ಚತ್ತೀಸ್‌ಗಢ: 48 ಗಂಟೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 3 ಮಕ್ಕಳು ಸಾವು
ರಾಯ್‌ಪುರ, ಮೇ 29: ಒಟ್ಟು 48 ಗಂಟೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದ ಮೂವರು ಮಕ್ಕಳು ಮೃತಪಟ್ಟಿರುವ ಘಟನೆ ಚತ್ತೀಸ್‌ಗಢದಲ್ಲಿ ನಡೆದಿದೆ.
Recommended Video
ಒಂದು ವರ್ಷದೊಳಗಿನ ಎರಡು ಹೆಣ್ಣುಮಗು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಆದರೆ ಇವರೆಲ್ಲರೂ ಒಂದೇ ಕ್ವಾರಂಟೈನ್‌ನಲ್ಲಿರಲಿಲ್ಲ.
ಇಬ್ಬರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದೆ ನಾಲ್ಕು ತಿಂಗಳಿನ ಮಗು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ತಿಳಿದುಬಂದಿದೆ. ಕೊವಿಡ್ 19 ಪರೀಕ್ಷೆ ವರದಿ ಇನ್ನೇನು ಹೊರಬೀಳಬೇಕಿದೆ.

ಈ ಎಲ್ಲಾ ಮಕ್ಕಳು ವಲಸೆ ಕಾರ್ಮಿಕರ ಮಕ್ಕಳು ಎಂಬುದು ತಿಳಿದುಬಂದಿದೆ. ವೈದ್ಯರೇ ಒಂದೊಮ್ಮೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಆರೋಗ್ಯ ಸಚಿವ ಟಿಎಸ್ ಸಿಂಗ್ ಹೇಳಿದ್ದಾರೆ.
ಗುರುವಾರ ರಾತ್ರಿ ಮೃತಪಟ್ಟಿದ್ದ ಮಗುವಿನ ತಂದೆ ಮಹಾರಾಷ್ಟ್ರದ ಚಂದ್ರಾಪುರದಿಂದ ಮೇ 14ರಂದು ಮೂರು ವರ್ಷದ ಮಗ, ನಾಲ್ಕು ತಿಂಗಳ ಹೆಣ್ಣುಮಗುವಿನ ಜೊತೆಗೆ ಚತ್ತೀಸ್‌ಗಢಕ್ಕೆ ಬಂದಿದ್ದರು.
ಸ್ವಲ್ಪ ದಿನಗಳಲ್ಲೇ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 25 ರಂದು ಮಗುವಿನ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications