Manipur: ಗುಂಡಿನ ದಾಳಿ ಬಳಿಕ ಮೂವರು ಮಹಿಳೆಯರು, ಮೂವರು ಮಕ್ಕಳು ಕಾಣೆ
ಮಣಿಪುರದಲ್ಲಿ ಸೋಮವಾರ ನಡೆದ ಗುಂಡಿನ ಚಕಮಕಿ ಬಳಿಕ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಜಿರಿಬಾಮ್ ಜಿಲ್ಲೆಯಲ್ಲಿ ಗುಂಡಿನ ದಾಳಿ ಬಳಿಕ ಮೂವರು ಮಹಿಳೆಯರು ಮತ್ತು ಮಕ್ಕಳು ಕಾಣೆಯಾಗಿದ್ದು ಆತಂಕ ಮೂಡಿಸಿದೆ. ಸೋಮವಾರ ನಡೆದ ಎನ್‌ಕೌಂಟರ್ ನಲ್ಲಿ 10 ಉಗ್ರರನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಮಹಿಳೆಯರು ಮತ್ತು ಮಕ್ಕಳು ಕಾಣೆಯಾದ ಬಳಿಕ ನಾಗರಿಕರು ರೊಚ್ಚಿಗದ್ದಿದ್ದು, ಇಂಫಾಲ್‌ನಲ್ಲಿ 13 ಸಂಘಟನೆಗಳು ಜಂಟಿಯಾಗಿ ಬಂದ್ಗೆ ಕರೆ ನೀಡಿವೆ. ಮಂಗಳವಾರ ಸಂಜೆ 6 ಗಂಟೆಯಿಂದ 24 ಗಂಟೆಗಳ ಕಾಲ ಸಂಪೂರ್ಣ ಬಂದ್ ಆಚರಿಸಲಾಗುತ್ತಿದ್ದು, ಮೈತೇಯಿ ಸಮುದಾಯಕ್ಕೆ ಸೇರಿದ ನಾಪತ್ತೆಯಾಗಿರುವ ಆರು ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಸರ್ಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಿವೆ.

ಸೋಮವಾರ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಜಕುರಾಧೋರ್‌ನಲ್ಲಿರುವ ಬೊರೊಬೆಕ್ರಾ ಪೊಲೀಸ್ ಠಾಣೆ ಮತ್ತು ಹತ್ತಿರದ ಸಿಆರ್‌ಪಿಎಫ್ ಶಿಬಿರದ ಮೇಲೆ ಗುಂಡಿನ ದಾಳಿ ಮಾಡಿದ್ದರು. ಇದಕ್ಕುತ್ತರವಾಗಿ ಪೊಲೀಸರು ಮತ್ತು ಸಿಆರ್ ಪಿಫ್ ಸಿಬ್ಬಂದಿ ಪ್ರತಿದಾಳಿ ಮಾಡಿದ್ದು 10 ಉಗ್ರರನ್ನು ಹತ್ಯೆ ಮಾಡಿತ್ತು.
ಉಗ್ರರು ಆರ್‌ಪಿಜಿಗಳು ಮತ್ತು ಎಕೆ, ಐಎನ್‌ಎಸ್‌ಎಎಸ್ ಮತ್ತು ಎಸ್‌ಎಲ್‌ಆರ್‌ಗಳಂತಹ ಇತರ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. ದಾಳಿಯಲ್ಲಿ ಸಿಆರ್‌ಪಿಎಫ್ ಜವಾನ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅಸ್ಸಾಂಗೆ ಸ್ಥಳಾಂತರಿಸಲಾಗಿದೆ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
"ಘಟನೆಯಲ್ಲಿ 10 ಉಗ್ರರು ಸಾವನ್ನಪ್ಪಿದ್ದು, ಇಬ್ಬರು ವೃದ್ದರನ್ನು ಸುಟ್ಟು ಹಾಕಲಾಗಿದ್ದು ಮೂವರು ಮಹಿಳೆಯರು ಮತ್ತು ಮೂವರು ಅಪ್ರಾಪ್ತ ಮಕ್ಕಳು ಕಾಣೆಯಾಗಿದ್ದಾರೆ" ಎಂದು ಐಜಿಪಿ ದೃಢಪಡಿಸಿದ್ದು, ಕಾಣೆಯಾದವರನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ತಪಾಸಣೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ನಾವು ಮೊದಲು ಗುಂಡಿನ ದಾಳಿ ಮಾಡುವುದನ್ನು ತಪ್ಪಿಸುತ್ತೇವೆ. ಸಶಸ್ತ್ರ ಪಡೆಗಳಿಗೆ ಗುಂಡಿನ ದಾಳಿ ಮಾಡದೆ ಶರಣಾಗದಂತೆ ಎಚ್ಚರಿಕೆ ನೀಡುತ್ತೇವೆ. ಆದರೂ ಉಗ್ರರು ಗುಂಡಿನ ದಾಳಿ ನಡೆಸಿದಾಗ ನಾವು ಪ್ರತಿಯಾಗಿ ಗುಂಡು ಹಾರಿಸಬೇಕಾಗುತ್ತದೆ, ಅಸ್ಸಾಂ ರೈಫಲ್ಸ್, ಸಿಆರ್ ಪಿಎಫ್, ಪೊಲೀಸರನ್ನು ನಿಯೋಜಿಸಲಾಗಿದ್ದು ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ಮೃತ 10 ಮಂದಿಯನ್ನು ಸ್ವಯಂ ಸೇವಕರು ಅವರು ಉಗ್ರರಲ್ಲ ಎಂದು ಕೆಲವು ಕುಕಿ-ಜೋ ಸಂಘಟನೆಗಳ ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ ಮುಯುವಾ, ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು ಮತ್ತು ವ್ಯಕ್ತಿಗಳು ಧರಿಸಿದ್ದ ಉಡುಪುಗಳನ್ನು ಗಮನಿಸಿದಾಗ ಅವರು ಶಸ್ತ್ರಸಜ್ಜಿತ ಉಗ್ರಗಾಮಿಗಳು ಎಂದು ಹೇಳಬಹುದು ಎಂದು ಹೇಳಿದ್ದಾರೆ.












Click it and Unblock the Notifications