ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಗೆ ಸಿದ್ಧವಾಗಿ

By Srinath
|
Google Oneindia Kannada News

third-quarter-price-hike-biscuits-soaps-detergents-oil-to-cost-more
ಮುಂಬೈ, ನ.25: ಈಗಾಗಲೇ ದಿನೋಪಯೋಗಿ ವಸ್ತುಗಳ ಬೆಲೆಗಳು ಗಗನದಲ್ಲಿ ಮನೆ ಮಾಡಿದ್ದು, ಗ್ರಾಹಕ ನಿಜಕ್ಕೂ ಹೈರಾಣಗೊಂಡಿದ್ದಾನೆ. ಈ ಮಧ್ಯೆ, ಮತ್ತೊಂದು ಸುತ್ತು ಬೆಲೆಗಳಲ್ಲಿ ಏರಿಕೆಯಾಗಲಿವೆ. ಸೋ, ಮುಂದಿನ ಬಾರಿ ನೀವು ದಿನಸಿ ಅಂಗಡಿಯತ್ತ ಹೋದಾಗ ಹೆಚ್ಚು ಬೆಲೆ ತೆರಲು ಸಿದ್ಧವಾಗಿಯೇ ಹೋಗಿ.

ತಕ್ಷಣಕ್ಕೆ ಇದಕ್ಕೆ ಕಾರಣವಾಗಿರುವುದು ಹಣದುಬ್ಬರ. ರೂಪಾಯಿ ಮೌಲ್ಯ ಕುಸಿತದಿಂದಾಗಿ ಉತ್ಪನ್ನಗಳ ತಯಾರಿಕೆಯೇ ದುಬಾರಿಯಾಗುತ್ತಿದೆ. ದೊಡ್ಡ ದೊಡ್ಡ ಕಂಪನಿಗಳೇ ಇದರ ಹೊಡೆತಕ್ಕೆ ಸಿಲುಕಿವೆ. ಹಾಗಾಗಿ, ಬಿಸ್ಕತ್, ಸೋಪು, ಬಟ್ಟೆ ಸೋಪು, ಎಣ್ಣೆ ಇವೇ ಮುಂತಾದ ಗ್ರಾಹಕ ಉತ್ಪನ್ನಗಳ ಬೆಲೆಗಳು ತುಟ್ಟಿಯಾಗಲಿವೆ.

ಕೆಲವು ಕಂಪನಿಗಳು ಅಂದರೆ Close-Up, Lakme ತಯಾರಿಸುವ ಎಚ್ ಯುಎಲ್, Sensodyne ಉತ್ಪನ್ನಗಳ ಜಿಎಸ್ ಕೆ, ಕೋಲ್ಗೇಟ್, ಮ್ಯಾರಿಕೋ ಉತ್ಪನ್ನಗಳ Parachute ಮುಂತಾದವು ಇತ್ತೀಚೆಗೆ ಆಗಸ್ಟ್ -ಸೆಪ್ಟೆಂಬರಿನಲ್ಲಿ ಒಂದು ಸುತ್ತು ಬೆಲೆಯೇರಿಕೆ ಮಾಡಿದ್ದವು. ಈಗ ಈ ಕಂಪನಿಗಳೊಂದಿಗೆ ಇನ್ನಷ್ಟು ಕಂಪನಿಗಳು ಜತೆಗೂಡಲಿದ್ದು, ಸದ್ಯದಲ್ಲೇ ಭಾರಿ ಬೆಲೆ ಏರಿಕೆ ಲೆಕ್ಕಾಚಾರ ಹಾಕಿವೆ ಎಂದು ತಿಳೀದುಬಂದಿದೆ.

ಮೂರನೆಯ ತ್ರೈಮಾಸಿಕದಲ್ಲಿ: ಕಳೆದ ಬಾರಿ ಶೇ. 2 ರಿಂದ 17 ರಷ್ಟು ಬೆಲೆ ಏರಿಕೆಯಾಗಿದ್ದವು. ಈ ಬಾರಿಯೂ ಅದೇ ಪ್ರಮಾಣದಷ್ಟು ಬೆಲೆ ಏರಿಕೆ ನಿಶ್ಚಿತವೆನ್ನಲಾಗಿದೆ. ಮೂರನೆಯ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಫಲಿತಾಂಶಗಳು ಕಳಪೆಯಾಗಿದ್ದು, ರೂಪಾಯಿ ಮೌಲ್ಯ ಕುಸಿತವೇ ಇದಕ್ಕೆ ಕಾರಣವಾಗಿದೆ.

English summary
Third quarter price hike biscuits soaps detergents and oil to cost more. This is because the full impact of the rupee depreciation is going to be felt in the third quarter. As a result, prices of products such as biscuits, soaps, detergents, oil etc are likely to go up.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X