ಟೈಮ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಿಯಾಂಕಾ, ರಾಜನ್

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 22: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಆರ್ ಬಿಐ ಗವರ್ನರ್ ರಘುರಾಮ್ ರಾಜನ್, ಗೂಗಲ್ ಸಿಇಒ ಸುಂದರ್ ಪಿಚೈ, ಫ್ಲಿಪ್ ಕಾರ್ಟ್ ಸ್ಥಾಪಕರಾದ ಬಿನ್ನಿ ಹಾಗೂ ಸಚಿನ್ ಬನ್ಸಾಲ್ ಅವರು ಟೈಮ್ ಮ್ಯಾಗಜೀನ್ '100 ಪ್ರಭಾವಿ ವ್ಯಕ್ತಿಗಳು' ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆರ್ ಬಿಐ ಗವರ್ನರ್ ರಘುರಾಮನ್ ರಾಜನ್ ಅವರನ್ನು 'ಭಾರತದ ದೂರದೃಷ್ಟಿಯುಳ್ಳ ಬ್ಯಾಂಕರ್' ಎಂದು ಟೈಮ್ ಮ್ಯಾಗಜೀನ್ ಹೊಗಳಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಇದ್ದಾಗಲೂ ಭಾರತದ ಆರ್ಥಿಕ ಸುಧಾರಣೆಗೆ ಅವರು ಕೈಗೊಂಡ ಕ್ರಮಗಳು ಶ್ಲಾಘನೀಯ. ಐಎಂಎಫ್ ನ ಮುಖ್ಯ ಆರ್ಥಿಕ ತಜ್ಞರಾಗಿ 2003 ರಿಂದ 2006 ರ ತನಕ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಲಾಗಿದೆ.[ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಜೊತೆ ಕೇಜ್ರಿ]

TIME magazine names Priyanka Chopra, Raghuram Rajan, Sania Mirza, among 100 most influential people

ಉಳಿದಂತೆ ವಿಜ್ಞಾನ, ಸಮಾಜ ಸೇವೆ, ತಂತ್ರಜ್ಞಾನ, ಕಲೆ, ಚಲನವಿತ್ರ ಸೇರಿದಂತೆ ವಿಶ್ವದ ಅನೇಕ ಸಾಧಕರು ಈ ಪಟ್ಟಿಯಲ್ಲಿದ್ದಾರೆ. ಅಮೆರಿಕದ ಸಂಯೋಜಕ ಲಿನ್ ಮ್ಯಾನುಯಲ್ ಮಿರಾಂಡ, ಐಎಂಎಫ್ ಮುಖ್ಯಸ್ಥ ಕ್ರಿಸ್ಟಿನ್ ಲಾಗಾರ್ಡೆ, ಆಸ್ಕರ್ ವಿಜೇತ ನಟ ಲಿಯಾನಾರ್ಡೋ ಡಿಕಾಪ್ರಿಯೋ, ಟಿಮ್ ಕುಕ್, ಪೋಪ್ ಫ್ರಾನ್ಸಿಸ್, ನಟ ಡ್ವಾಯ್ನೆ ಜಾನ್ಸನ್, ಮಾರ್ಕ್ ಝುಕರ್ ಬರ್ಗ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಹಿಲ್ಲರಿ ಕ್ಲಿಂಟನ್, ಆಂಗ್ ಸಾನ್ ಸೂಕಿ, ಮಿಕಿ ಮಿನಾಜ್, ಎಫ್ 1 ಚಾಲಕ ಲೂಯಿಸ್ ಹ್ಯಾಮಿಲ್ಟನ್, ಉಸೇನ್ ಬೋಲ್ಟ್ ಮುಂತಾದವರು ಪಟ್ಟಿಯಲ್ಲಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2016ನೇ ಸಾಲಿನ ಪ್ರಭಾವಿ ವ್ಯಕ್ತಿಗಳ ಪಟ್ಟಿಯಿಂದ ಕೊನೆ ಕ್ಷಣದಲ್ಲಿ ಹೊರಗುಳಿದಿದ್ದಾರೆ. ಇದು ಟೈಮ್ ಸಂಪಾದಕರು ಆನ್ ಲೈನ್ ಸಮೀಕ್ಷೆ ಆಧಾರದ ಮೇಲೆ ತೆಗೆದುಕೊಂಡ ನಿರ್ಣಯವಾಗಿದೆ. ಪ್ರಭಾವಿಗಳ ಸಂಪೂರ್ಣ ಪಟ್ಟಿಯನ್ನು ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bollywood actor Priyanka Chopra, RBI Governor Raghuram Rajan, tennis star Sania Mirza, Google CEO Sundar Pichai and founders of Flipkart Binny Bansal and Sachin Bansal have been appeared in the TIME list of the '100 Most Influential People in the World, released on Thursday(Apr 21).
Please Wait while comments are loading...