ಕಾಶ್ಮೀರ: ಭಾರತೀಯ ಸೇನೆಯಿಂದ 3 ಭಯೋತ್ಪಾದಕರ ಹತ್ಯೆ
ಅನಂತ್ ನಾಗ್, ಮಾರ್ಚ್ 12: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಭಯೋತ್ಪಾದಕರನ್ನು ಬಲಿಹಾಕಲಾಗಿದೆ.
ಅನಂತ್ ನಾಗ್ ಜಿಲ್ಲೆಯ ಹಕುರಾ ಎಂಬಲ್ಲಿ ಇಂದು(ಮಾ.12) ಬೆಳಗ್ಗಿನ ಜಾವ ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಬಲಿಯಾಗಿದ್ದು, ಅವರು ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವರೆಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಘಟನೆಯಲ್ಲಿ ಭಾರತಯ ಸೈನಿಕರಿಗೆ ಯಾವುದೇ ರೀತಿಯ ಹಾನಿಯಾದ ಕುರಿತು ವರದಿಯಾಗಿಲ್ಲ.
ಮಾರ್ಚ್ 1 ಮತ್ತು ಫೆ.27ರಂದು ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರು ಮೃತರಾಗಿದ್ದರು.












Click it and Unblock the Notifications