• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾರ್ಚ್ 31ರ ತನಕ ಮೆಟ್ರೋ ರೈಲು ಸ್ಥಗಿತ

|

ನವದೆಹಲಿ, ಮಾರ್ಚ್ 22: ಕೇಂದ್ರ ಸರ್ಕಾರ ಕೊರೊನಾ ಹರಡದಂತೆ ತಡೆಯಲು ಮಹತ್ವದ ತೀರ್ಮಾನ ಕೈಗೊಂಡಿದೆ. ಮಾರ್ಚ್ 31ರ ತನಕ ದೇಶದ ಎಲ್ಲಾ ನಗರಗಳಲ್ಲಿ ಮೆಟ್ರೋ ಸೇವೆ ಸ್ಥಗಿತಗೊಳಿಸಲು ಸೂಚನೆ ನೀಡಿದೆ.

ಭಾರತೀಯ ರೈಲ್ವೆ ಮಾರ್ಚ್ 31ರ ತನಕ ಎಲ್ಲಾ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಈಗ ಎಲ್ಲಾ ಮಹಾನಗರಗಳಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ, ಬೆಂಗಳೂರಲ್ಲಿ ನಮ್ಮ ಮೆಟ್ರೋ ಸೇವೆಯೂ ಸ್ಥಗಿತವಾಗಲಿದೆ.

ಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆ

ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯಂತೆ ಭಾನುವಾರ 'ಜನತಾ ಕರ್ಫ್ಯೂ' ಬೆಳಗ್ಗೆ 7ಗಂಟೆಯಿಂದ ರಾತ್ರಿ 9 ಗಂಟೆಯ ತನಕ ನಡೆಯಲಿದೆ. ಇದಾದ ಬಳಿಕ ಇನ್ನೂ ಹಲವು ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿವೆ.

12 ರೈಲ್ವೆ ಪ್ರಯಾಣಿಕರಿಗೆ ಕೊರೊನಾ; ಪ್ರಯಾಣ ಮುಂದೂಡಿ

ಮಾರ್ಚ್ 23ರ ಸೋಮವಾರದಿಂದ ನಿಗದಿತ ಸಮಯದಲ್ಲಿ ಮಾತ್ರ ಮೆಟ್ರೋ ರೈಲನ್ನು ಓಡಿಸಲು ನಮ್ಮ ಮೆಟ್ರೋ ಪ್ರಕಟಣೆ ಹೊರಡಿಸಿತ್ತು. ಈಗ ಕೇಂದ್ರ ಸರ್ಕಾರದ ಸೂಚನೆಯಂತೆ ಮೆಟ್ರೋ ರೈಲನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿದೆ.

ಆಗ ಕಾವೇರಿ, ಈಗ ಕೊರೊನಾ; ಕರ್ನಾಟಕ, ತಮಿಳುನಾಡು ಬಸ್ ರದ್ದು

ದೆಹಲಿ, ಬೆಂಗಳೂರು, ಜೈಪುರ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ 6 ಮಹಾನಗರಗಳಲ್ಲಿ ಮೆಟ್ರೋ ಸೇವೆ ಇದೆ. ಇದನ್ನು ಮಾರ್ಚ್ 31ರ ತನಕ ಬಂದ್ ಮಾಡಲು ಭಾನುವಾರ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಅಂತರರಾಜ್ಯ ಬಸ್‌ಗಳಿಲ್ಲ : ಕೇಂದ್ರ ಸರ್ಕಾರ ಅಂತರರಾಜ್ಯ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದೆ. ಕೊರೊನಾ ಹರಡುವ ಭೀತಿಯಿಂದಾಗಿ ಯಾವುದೇ ರಾಜ್ಯದಿಂದ ಹೊರ ರಾಜ್ಯಕ್ಕೆ ಬಸ್‌ಗಳು ಸಂಚಾರ ನಡೆಸುವುದಿಲ್ಲ.

ಕೆಎಸ್ಆರ್‌ಟಿಸಿ ಈಗಾಗಲೇ ಪ್ರಕಟಣೆ ಬಿಡುಗಡೆ ಮಾಡಿದ್ದು ಎಲ್ಲಾ ಹೊರರಾಜ್ಯದ ಬಸ್‌ಗಳನ್ನು ಮಾರ್ಚ್ 31ರ ತನಕ ಬಂದ್ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Union government decided to stop Metro train till March 31, 2020 in all over the India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X