ಜಮ್ಮುನ ಅಖ್ನೂರ್ನಲ್ಲಿ ಉಗ್ರರ ದಾಳಿ, 3 ಕಾರ್ಮಿಕರ ಹತ್ಯೆ

Posted By:
Subscribe to Oneindia Kannada

ಅಖ್ನೂರ್ (ಜಮ್ಮು ಮತ್ತು ಕಾಶ್ಮೀರ), ಜನವರಿ 09 : ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (GREF) ಮೇಲೆ ಸೋಮವಾರ ಉಗ್ರರು ದಾಳಿ ನಡೆಸಿದ್ದು, 3 ಕಾರ್ಮಿಕರನ್ನು ಹತ್ಯೆಗೈದಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಾಂತ್ಯದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.

ರಾತ್ರಿ 1.15ರ ಸುಮಾರಿಗೆ ಪಟ್ಟಾಲ್ ದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಜಿಆರ್‌ಇಎಫ್ ನಲ್ಲಿ ದಾಳಿ ನಡೆದ ಸಮಯದಲ್ಲಿ 10 ಸೇನಾ ಸಿಬ್ಬಂದಿಗಳು ಮತ್ತು 8ರಿಂದ 10 ಕಾರ್ಮಿಕರಿದ್ದರು. ಅಖ್ನೂರ್ ಬಳಿಯ ಗಡಿ ನಿಯಂತ್ರಣಾ ರೇಖೆಯಿಂದ ಕೇವಲ 2 ಕಿ.ಮೀ. ದೂರದಲ್ಲಿ ಜಿಆರ್‌ಇಎಫ್ ಕಾರ್ಯ ನಿರ್ವಹಿಸುತ್ತಿದೆ.

Three labourers killed in Akhnoor in Jammu and Kashmir

ರಾಷ್ಟ್ರದ ಗಡಿಯಲ್ಲಿನ ರಸ್ತೆ ನಿರ್ಮಿಸುವ ಮತ್ತು ನಿಭಾಯಿಸುವ ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ಸಂಸ್ಥೆಯ ಅಂಗವಾಗಿ ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ ಕೆಲಸ ಮಾಡುತ್ತಿದೆ. ನಗ್ರೋಟಾದಲ್ಲಿ ನವೆಂಬರ್ 30ರಂದು ಸೇನಾ ನೆಲೆಯ ಮೇಲೆ ದಾಳಿ ನಡೆದಿತ್ತು.

ಸೋಮವಾರ ಬೆಳಗಿನ ಜಾವ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲ ಶಾಲಾಕಾಲೇಜುಗಳಿಗೆ ರಜಾ ಘೋಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Three labourers have been killed in Akhnoor in Jammu and Kashmir on Monday. The terrorists attacked General Reserve Engineer Force at 1.15 AM. After the attack high alert has been sounded in the area and schools, colleges have been closed.
Please Wait while comments are loading...