ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿರುಗಾಳಿಯ ಭೀಕರತೆಯಿಂದ ಹೊರ ಬಾರದ ಉತ್ತರ ಭಾರತ

By Nayana
|
Google Oneindia Kannada News

ನವದೆಹಲಿ, ಮೇ 08: ಉತ್ತರ ಪ್ರದೇಶ, ಹರಿಯಾಣ ಭಾಗಗಳಲ್ಲಿ ಬಿರಿಗಾಳಿಯ ರೌದ್ರಾವತಾರ ಇನ್ನೂ ಕಡಿಮೆಯಾಗಿಲ್ಲ, ಅದೆಷ್ಟು ಬಲಿ ಬೇಕೋ ತಿಳಿದಿಲ್ಲ. ಉತ್ತರಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಎದ್ದ ಧೂಳಿನ ಬಿರುಗಾಳಿಯಲ್ಲಿ ಒಟ್ಟು ಐದು ರಾಜ್ಯಗಳಲ್ಲಿ 124 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಸೋಮವಾರ ಮಣಿಪುರದಲ್ಲಿ ಮಹಿಳೆ ಹಾಗೂ 11 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಭಾರತೀಯ ಹವಾಮಾನ ಇಲಾಖೆ ಹೇಳುವ ಪ್ರಕಾರ, ಗಾಳಿಯ ವೇಗ ಗಂಟೆಗೆ 50-70 ಕಿಲೋಮೀಟರ್‌ಗಳಷ್ಟಿದೆ. ದೂಳು ಮಿಶ್ರಿತ ಬಿರುಗಾಳಿಯು ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಚಂಡೀಘಡ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಮ್‌ನಲ್ಲಿ ಸಾಕಷ್ಟು ಅನಾಹುತವನ್ನು ಸೃಷ್ಟಿಸಿದೆ.

ಇದು ಉತ್ತರ ಪ್ರದೇಶ, ಝಾರ್‌ಖಂಡ್, ಒಡಿಶಾ, ಕರ್ನಾಟಕ, ತಮಿಳುನಾಡು, ತೆಲಂಗಾಣದ ಹವಾಮಾನದ ಮೇಲೂ ಕೂಡ ದುಷ್ಪರಿಣಾಮ ಬೀರಲಿದೆ.ಅಲ್ಲಿ ವಿದ್ಯುತ್ ಕೂಡ ಕಡಿತಗೊಂಡಿದೆ. ಹರಿಯಾಣ ಸರ್ಕಾರವು ತನ್ನ ಅಧಿಕಾರಿಗಳ ರಜೆಯನ್ನು ರದ್ದು ಮಾಡಿದೆ. ಅಲ್ಲಿ ಇಂದು ಕೂಡ ಶಾಲಾ, ಕಾಲೇಜುಗಳಿಗೆ ರಜೆ ಮುಂದುವರೆದಿದೆ.

ಉತ್ತರ-ತತ್ತರ, ಇನ್ನೂ 3 ದಿನ ಮುಂದುವರೆಯಲಿದೆ ಬಿರುಗಾಳಿಯ ಆರ್ಭಟ ಉತ್ತರ-ತತ್ತರ, ಇನ್ನೂ 3 ದಿನ ಮುಂದುವರೆಯಲಿದೆ ಬಿರುಗಾಳಿಯ ಆರ್ಭಟ

ದೆಹಲಿ ಸರ್ಕಾರವು ಮಂಗಳವಾರ ಎಲ್ಲಾ ಸಂಜೆ ಕಾಲೇಜುಗಳಿಗೆ ರಜೆ ಘೋಷಿಸಿದೆ. ದೆಹಲಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ಸಂಜೆ ಕಾಲೇಜುಗಳು ನಡೆಯುತ್ತಿದ್ದವು.ಮಧ್ಯಾಹ್ನ 3ರಿಂದ 7ರವರೆಗೆ ಮಕ್ಕಳಿಗೆ ಮನೆಯಿಂದ ಹೊರ ಬಾರದಂತೆ ನಿರ್ದೇಶನ ನೀಡಲಾಗಿದೆ.

ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಭಯ ರಾಜ್ಯಗಳಲ್ಲಿ ಸಂಭವಿಸಿದ ಧೂಳಿನ ಬಿರುಗಾಳಿ ಹಾಗೂ ಸಾವಿನ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದು, ಕೇಂದ್ರ ಸರ್ಕಾರದಿಂದ ಎರಡೂ ರಾಜ್ಯಗಳಿಗೆ ಅಗತ್ಯವಿರುವ ಎಲ್ಲಾ ನೆರವುಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತ್ರಿಪುರದಲ್ಲಿ 1800 ಮನೆಗಳಿಗೆ ಹಾನಿಯಾಗಿದೆ. 2500 ಮಂದಿಗೆ ಸರ್ಕಾರಿ ಕಟ್ಟದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ. ತ್ರಿಪುರದ ಮುಖ್ಯಮಂತ್ರಿ ಹಾನಿಗೊಳಗಾದ ಮನೆಯ ಕುಟುಂಬಕ್ಕೆ ಮನೆ ಸರಿಪಡಿಸಿಕೊಳ್ಳಲು 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ತ್ರಿಪುದಲ್ಲಿ ಬಿರುಗಾಳಿಗೆ ಸಿಲುಕಿದ ಮನೆಯ ಸ್ಥಿತಿ ಹೀಗಿತ್ತು

ತ್ರಿಪುದಲ್ಲಿ ಬಿರುಗಾಳಿಗೆ ಸಿಲುಕಿದ ಮನೆಯ ಸ್ಥಿತಿ ಹೀಗಿತ್ತು

ತ್ರಿಪುರದ ಖೋವಾಯ್ ಜಿಲ್ಲೆಯಲ್ಲಿ ಸೋಮವಾರ ಉಂಟಾದ ಭಾರಿ ಮಳೆ, ಬಿರುಗಾಳಿಗೆ ಸಿಲುಕಿ ಹಾನಿಗೊಳಗಾದ ಮನೆಯನ್ನು ಬೇಸರದಿಂದ ವೀಕ್ಷಿಸುತ್ತಿರುವ ಮನೆಯ ಮಾಲೀಕ.

ಕಮಲ್‌ಘಾಟ್‌ನಲ್ಲಿ ಚಂಡಮಾರುತದ ತೀವ್ರತೆ ಹೀಗಿತ್ತು

ಕಮಲ್‌ಘಾಟ್‌ನಲ್ಲಿ ಚಂಡಮಾರುತದ ತೀವ್ರತೆ ಹೀಗಿತ್ತು

ಸತತ ಒಂದು ವಾರದಿಂದ ಉತ್ತರ ಭಾರತದೆಲ್ಲೆಡೆ ದೂಳು ಮಿಶ್ರಿತ ಬಿರುಗಾಳಿ ಮತ್ತು ಮಳೆಯಿಂದಾಗಿ ಅಲ್ಲಿನ ಸ್ಥಿತಿಗತಿ ಅಸ್ತವ್ಯಸ್ತವಾಗಿದೆ. ತ್ರಿಪುರ ಜಿಲ್ಲೆಯ ಕಮಲ್‌ಘಾಟ್‌ ಬಳಿ ಗಾಳಿಗೆ ಕಾರಿನ ಮೇಲೆ ಬಿದ್ದ ಮರದ ಬಳಿ ಬಾಲಕನೊಬ್ಬ ನಿಂತಿರುವ ದೃಶ್ಯ ಸೆರೆಯಾಗಿದೆ.

ನಟಿ ಸೋನಮ್‌ ಕಪೂರ್ ಮದುವೆ ಸಂಗೀತ ಸಂಜೆಯಲ್ಲಿ ಶ್ರೀದೇವಿ ಮಕ್ಕಳು

ನಟಿ ಸೋನಮ್‌ ಕಪೂರ್ ಮದುವೆ ಸಂಗೀತ ಸಂಜೆಯಲ್ಲಿ ಶ್ರೀದೇವಿ ಮಕ್ಕಳು

ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಬಾಲಿವುಡ್ ನಟಿ ಸೋನಮ್ ಕಪೂರ್ ಅರ ಮದುವೆ ನಿಮಿತ್ತ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಶ್ರೀದೇವಿ ಹಾಗೂ ಬೋನಿಕಪೂರ್ ಮಕ್ಕಳಾದ ಖುಷಿ, ಜಾನ್ವಿ ಕಾಣಿಸಿಕೊಂಡಿದ್ದು ಹೀಗೆ

ತ್ರಿಪುರಾದಲ್ಲಿ ಬಿರುಗಾಳಿಗೆ ಸಿಲುಕಿದ ಮನೆಯ ಸ್ಥಿತಿ ಹೇಗಿದೆ ನೋಡಿ

ತ್ರಿಪುರಾದಲ್ಲಿ ಬಿರುಗಾಳಿಗೆ ಸಿಲುಕಿದ ಮನೆಯ ಸ್ಥಿತಿ ಹೇಗಿದೆ ನೋಡಿ

ತ್ರಿಪುರ ಜಿಲ್ಲೆಯ ಖೋವಾಯ್‌ನಲ್ಲಿ ಸೋಮವಾರ ಬೀಸಿದ ಭಾರಿ ಬಿರುಗಾಳಿಗೆ ಮನೆ ಅಸ್ತವ್ಯಸ್ತಗೊಂಡಿದೆ. ಮಗುವೊಂದು ಮನೆಯ ಅವಶೇಷಗಳ ಮಧ್ಯೆ ತನ್ನ ಪುಸ್ತಕವನ್ನು ಆಯ್ದುಕೊಳ್ಳುತ್ತಿರುವ ದೃಶ್ಯ ಮನಕಲಕುವಂತಿತ್ತು.

ಕಚ್ಛಾತೈಲ ದರ ಏರಿಕೆ ವಿರೋಧಿಸಿ ರಾಹುಲ್ಗಾಂಧಿ ಸೈಕಲ್ ಪ್ರತಿಭಟನೆ

ಕಚ್ಛಾತೈಲ ದರ ಏರಿಕೆ ವಿರೋಧಿಸಿ ರಾಹುಲ್ಗಾಂಧಿ ಸೈಕಲ್ ಪ್ರತಿಭಟನೆ

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಚ್ಛಾತೈಲ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಮೂಲಕ ಪ್ರತಿಭಟನೆ ನಡೆಸಿದರು.

English summary
week after dust storms claimed 124 lives and left over 300 injured in five states, thunderstorms, accompanies by dusty winds, claimed two lives on Monday – a woman in Tripura and an 11-year-old girl in UP’s Mainpuri. Meanwhile, the Indian Meteorological Department (IMD) issued a warning of thunderstorm accompanied with squall and hail in large parts of northern and eastern India on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X