ದೂರವಾದ ಪ್ರಿಯಕರನ ಕೊಲ್ಲಲು ಆಕೆ ಸಿದ್ಧಪಡಿಸಿಕೊಂಡಿದ್ದು ನಾಡ ಬಾಂಬ್

ಹರ್ಯಾಣ, ಅಕ್ಟೋಬರ್ 12: ಬಾಂಬ್ ಅಂದರೆ ಭಯೋತ್ಪಾದಕರಷ್ಟೇ ಬಳಸಬೇಕು ಅಂತೇನೂ ಇಲ್ಲ. ಇಲ್ಲೊಂದು ವಿಚಿತ್ರ ಪ್ರಕರಣವಿದೆ. 35 ವರ್ಷದ ಮಹಿಳೆಯೊಬ್ಬಳು ತನ್ನ ಗೆಳೆಯನ ಮೇಲೆ ಬಾಂಬ್ ದಾಳಿ ನಡೆಸುವುದಕ್ಕೆ ಪ್ಲಾನ್ ಮಾಡಿದ್ದಳು. ಇದಕ್ಕಾಗಿ ತನ್ನ ಇನ್ನೊಬ್ಬ ಗೆಳೆಯನ ಸಹಕಾರ-ಸಹಾಯವನ್ನು ಕೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರತಿ-ಆಕೆಯ ಹಳೆ ಗೆಳೆಯ ಪ್ರದೀಪ್ ಬಾಂಬ್ ದಾಳಿ ನಡೆಸಲು ಸ್ಕೆಚ್ ಹಾಕಿದ್ದರು. ಈ ಬಗ್ಗೆ ಗೊತ್ತಾದ ಕೂಡಲೇ ಪೊಲಿಸರು ಇಬ್ಬರನ್ನೂ ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಯಿಬಿಟ್ಟಿರುವ ಈ ಆರೋಪಿಗಳು, ಮೂರು ಬಾಂಬ್ ಸಿದ್ಧಮಾಡಿಕೊಂಡಿದ್ದಿವಿ. ಅದನ್ನು ಗೆಳೆಯರ ಮನೆಯಲ್ಲಿ ಬಚ್ಚಿಟ್ಟಿದ್ವಿ ಎಂದು ಒಪ್ಪಿಕೊಂಡಿದ್ದಾರೆ.[ಆಕೆ ಸತ್ತ ಮೇಲೆ ಗೊತ್ತಾಗಿದ್ದು ಹತ್ತು ವರ್ಷದ ಗೃಹ ಬಂಧನದ ಕ್ರೌರ್ಯ]

Crime

ಶಂಷಾಬಾದ್ ಕಾಲೋನಿಯ ಮನೆಯಲ್ಲಿ ಪೊಲೀಸರು ಹುಡುಕಾಟ ನಡೆಸಿದಾಗ ಮೂರು ಬಾಂಬ್ ಪತ್ತೆಯಾಗಿದೆ. ಎಲ್ಲ ನಾಡ ಬಾಂಬುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಯಾವ ಗೆಳೆಯರ ಮನೆಯಲ್ಲಿ ಈ ಬಾಂಬುಗಳನ್ನು ಬಚ್ಚಿಟ್ಟಿದ್ದರೋ ಅವರಿಗೆ ಈ ಇಬ್ಬರ ಪ್ಲಾನ್ ಬಗ್ಗೆ ಗೊತ್ತಿರಲಿಲ್ಲ ಎಂದು ಪೊಲಿಸರು ತಿಳಿಸಿದ್ದಾರೆ.

ವಿಚಾರಣೆ ವೇಳೆ ತನ್ನ ವೈರತ್ವದ ಬಗ್ಗೆ ಆರತಿ ಬಾಯಿಬಿಟ್ಟಿದ್ದಾಳೆ. ಆಕೆ ತನ್ನ ಹಳೆ ಪ್ರಿಯತಮನ ವಿರುದ್ಧ ದ್ವೇಷ ತೀರಿಸಿಕೊಳ್ಳಲು ಹವಣಿಸಿದ್ದಳು. ಈಕೆಯ ಜತೆಗೆ ಇರುವುದಕ್ಕೋಸ್ಕರ ತನ್ನ ಹೆಂಡತಿ-ಮಕ್ಕಳನ್ನು ಆತ ಬಿಟ್ಟಿದ್ದ. ಆರು ವರ್ಷಗಳು ಜತೆಗಿದ್ದು, ಅ ನಂತರ ತನ್ನ ಹೆಂಡತಿ-ಮಕ್ಕಳ ಜತೆಗೆ ಇರುವುದಕ್ಕೆ ನಿರ್ಧರಿಸಿದ್ದ. ಆ ಕಾರಣಕ್ಕೆ ಬಾಂಬ್ ಹಾಕಿ, ಆತನನ್ನು ಕೊಲ್ಲಲು ಯೋಚಿಸಿದ್ದರು.[ಮಂಡ್ಯದಲ್ಲಿ ಅಣ್ಣನಿಂದ ಸಹೋದರಿಯ ಪ್ರಿಯತಮ ಕೊಲೆ]

ಪತ್ರಿಕೆಯೊಂದರ ವರದಿ ಪ್ರಕಾರ ಆರತಿ ಹಾಗೂ ಪ್ರದೀಪ್ ಸೇರಿ ಅಕ್ಟೋಬರ್ 3ರಂದು ಮತ್ತೊಬ್ಬನನ್ನು ಕೊಂದಿದ್ದಾರೆ. ಆತನ ಹೆಸರು ಬಾಬು ಲಾಲ್. ಆರತಿಯ ಪ್ರಿಯಕರ ಹಾಗೂ ಆತನ ಹೆಂಡತಿ ಮತ್ತೆ ಒಂದಾಗಲು ಬಾಬು ಲಾಲ್ ನೇ ಕಾರಣ ಎಂಬ ಸಿಟ್ಟಿತ್ತು. ಆ ಕಾರಣಕ್ಕೆ ಕತ್ತು ಸೀಳಿ ಆತನನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ಬಾಂಬುಗಳನ್ನು ಒಟ್ಟು ಮಾಡುವುದಕ್ಕೆ ಅವರಿಗೆ ವಸ್ತುಗಳು ಎಲ್ಲಿ ದೊರೆತವು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರದೀಪ್ ನ ಸ್ನೇಹಿತನೊಬ್ಬ ಪರವಾನಗಿ ಹೊಂದಿರುವ ಪಟಾಕಿ ತಯಾರಕ ಎಂಬುದು ಗೊತ್ತಾಗಿದೆ. ನಾಡ ಬಾಂಬ್ ಹೇಗೆ ಮಾಡುವುದು ಎಂದು ಪ್ರದೀಪ್ ಕಲಿತಿದ್ದಾನೆ. ಆದರೆ ಬಾಂಬ್ ತಯಾರಿಕೆಗೆ ವಸ್ತುಗಳು ಹೇಗೆ ದೊರೆತವು ಎಂದು ಗೊತ್ತಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+