನು ರಚಿಸಲಾಗಿದೆ. ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟು ಪಾದಚಾರಿ ಮಾರ್ಗಗಳಲ್ಲಿ ಭಕ್ತಾದಿಗಳ ಸಂಖ್ಯೆ ಕಡಿಮೆ ಇರುವಾಗ ಹೆಚ್ಚು ಗಮನಹರಿಸುವಂತೆ ಇಒ ಸೂಚಿಸಿದ್ದಾರೆ.

ಯಾವ ಪ್ರದೇಶದಲ್ಲಿ ಚಿರತೆಗಳು ಹೆಚ್ಚು ಓಡಾಡುತ್ತವೆ ಎಂಬ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಇಒ ಹಾಗೂ ಇತರ ಅಧಿಕಾರಿಗಳಿಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಇಂತಹ ಸ್ಥಳಗಳಲ್ಲಿ ಕಾಲ್ನಡಿಗೆ ಮಾರ್ಗದಲ್ಲಿ ತೆರಳುವ ಭಕ್ತರು ನಿಗದಿತ ಸಮಯಕ್ಕೆ ತಿರುಮಲ ತಲುಪಬೇಕು. ಆ ಸಮಯದಲ್ಲಿ ಭಕ್ತರ ಮೇಲೆ ಅರಣ್ಯ ಅಧಿಕಾರಿಗಳು ನಿಗಾ ಇಡಬೇಕು ಎಂದು ಇಒ ಸೂಚಿಸಿದ್ದಾರೆ.

Tirumala News Another important decision of TTD for devotees going to Tirumala

ಸಿದ್ಧೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವ

ತಾಳ್ಳಪಾಕ ಶ್ರೀ ಸಿದ್ಧೇಶ್ವರಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವ ಜುಲೈ 17 ರಿಂದ 25 ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಬ್ರಹ್ಮೋತ್ಸವಕ್ಕೆ ಜುಲೈ 16 ರಂದು ಅಂಕುರಾರ್ಪಣೆ ಮಾಡಲಾಗುತ್ತದೆ. ಜುಲೈ 17ರಂದು ಬೆಳಗ್ಗೆ 6.28ಕ್ಕೆ ಪೂಜೆಯೊಂದಿಗೆ ಬ್ರಹ್ಮೊತ್ಸವ ಆರಂಭವಾಗಲಿದೆ. ಸಂಜೆ ಹಂಸವಾಹನ ಸೇವೆ ನಡೆಯಲಿದೆ. ಜುಲೈ 18, 19, 20 ಮತ್ತು 21 ರಂದು ಬೆಳಗ್ಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಅದೇ ರೀತಿ ಜು.18ರಂದು ಸಂಜೆ ಚಂದ್ರಪ್ರಭಾ ವಾಹನ, 19ರಂದು ಸಂಜೆ ಚಿನ್ನಶೇಷ ವಾಹನ, 20ರಂದು ಸಂಜೆ ಸಿಂಹವಾಹನ, 21ರಂದು ಸಂಜೆ ನಂದಿವಾಹನಸೇವೆ ನಡೆಯಲಿದೆ. ಜುಲೈ 22ರಂದು ಸಂಜೆ 6 ರಿಂದ 7 ರವರೆಗೆ ಆರ್ಜಿತ ಕಲ್ಯಾಣೋತ್ಸವ ನಡೆಯಲಿದೆ. ಇಬ್ಬರು 300 ರೂಪಾಯಿ ಪಾವತಿಸಿ ಈ ಕಲ್ಯಾಣೋತ್ಸವದಲ್ಲಿ ಭಾಗವಹಿಸಬಹುದು. ಈ ಭಕ್ತರಿಗೆ ಉತ್ತರಿಯಂ, ರವಿಕೆ, ಲಡ್ಡು, ಅಪ್ಪಂ ಮತ್ತು ಅನ್ನಪ್ರಸಾದವನ್ನು ಉಡುಗೊರೆಯಾಗಿ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+