ಟಿಕ್‍ಟಾಕ್ ಮೂಲಕ ಮಾನಸಿಕ ರೋಗ ತಜ್ಞರಿಂದ ಟಿಪ್ಸ್
ಬೆಂಗಳೂರು, ಮೇ 07: ವಿಶ್ವದಾದ್ಯಂತ ಆತಂಕ ಸೃಷ್ಟಿ ಮಾಡಿರುವ ಮಹಾಮಾರಿ ಕೊರೋನಾವೈರಸ್ ಅತಿ ದೊಡ್ಡ ಮಾನಸಿಕ ಕ್ಷೋಭೆಯನ್ನು ತಂದೊಡ್ಡಿದೆ. ವಿಶ್ವದ ಆರ್ಥಿಕ ವಲಯದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗಲು ಕಾರಣವಾಗಿದೆ. ಮನೆಯಲ್ಲೇ ಕ್ವಾರಂಟೈನ್‍ಗೆ ಒಳಗಾಗಿರುವ ಜನರಲ್ಲಿ ಸಾಕಷ್ಟು ಮಾನಸಿಕ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿಯಲ್ಲಿ ಕೋವಿಡ್-19 ಸಂದರ್ಭದಲ್ಲಿ ಉಂಟಾಗಿರುವ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ವಿಶ್ವದ ದೇಶಗಳಿಗೆ ಸಲಹೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಭಾರತೀಯ ನಾಗರಿಕರಿಗೆ ನೆರವಾಗುವ ದೃಷ್ಟಿಯಿಂದ ಮಾನಸಿಕ ರೋಗಗಗಳ ತಜ್ಞರ ಸಂಸ್ಥೆಯಾಗಿರುವ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ, ಈ ಅನಿಶ್ಚಿತತೆಯ ಸಂದರ್ಭದಲ್ಲಿ ಮಾನಸಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಂಡು ಹೋಗಬೇಕು ಎಂಬುದರ ಬಗ್ಗೆ ಟಿಪ್ಸ್ ಅನ್ನು ಶೇರ್ ಮಾಡಲು ಟಿಕ್‍ಟಾಕ್ ಅನ್ನು ಬಳಕೆ ಮಾಡುತ್ತಿದೆ.
ಈ ಟಿಕ್‍ಟಾಕ್ ವಿಡಿಯೋಗಳಲ್ಲಿ ಭಾರತದಾದ್ಯಂತ ಇರುವ ಖ್ಯಾತ ಮಾನಸಿಕ ತಜ್ಞ ವೈದ್ಯರು ನಾಗರಿಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ದೈಹಿಕ ಕ್ಷೇಮವನ್ನು ಕಾಪಾಡಿಕೊಳ್ಳುವ ಬಗೆ ಹೇಗೆ, ಪ್ರೇರಣೆಯಿಂದ ದೈನಂದಿನ ಜೀವನ ಸಾಗಿಸುವುದು, ಆತಂಕವನ್ನು ದೂರ ಮಾಡುವುದು ಹೇಗೆ ಮತ್ತು ಧನಾತ್ಮಕವಾದ ರೀತಿಯಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಹತ್ತು ಹಲವಾರು ಬಗೆಯ ಟಿಪ್ಸ್ ನೀಡಿದ್ದಾರೆ.

ತಜ್ಞರು ನೀಡಿರುವ ಟಿಪ್ಸ್ ಇಲ್ಲಿವೆ:
Dr. Aleem Siddiquee, Direct Council Member, IPS
@indianpsychiatricsoc Physical Health for healthy Brain during CORONA CRISES#MENTALHEALTHMATTERS
♬ original sound - IndianPsychiatricSoc
Dr PD Garg, Zonal representative, North Zone, IPS,
@indianpsychiatricsoc SAY NO TO ADDICTION DURING CORONA CRISES#MENTALHEALTHMATTERS
♬ original sound - IndianPsychiatricSoc
Dr. Sujit Sarkhel, Zonal Representative, East Zone, IPS,
@indianpsychiatricsoc Managing Panic during CORONA CRISES #MENTALHEALTHMATTERS
♬ original sound - IndianPsychiatricSoc
Dr Shashi Rai, Direct Council Member, IPS
@indianpsychiatricsoc ♬ original sound - IndianPsychiatricSoc
hashtag #MentalHealthMatters ಬಳಸಿ ಸಾರ್ವಜನಿಕರು ತಮ್ಮ ಸಮಸ್ಯೆ, ಅನಿಸಿಕೆ, ಅಭಿಪ್ರಾಯ, ಗೊಂದಲಗಳನ್ನು ಹಂಚಿಕೊಳ್ಳಬಹುದು.












Click it and Unblock the Notifications