ಜಿ20 ಶೃಂಗಸಭೆಗೆ ಬಂದಿರುವ ವಿವಿಧ ದೇಶಗಳ ನಾಯಕರಿಗೆ ಬಡಿಸುವ ಊಟದ ಮೆನು ಹೀಗಿದೆ
ನವದೆಹಲಿ, ಸೆಪ್ಟೆಂಬರ್ 8: ಜಿ20 ಶೃಂಗಸಭೆಗೆ ಆಗಮಿಸಿರುವ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಸೇರಿದಂತೆ ಹಲವು ಗಣ್ಯರಿಗೆ ವಿಶೇಷ ಖಾದ್ಯವನ್ನು ತಯಾರಿಸಲಾಗಿದೆ. ಅದರ ವಿವರ ಇಲ್ಲಿದೆ.
ಶನಿವಾರದಿಂದ ಆರಂಭವಾಗಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಹಲವು ವಿಶ್ವ ನಾಯಕರು ಶುಕ್ರವಾರ ನವದೆಹಲಿಗೆ ಆಗಮಿಸಿದ್ದಾರೆ. ಯುಎಸ್ ಅಧ್ಯಕ್ಷ ಜೋ ಬಿಡೆನ್, ಯುಕೆ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಈಗಾಗಲೇ ಬಂದಿಳಿದಿದ್ದಾರೆ. ನಾಳೆ ಶೃಂಗಸಭೆಯ ಔಪಚಾರಿಕ ಆರಂಭದ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಮತ್ತು ಮಾರಿಷಸ್‌ನ ತಮ್ಮ ಸಹವರ್ತಿಗಳು ಸೇರಿದಂತೆ ನಾಯಕರೊಂದಿಗೆ ದ್ವಿಪಕ್ಷೀಯ ಚರ್ಚೆಯಲ್ಲಿ ನಡೆಸಿದ್ದಾರೆ.

G20 ನಾಯಕರಿಗೆ ದೇಶದಾದ್ಯಂತದ ಪ್ರಸಿದ್ಧ ಭಕ್ಷ್ಯಗಳೊಂದಿಗೆ ಸೊಗಸಾದ ಆತಿಥ್ಯವನ್ನು ನೀಡಲಾಗುತ್ತದೆ. ಇಂದಿನ ಔತಣಕೂಟದಲ್ಲಿ ವಿಶ್ವ ನಾಯಕರು ಏನನ್ನು ತಿನ್ನುತ್ತಾರೆ ಎಂಬುದರ ಪಟ್ಟಿ ಇಲ್ಲಿದೆ.
1. ಸಲಾಡ್
ಟಾಸ್ಡ್ ಇಂಡಿಯನ್ ಗ್ರೀನ್ ಸಲಾಡ್
ಪಾಸ್ಟಾ ಮತ್ತು ಬೇಯಿಸಿದ ತರಕಾರಿ ಸಲಾಡ್
ಕಡಲೆ ಸುಂಡಲ್
2. ಸೂಪ್
ಹುರಿದ ಬಾದಾಮಿ ಮತ್ತು ತರಕಾರಿ ಸಾರು
3. ಸಸ್ಯಾಹಾರಿ ಮೇನ್ ಕೋರ್ಸ್
ಪನೀರ್ ಲಬಾಬ್ದಾರ್ (ಉತ್ತರ ಪ್ರದೇಶ ಖಾದ್ಯ)
ಆಲೂಗಡ್ಡೆ ಲಿಯೋನೇಸ್
ಸಬ್ಜ್ ಕೊರ್ಮಾ (ಆಂಧ್ರ ಪ್ರದೇಶದ ಭಕ್ಷ್ಯ)
ಕಾಜು ಮತರ್ ಮಖಾನಾ
ಅರಾಬಿಯಾಟಾ ಸಾಸ್‌ನಲ್ಲಿ ಪೆನ್ನೆ
4. ಲೆಂಟಿಲ್
ಜವರ್ ದಾಲ್ ತಡ್ಕಾ (ಉತ್ತರ ಪ್ರದೇಶ ಖಾದ್ಯ)
5. ಅನ್ನ
ಪಯಾಜ್ ಜೀರಾ ಕಿ ಪುಲಾವ್ (ಪಂಜಾಬಿ ಭಕ್ಷ್ಯ)
6. ಭಾರತೀಯ ರೋಟಿ
ತಂದೂರಿ ರೋಟಿ, ಬಟರ್ ನಾನ್, ಕುಲ್ಚಾ
7. ಇತರ ಖಾದ್ಯಗಳು
ಸೌತೆಕಾಯಿ ರೈತ
ಹುಣಸೆಹಣ್ಣು ಮತ್ತು ಖರ್ಜೂರದ ಚಟ್ನಿ
ಮಿಶ್ರ ಉಪ್ಪಿನಕಾಯಿ
ಸಾದಾ ಮೊಸರು
7. ಸಿಹಿತಿಂಡಿ
ಕುಟ್ಟು ಮಲ್ಪುವಾ (ಉತ್ತರ ಪ್ರದೇಶ ವಿಶೇಷ)
ಕೇಸರ್ ಪಿಸ್ತಾ ರಸಮಲೈ (ಒಡಿಶಾ ವಿಶೇಷ)
ವಾರ್ಮ್ ವಾಲ್ನಟ್ ಮತ್ತು ಶುಂಠಿ ಪುಡಿಂಗ್
ಸ್ಟ್ರಾಬೆರಿ ಐಸ್ ಕ್ರೀಮ್
ಬ್ಲಾಕ್ ಕರ್ರಂಟ್ ಐಸ್ ಕ್ರೀಮ್
ಎರಡು ದಿನಗಳ ಶೃಂಗಸಭೆಯು ವಿಶೇಷ ಖಾದ್ಯಗಳನ್ನು ಉಣಬಡಿಸುತ್ತವೆ. ಅದರ ಥೀಮ್ "ವಸುಧೈವ ಕುಟುಂಬಕಂ" ಎಂಬ ಸಂಸ್ಕೃತ ನುಡಿಗಟ್ಟುಗಳಿಂದ ಸ್ಫೂರ್ತಿ ಪಡೆದಿದೆ.












Click it and Unblock the Notifications