ಕಾಶ್ಮೀರದಲ್ಲಿ ಹಿಮಪಾತ: ಮೂರು ಸೈನಿಕರು ನಾಪತ್ತೆ

ಬಂಡಿಪೊರ, ಡಿಸೆಂಬರ್ 12: ಕಾಶ್ಮೀರದ ಬಂಡಿಪೊರದಲ್ಲಿ ಹಿಮಪಾತ ಸಂಭವಿಸಿದ್ದು, ಮೂವರು ಸೈನಿಕರು ನಾಪತ್ತೆಯಾಗಿದ್ದಾರೆ. ಮೂವರೂ ಹಿಮದೊಳಗೆ ಸಿಲುಕಿರಬಹುದು ಎಂದು ಶಂಕಿಸಲಾಗಿದೆ.

ಗಡಿನಿಯಂತ್ರಣ ರೇಖೆ ಬಳಿಯ ಬಾಗ್ಟೂರ್ ಗುರೇಜ್ ಸೆಕ್ಟರ್ ಬಳಿ ಹಿಮಪಾತ ಸಂಭವಿಸಿದೆ.

ಕಳೆದ ರಾತ್ರಿ(ಡಿ.11)ಯಿಂದ ಮೂವರು ಸೈನಿಕರು ನಾಪತ್ತೆಯಾಗಿದ್ದು, ಅವರ ಪತ್ತೆಕಾರ್ಯ ನಡೆಯುತ್ತಿದೆ.

Three jawans missing amid heavy snowfall in Kashmir

ಜಮ್ಮು ಕಾಶ್ಮೀರದ ರಾಜೌರಿ ಮತ್ತು ಶ್ರೀನಗರದಲ್ಲಿ ಹಿಮಮಳೆ ಆರಂಭವಾಗಿರುವ ಕಾರಣ ಇಲ್ಲಿನ ದಾರಿಯನ್ನು ಮುಚ್ಚಲಾಗಿದೆ. ವಾಹನ ಸಂಚಾರಕ್ಕೆ ತಡೆಯೊಡ್ಡಲಾಗಿದೆ. ಹಿಮಾಚಲ ಪ್ರದೇಶದ ಮನಾಲಿಯ ಸೊಲಾಂಗ್ ಕಣಿವೆಯಲ್ಲೂ ಹಿಮಮಳೆಯಾಗಿದೆ. ಇದೇ ವರ್ಷ ಜನವರಿಯಲ್ಲಿ ಸಂಭವಿಸಿದ್ಧ ಭೀಕರ ಹಿಮಪಾತಕ್ಕೆ 15 ಯೋಧರು ಹುತಾತ್ಮರಾಗಿದ್ದರು.

2016 ರ ಫೆಬ್ರವರಿಯಲ್ಲಿ ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ 30 ಅಡಿ ಆಳದ ಹಿಮದಡಿಯಲ್ಲಿ, -45 ಡಿಗ್ರಿ ಕೊರೆವ ಚಳಿಯಲ್ಲಿ ಆರು ದಿನಗಳ ಕಾಲ ಬದುಕಿದ್ದು, ನಂತರ ಬಹು ಅಂಗಾಂಗ ವೈಫಲ್ಯದಿಂದ ಫೆಬ್ರವರಿ 11 ರಂದು ದೆಹಲಿಯ ಆಸ್ಪತ್ರೆಯಲ್ಲಿ ಹುತಾತ್ಮರಾದ ಹುಬ್ಬಳ್ಳಿಯ ಲಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+